ETV Bharat / state

ಹೊರ ದೇಶಕ್ಕೆ ಈರುಳ್ಳಿ ರಫ್ತು ನಿಲ್ಲಿಸಿದ ಸರ್ಕಾರ.. ಕುಸಿದ ಈರುಳ್ಳಿ ಬೆಲೆ: ಕಂಗಾಲಾದ ಬೆಣ್ಣೆ ನಗರಿ ರೈತರು - ಕುಸಿದ ಈರುಳ್ಳಿ ಬೆಲೆ

ದಾವಣಗೆರೆಯಲ್ಲಿ ಈರುಳ್ಳಿ ದರ ಕುಸಿತವಾಗಿದೆ. ಇದರಿಂದ ಬೆಳೆ ಬೆಳೆದ ರೈತರು ನಷ್ಟಕ್ಕೀಡಾಗಿದ್ದಾರೆ.

ಈರುಳ್ಳಿ ರಫ್ತು
ಈರುಳ್ಳಿ ರಫ್ತು
author img

By ETV Bharat Karnataka Team

Published : Jan 31, 2024, 9:11 PM IST

ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಬಸವಲಿಂಗಪ್ಪ

ದಾವಣಗೆರೆ : ಒಂದು ಕಾಲದಲ್ಲಿ ಈರುಳ್ಳಿ ಗ್ರಾಹಕರ ಕಣ್ಣೀರನ್ನು ತರಿಸುವಷ್ಟು ಬೆಲೆ ಏರಿಕೆ ಕಂಡಿತ್ತು.‌ ಅದೆಷ್ಟೋ ರೈತರು ಈರುಳ್ಳಿ ಮಾರಾಟ ಮಾಡಿ ರಾತ್ರೋರಾತ್ರಿ ಶ್ರೀಮಂತರಾದ ಉದಾಹರಣೆ ಇದೆ. ದುರಂತ ಎಂದರೆ ಈರುಳ್ಳಿ ಬೆಲೆ ದಿಢೀರ್ ಅಂತ ಕುಸಿತ ಕಂಡಿದೆ. ಹೊರ ದೇಶಕ್ಕೆ ಈರುಳ್ಳಿ ರಫ್ತು ಮಾಡ್ತಿದ್ದ ಕೇಂದ್ರ ಸರ್ಕಾರ ರಫ್ತನ್ನ ಧಿಡೀರ್ ನಿಲ್ಲಿಸಿದ್ದರಿಂದ ಹಾಗೂ ಈರುಳ್ಳಿ ಫಸಲು ಅಧಿಕವಾಗಿರುವುದರಿಂದ ಬೆಲೆ ಕುಸಿದಿದೆ. ಇದರಿಂದ ಈರುಳ್ಳಿ ಮಾರಾಟ ಆಗದೇ ಬೆಣ್ಣೆ ನಗರಿ ರೈತರು ಕಂಗಾಲಾಗಿದ್ದಾರೆ.

ಹೆಚ್ಚು ಈರುಳ್ಳಿ ಬೆಳೆದಿದ್ದ ರೈತರು ದಾವಣಗೆರೆ ಎಪಿಎಂಸಿ ಮಾರ್ಕೆಟ್​ಗೆ ತಂದು ಮಾರಾಟ ಮಾಡದೇ ಬಿಟ್ಟು ಹೋಗಿರುವ ಉದಾಹರಣೆಗಳಿವೆ ಎಂದು ದಲ್ಲಾಳಿಗಳ ಸಂಘದ ಅಧ್ಯಕ್ಷರಾದ ಬಸವಲಿಂಗಪ್ಪ ಅವರು ತಿಳಿಸಿದ್ದಾರೆ. ಇಂದು ಒಂದೇ ದಿನ ಆರರಿಂದ ಏಳು ಸಾವಿರ ಚೀಲ ಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬಂದಿದ್ದು, ಅಚ್ಚರಿಗೆ ಕಾರಣವಾಗಿತ್ತು. ಇನ್ನು ಈ ಹಿಂದೆ ಕೆಜಿಗೆ 80 ರಿಂದ 100 ರೂ. ಗಡಿ ಮುಟ್ಟಿದ್ದ ಈರುಳ್ಳಿ ಬೆಲೆ ಧಿಡೀರ್​​​​ 03 ರಿಂದ 04 ರೂಪಾಯಿಗೆ ಇಳಿಕೆ ಕಂಡಿದ್ದರಿಂದ ಮಾರುಕಟ್ಟೆಗೆ ತಂದ ಈರುಳ್ಳಿಗೆ ಲಾರಿ ಬಾಡಿಗೆ ಸಿಕ್ಕರೆ ಸಾಕು ಎನ್ನುವ ಸ್ಥಿತಿ ರೈತರದ್ದಾಗಿತ್ತು. ಇನ್ನು ಕೆಲ ರೈತರು ದರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಾಯುತ್ತಾ ಕುಳಿತಿದ್ದಾರೆ.

