ETV Bharat / state

ರಾಜ್ಯದಲ್ಲಿ ಆಪರೇಷನ್ ಕಮಲ ಎಂಬ ಬಟನ್‌ ಇನ್ನೂ ಸಕ್ರಿಯವಾಗಿದೆ: ಸಚಿವ ಬೋಸರಾಜು - Operation Kamala is still on

author img

By ETV Bharat Karnataka Team

Published : Aug 29, 2024, 11:11 AM IST

ಬಿಜೆಪಿ ಮತ್ತು ಹೆಚ್​.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಇನ್ನೂ ಚಾಲ್ತಿಯಲ್ಲಿದೆ" ಎಂದು ಸಚಿವ ಎನ್.ಎಸ್. ಬೋಸರಾಜು ಆರೋಪಿಸಿದ್ದಾರೆ.

ಸಚಿವ ಎನ್.ಎಸ್. ಬೋಸರಾಜು
ಸಚಿವ ಎನ್.ಎಸ್. ಬೋಸರಾಜು (ETV Bharat)
ಸಚಿವ ಎನ್.ಎಸ್. ಬೋಸರಾಜು (ETV Bharath)

ರಾಯಚೂರು: "ರಾಜ್ಯದಲ್ಲಿ ಆಪರೇಷನ್ ಕಮಲ ಬಟನ್‌ ಇನ್ನೂ ಆನ್‌ ಇದೆ" ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಬುಧವಾರ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ರವಿ ಗಾಣಿಗ ಹೇಳಿಕೆ ವಿಚಾರಕ್ಕೆ ಪ್ರಕ್ರಿಯೆ ನೀಡಿದರು. "ಯಾರಿಗೆ ಆ ವಿಷಯ ಗೊತ್ತಿದೆಯೋ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದಲ್ಲಿ ಆಪರೇಷನ್ ಕಮಲ ಇನ್ನೂ ಚಾಲ್ತಿಯಲ್ಲಿದೆ. ಆಪರೇಷನ್ ಕಮಲದ ಬಗ್ಗೆ ನಮ್ಮ ಗಮನಕ್ಕೂ ಇದೆ. ಯಾರು ಯಾರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ, ಯಾವ ಶಾಸಕರು ಅದಕ್ಕೆ ಅವಕಾಶ ಕೊಟ್ಟಿಲ್ಲ. ಏನಾದರೂ ಮಾಡಿ ಸಿದ್ದರಾಮಯ್ಯಗೆ ಮಸಿ ಬಳೆದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.

ಆರೋಪಿ ದರ್ಶನ್​ ಸ್ಥಳಾಂತರದ ಕುರಿತು ಸಚಿವರ ಹೇಳಿಕೆ: "ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಬೆಳಕಿಗೆ ಬಂದಿರುವುದರಿಂದ ಜೈಲಿನ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ದರ್ಶನ್​​ ಆದರೂ ಅಷ್ಟೇ ಬೇರೆ ಯಾರೇ ಆದರೂ ಅಷ್ಟೇ, ಕೈದಿಗಳು ಕೈದಿಗಳೇ" ಎಂದರು. ಸಚಿವ ಜಮೀರ್ ಅಹ್ಮದ್​ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ದರ್ಶನ್​ ಅವರನ್ನು ಬಳ್ಳಾರಿಗೆ​ ಶಿಫ್ಟ್​​ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು "ಇದರಲ್ಲಿ ಯಾವುದೇ ಹುರುಳಿಲ್ಲ, ಪೊಲೀಸ್ ಇಲಾಖೆ ರಿಪೋರ್ಟ್ ಆಧಾರದಲ್ಲಿ ಈ ರೀತಿ ಶಿಫ್ಟ್ ಮಾಡಲಾಗಿದೆ. ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್​ಡಿಕೆ ವಿರುದ್ಧ ಗರಂ ಆದ ಸಚಿವರು: "ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಸೀರಿಯಸ್​ ಆಗಿ ತೆಗೆದುಕೊಳ್ಳಬೇಕಿಲ್ಲ. ಕುಮಾರಸ್ವಾಮಿ ಅವರದು ಹಿಟ್​ ಅಂಡ್​ ರನ್ ಕೇಸ್. ಹತ್ತಾರು ಸುಳ್ಳುಗಳನ್ನು ಹೇಳುತ್ತಾರೆ. ಅವರು ಕೇಂದ್ರ ಮಂತ್ರಿ, ಅದೇ ಗೌರವದಿಂದ ನಡೆದುಕೊಳ್ಳಬೇಕು. ತಂದೆ - ಮಗ ದ್ವೇಷದ ರಾಜಕೀಯ ಮಾಡುತ್ತಾರೆ. ಆರು ತಿಂಗಳಲ್ಲಿ ರಾಜ್ಯ ಸರ್ಕಾರವನ್ನು ತೆಗೆಯುತ್ತೇವೆ ಎಂದು ಅಮಿತ್​ ಶಾ, ಮೋದಿ ಅವರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಹೀಗಾಗಿ ಸರ್ಕಾರ ತೆಗೆಯಲು ಇಡಿ ಬಳಕೆಯಾಯ್ತು. ಶಾಸಕರ ಖರೀದಿ ಪ್ರಯತ್ನ ಮಾಡಿದರು. ಅವೆಲ್ಲಾ ಸಫಲ ಆಗದೇ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮಸಿ ಬಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರು, ಸಚಿವರು ಸಿದ್ದರಾಮಯ್ಯ ಪರ ಇದ್ದೇವೆ" ಎಂದು ಟಾಂಗ್​ ನೀಡಿದರು.

