ETV Bharat / state

ಬಿಗ್​ಬಾಸ್ 11ರ ಸ್ಪರ್ಧಿಯ ಹಳೆಯ ಫೋಟೋ ಪೋಸ್ಟ್: ಟ್ರೋಲ್ ಪೇಜ್‍ ವಿರುದ್ಧ ರಜತ್ ಪತ್ನಿ ದೂರು - FIR ON TROLL PAGES

ಟ್ರೋಲ್ ಪೇಜ್​ಗಳ ವಿರುದ್ಧ ಬಿಗ್​ಬಾಸ್​ 11ರ ಸ್ಪರ್ಧಿ ರಜತ್ ಕಿಶನ್ ಅವರ ಪತ್ನಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಬಿಗ್​ಬಾಸ್ 11 ಸ್ಪರ್ಧಿ ರಜತ್
ಬಿಗ್​ಬಾಸ್ 11 ಸ್ಪರ್ಧಿ ರಜತ್ ((Photo: Bigg Boss Team, ANI))
author img

By ETV Bharat Karnataka Team

Published : Jan 20, 2025, 10:51 AM IST

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಅವರ ಪತ್ನಿ ಟ್ರೋಲ್ ಪೇಜ್‍ಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಫೋಟೋಗಳನ್ನ ಡಿಲೀಟ್ ಮಾಡಲು ಹಣ ಪಡೆದು ವಂಚಿಸಲಾಗಿದೆ ಎಂದು ರಜತ್ ಕಿಶನ್ ಅವರ ಪತ್ನಿ ಅಕ್ಷಿತಾ ನೀಡಿರುವ ದೂರಿನ ಅನ್ವಯ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ರಜತ್ ಕಿಶನ್ ಹಾಗೂ ಅವರ ಮಾಜಿ ಗೆಳತಿಯ ಕೆಲ ಹಳೆಯ ಫೋಟೋಗಳನ್ನ ಕೆಲ ಟ್ರೋಲ್ ಪೇಜ್‍ಗಳಲ್ಲಿ ಅಪ್ಲೋಡ್​​ ಮಾಡಲಾಗಿದೆ. ಅವುಗಳನ್ನ ಗಮನಿಸಿದ್ದ ರಜತ್ ಅವರ ಪತ್ನಿ, ಫೋಟೋಗಳನ್ನ ಡಿಲೀಟ್ ಮಾಡುವಂತೆ ಪೇಜ್‍ ಅಡ್ಮಿನ್‌ಗಳಿಗೆ ಮೆಸೇಜ್ ಮಾಡಿದ್ದಾರೆ. ಫೋಟೋ ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆಯಿಟ್ಟಾಗ 6,500 ರೂ ಹಣವನ್ನ ಕಳುಹಿಸಲಾಗಿದೆ. ಹಣ ಪಡೆದ ಬಳಿಕ ಬೇರೆ ಟ್ರೋಲ್ ಪೇಜ್‍ಗಳಲ್ಲಿ‌ ಮತ್ತೆ ಫೋಟೋಗಳನ್ನ ಅಪ್‌ಲೋಡ್ ಮಾಡಲಾಗುತ್ತಿದ್ದು ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ಅಕ್ಷಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಟ್ರೋಲ್ ಪೇಜ್‍ಗಳ ಕಾಟದಿಂದ ಬೇಸತ್ತ ಅಕ್ಷಿತಾ, ಅವರು ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ 10ಕ್ಕೂ ಹೆಚ್ಚು ಟ್ರೋಲ್ ಪೇಜ್‍ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಟ್ರೋಲ್ ಪೇಜ್‍ಗಳಲ್ಲಿನ ಫೋಟೋಗಳು ಡಿಆ್ಯಕ್ಟಿವೇಟ್ ಆಗಿದ್ದು, ಹಣ ಸುಲಿಗೆಗೈದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸೂಟ್​ಕೇಸ್​ನಲ್ಲಿದೆ ಸ್ಪರ್ಧಿಗಳ ಭವಿಷ್ಯ!; ಬಿಗ್​ ಬಾಸ್​​ನಲ್ಲಿ ಇಂದು ಒಬ್ಬರು ಎಲಿಮಿನೇಟ್​, ನಾಳೆ ಮತ್ತೊಬ್ಬರು!

ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣವೆಷ್ಟು? ಗೆಲುವು ಯಾರಿಗೆ? ಈವೆಂಟ್​ ಡೀಟೆಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.