ETV Bharat / state

ಶಿರೂರು ಗುಡ್ಡ ಕುಸಿತ: ಗೋವಾದಿಂದ ಬಂತು ಬೃಹತ್ ಬಾರ್ಜ್, ನಾಪತ್ತೆಯಾದವರ ಪತ್ತೆಗೆ ಮತ್ತೆ ಶೋಧ - Shiruru Hill Collapse Operation - SHIRURU HILL COLLAPSE OPERATION

ಶಿರೂರಿನ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರಿಗಾಗಿ ಮತ್ತೆ ಪತ್ತೆ ಕಾರ್ಯ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ತರಿಸಲಾಗಿದೆ.

ಶಿರೂರು ಬಳಿ ಕಾರ್ಯಾಚರಣೆಗೆ ಡ್ರೆಜ್ಜಿಂಗ್ ಮಷಿನ್
ಡ್ರೆಜ್ಜಿಂಗ್ ಮಷಿನ್ (ETV Bharat)
author img

By ETV Bharat Karnataka Team

Published : Sep 20, 2024, 8:15 AM IST

ಗೋವಾದಿಂದ ಬಂತು ಬೃಹತ್ ಬಾರ್ಜ್ (ETV Bharat)

ಕಾರವಾರ: ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಇದೀಗ ಎರಡು ತಿಂಗಳ ಬಳಿಕ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಕಾರ್ಯಾಚರಣೆಗೆ ಬಳಸಲು ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಕಾರವಾರ ಬಂದರಿಗೆ ಆಗಮಿಸಿದೆ.

ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಬೃಹತ್ ಗುಡ್ಡ ಕುಸಿದು 11 ಜನರು ಸಾವಿಗೀಡಾಗಿದ್ದರು. ಈ ಪೈಕಿ 8 ಮಂದಿಯ ಮೃತದೇಹ ಮಾತ್ರ ದೊರತಿತ್ತು. ಇನ್ನೂ ಮೂವರ ಮೃತದೇಹಕ್ಕಾಗಿ ಸಾಕಷ್ಟು ಶೋಧ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಶಿರೂರಿನ ಜಗನ್ನಾಥ್ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆಯ ಬಳಿಕ ಸುಮಾರು ಒಂದು ತಿಂಗಳವರೆಗೂ ಗಂಗಾವಳಿ ನದಿ ಹಾಗೂ ನದಿ ದಡದಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಅಲ್ಲದೇ ನದಿ ಹರಿವಿನ ವೇಗ ಕೂಡ ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಯನ್ನು ಕೈಬಿಡಲಾಗಿತ್ತು.

ಆದರೆ ಕೆಲ ದಿನಗಳ ಬಳಿಕ ಉಡುಪಿಯ ಈಶ್ವರ ಮಲ್ಪೆ ಅವರ ತಂಡ ಶೋಧ ನಡೆಸಿದಾಗ ಲಾರಿ ಹಾಗೂ ಟ್ಯಾಂಕರ್‌ನ ಅವಶೇಷಗಳು ಪತ್ತೆಯಾಗಿದ್ದವು. ಈ ಹಿಂದೆ ಡ್ರೆಜ್ಜಿಂಗ್ ಮಷಿನ್ ತರಿಸಿ ಕಾರ್ಯಾಚರಣೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಮತ್ತೆ ಮಳೆ ಜೋರಾಗಿ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಇದೀಗ ಮಳೆ ಕಡಿಮೆಯಾಗಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಪ್ರಯತ್ನದ ಫಲವಾಗಿ ಡ್ರೆಜ್ಜಿಂಗ್ ಮಷಿನ್ ಬಂದಿದೆ. ಆದರೆ, ಕಾರ್ಯಾಚರಣೆಗೆ ಗಾಳಿ ಹಾಗೂ ಸಮುದ್ರದ ಭರತ- ಇಳಿತ ಅಡ್ಡಿಯಾಗುತ್ತಿದ್ದು, ಗಂಗಾವಳಿ ಅಳಿವೆ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಷಿನ್ ಪ್ರವೇಶಕ್ಕೆ ಸಮುದ್ರ ಭರತವಾಗಬೇಕಿದೆ. ಆಗ ಮಾತ್ರ ಅಳಿವೆಯಿಂದ ನದಿಗೆ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಪ್ರವೇಶ ಮಾಡಲಿದೆ ಎಂದು ಡ್ರೆಜ್ಜಿಂಗ್ ಮಷಿನ್ ಸಿಬ್ಬಂದಿ ಮಾಹಿತಿ ನೀಡಿದರು.

ಇದೀಗ ನೀರು ಇಳಿಕೆಯಾಗಿರುವ ಕಾರಣ ಡ್ರೆಜ್ಜಿಂಗ್ ಮಷಿನ್ ಹೂಳಿನಲ್ಲೇ ಸಿಲುಕಿಕೊಳ್ಳುವ ಭೀತಿ ಇದೆ. ಅಲ್ಲದೆ ಗಂಗಾವಳಿ ನದಿಯ ಸೇತುವೆಯಡಿ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಫುಲ್ ಸೆಟಪ್ ಜೊತೆ ದಾಟಲು ಕೂಡ ಕಷ್ಟವಾಗಲಿದೆ. ಇದೇ ಕಾರಣಕ್ಕೆ ಬಾರ್ಜ್ ಮೇಲೆ ಡ್ರೆಜ್ಜಿಂಗ್ ಮಷಿನರಿಗಳನ್ನು ಬಿಡಿಸಿ ಆ ಬಳಿಕ ದಾಟಿಸುವ ಕೆಲಸ ಮಾಡಲಾಗುತ್ತದೆ. ಶಿರೂರಿಗೆ ಡ್ರೆಜ್ಜಿಂಗ್ ಮಷಿನ್ ತಲುಪಿದ ಬಳಿಕ ಕಾರ್ಯಾಚರಣೆ ಪ್ರಾರಂಭವಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡ್ರೆಜ್ಜಿಂಗ್ ಮಾಡಲು ಒಟ್ಟು 90 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.

ದುರಂತದಲ್ಲಿ ಗುಡ್ಡ ಕುಸಿತವಾಗಿದ್ದರಿಂದ ಅಪಾರ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಕುಸಿದಿದೆ. ನದಿಯಲ್ಲಿ ಕುಸಿದ ಮಣ್ಣಿನಡಿಯಲ್ಲಿ ಉಳಿದ ಮೃತದೇಹಗಳು, ಲಾರಿ ಸಿಲುಕಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೊಳಲು ಊದುತ್ತಿರುವಾಗಲೇ ರೋಗಿಗೆ ಯಶಸ್ವಿ ಮೆದುಳು ಆಪರೇಷನ್: ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ವೈದ್ಯರ ಅಪರೂಪದ ದಾಖಲೆ - Surgery while playing flute

ETV Bharat Logo

Copyright © 2025 Ushodaya Enterprises Pvt. Ltd., All Rights Reserved.