ಇನ್ನು ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಸಂಸ್ಥೆಗೆ 5 ಎಕರೆ ಜಮೀನು ಮಂಜೂರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಖರ್ಗೆ ಅವರು ಆಸ್ತಿ ಮಾಡಬೇಕಿದ್ದರೆ 50 ವರ್ಷದಲ್ಲಿ ಏನು ಬೇಕಿದ್ದರೂ ಮಾಡಬಹುದಿತ್ತು. ಈಗಾಗಲೇ ಆ ಬಗ್ಗೆ ಇಲಾಖೆ ಸಚಿವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸರ್ಕಾರದ ನಿಯಮದಂತೆ ವಿದ್ಯಾ ಸಂಸ್ಥೆಗೆ ಭೂಮಿ ಪಡೆದು ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರುಗಳಿಗೆ ಮಸಿ ಬಳೆಯಲು ಹೀಗೆ ಮಾಡಲಾಗುತ್ತಿದೆ. ಏನಾದರೂ ಆರೋಪ ಮಾಡಿ ಕಾಂಗ್ರೆಸ್​ ಪಕ್ಷವನ್ನು ಬಲಹೀನ ಮಾಡಬೇಕು. ಬಿಜೆಪಿಯವರಿಗೆ ಸರ್ಕಾರ ತೆಗೆಯಬೇಕು ಎಂಬ ಒಂದೇ ಒಂದು ಉದ್ದೇಶವಿದೆ ಎಂದು ಆರೋಪಿಸಿದರು. ಕುಮಾರಸ್ವಾಮಿ ಹಾಗೂ ಬಿಜೆಪಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಬೇರೆ ಬೇರೆ ವಿಚಾರಗಳನ್ನು ಇಟ್ಟುಕೊಂಡು ಜನರ ಮುಂದೆ ಸುಳ್ಳು ಹೇಳಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಸರ್ಕಾರವನ್ನು ನಿಷ್ಕ್ರಿಯಗೊಳಿಸುವ ಯತ್ನ ನಡೆಸಿದ್ದಾರೆ. ಇಂತಹ ನೂರು ಮಂದಿ ಬಂದರೂ ಸರ್ಕಾರಕ್ಕೆ ಏನು ಆಗಲ್ಲವೆಂದರು.

ಇದನ್ನೂ ಓದಿ: ಇಂದು 16ನೇ ಹಣಕಾಸು ಆಯೋಗದ ಸಭೆ: ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ ಎಂದ ಸಿಎಂ - Finance Commission Meeting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.