ಈರುಳ್ಳಿ ಬೆಲೆ ಎಷ್ಟಿದೆ ಗೊತ್ತಾ?: ಚಿಕ್ಕ ಈರುಳ್ಳಿ ಒಂದು ಕ್ವಿಂಟಾಲ್​ಗೆ 200 ರೂಪಾಯಿ ಇದ್ದು, ದೊಡ್ಡ ಹಾಗೂ ಉತ್ತಮ ದಪ್ಪ ಈರುಳ್ಳಿಗೆ ಒಂದು ಕ್ವಿಂಟಾಲ್​ಗೆ 1000 ರಿಂದ 1100 ರೂ. ಬೆಲೆ ಇದೆ. ಮಧ್ಯಮ‌ ಗಾತ್ರದ ಈರುಳ್ಳಿ ಕ್ವಿಂಟಾಲ್​ಗೆ 700 ರಿಂದ 800ರೂ.
ದರ ಇರುವುದರಿಂದ ರೈತರು ತಂದ ಈರುಳ್ಳಿಯನ್ನ ಮಾರುಕಟ್ಟೆಯಲ್ಲೇ ಬಿಟ್ಟು ಹೋಗ್ತಿದ್ದಾರೆ. ಹೊರ ದೇಶಕ್ಕೆ ರಫ್ತು ನಿಲ್ಲಿಸಿದ ಬೆನ್ನಲ್ಲೇ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಹೀಗಾಗಿ ಬೆಳೆಗೆ ಹಾಕಿದ ಬಂಡವಾಳ ಬಂದರೆ ಸಾಕು ಎನ್ನುತ್ತಿದ್ದಾರೆ ಈರುಳ್ಳಿ ಬೆಳೆಗಾರರು. ರಾಜ್ಯದ ಬಹುತೇಕ ‌ಕಡೆ ಬರಗಾಲ ಇದ್ದರೂ ಈ ನಡುವೆ ಭಾರಿ ಪ್ರಮಾಣದಲ್ಲಿ ಈರುಳ್ಳಿ ಬಂದಿದೆ. ಬೇರೆ ಕಡೆ ರಫ್ತಾಗುವುದನ್ನ ನಿಲ್ಲಿಸಿದ ಸರ್ಕಾರದ ನೀತಿಯಿಂದ ರೈತರು ಬೇಸತ್ತು ಹಿಡಿಶಾಪ ಹಾಕ್ತಿದ್ದಾರೆ. ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಇದೇ ವೇಳೆ ರೈತರು ಆಗ್ರಹಿಸಿದ್ದಾರೆ.

ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಫ್ತು ನಿಲ್ಲಿಸಿದ ಸರ್ಕಾರ: ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷರಾದ ಬಸವಲಿಂಗಪ್ಪ ಅವರು ಈಟಿವಿಗೆ ಪ್ರತಿಕ್ರಿಯಿಸಿದ್ದು, 'ರೈತರು ಈ ವರ್ಷ ಬಹಳ ಈರುಳ್ಳಿ ಬೆಳೆದಿದ್ದರು. ಆದರೆ, ಈರುಳ್ಳಿ ಎಲ್ಲೂ ರಫ್ತು ಆಗ್ತಿಲ್ಲ. ಕೇಂದ್ರ ಸರ್ಕಾರ ರಫ್ತು ರದ್ದು ಮಾಡಿದೆ. ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಈರುಳ್ಳಿ ರಫ್ತಾಗುತ್ತಿತ್ತು. ಆದರೆ ಸರ್ಕಾರ ಈರುಳ್ಳಿ ರಫ್ತು ನಿಲ್ಲಿಸಿರುವುದರಿಂದ ತೊಂದರೆ ಆಗಿದೆ.

ರೈತರು ಹೇಳುವುದೇನು? : ''ದಾವಣಗೆರೆಯಲ್ಲಿ ಒಂದು ರೂಪಾಯಿಯಿಂದ ಹಿಡಿದು 700, 900, 1000 ವರೆಗೆ ಕ್ವಿಂಟಾಲ್​ಗೆ ಬೆಲೆ ಇದೆ. ನಾವು ರೈತರು ಮಾರುಕಟ್ಟೆಗೆ ತರಲು ಅದಕ್ಕಿಂತ ಹೆಚ್ಚು ಖರ್ಚು ಮಾಡುತ್ತೇವೆ. ಒಂದು ಎಕರೆಗೆ 60 ಸಾವಿರ ವ್ಯಯ ಮಾಡ್ಬೇಕಾಗುತ್ತೆ. ಒಂದು ಎಕರೆಯಲ್ಲಿ 60 ಸಾವಿರ ಖರ್ಚು ಮಾಡಿ ಬೆಳೆ ಬೆಳೆದು ಈರುಳ್ಳಿ ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೂ ಕ್ವಿಂಟಾಲ್​ಗೆ 30 ಸಾವಿರ ರೂಪಾಯಿಯೂ ಸಿಗ್ತಿಲ್ಲ. ನೂರು ಪಾಕೆಟ್ ಈರುಳ್ಳಿ ತಂದು ಮಾರಾಟ ಮಾಡಿದ್ದೇನೆ. ಆದರೆ ನನಗೆ ಸಿಕ್ಕಿರುವುದು ಕೇವಲ 45 ಸಾವಿರ ಮಾತ್ರ. ಬೆಳೆಯಲು ಖರ್ಚು ಮಾಡಿದ್ದು 60 ಸಾವಿರ ರೂಪಾಯಿ. ನನಗೆ ಉಳಿದದ್ದು 15 ಸಾವಿರ ರೂ ಮಾತ್ರ. ಕಷ್ಟಪಟ್ಟು ಈರುಳ್ಳಿ ಬೆಳೆದರೆ ಈ ರೀತಿ ಆಗಿದೆ'' ಎಂದು ರೈತ ರಾಘವೇಂದ್ರ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ನಿರ್ಧಾರ, ಈರುಳ್ಳಿ ಬೆಲೆಗೆ ಕಡಿವಾಣ ಹಾಕಲು ರಫ್ತು ನಿಲ್ಲಿಸಿದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.