ETV Bharat / state

ಉಡುಪಿ ಜಿಲ್ಲೆಯ ಮಾನವ ಸರಪಳಿಯಲ್ಲಿ ಒಂದು ಲಕ್ಷ ಜನ ಭಾಗಿ ನಿರೀಕ್ಷೆ: ಜಿಲ್ಲಾಧಿಕಾರಿ ವಿದ್ಯಾಕುಮಾರಿ - human chain program

author img

By ETV Bharat Karnataka Team

Published : Sep 12, 2024, 2:44 PM IST

ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಡಿಸಿ ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಜಿಲ್ಲಾಧಿಕಾರಿ ವಿದ್ಯಾಕುಮಾರಿ (ETV Bharat)
ಡಿಸಿ ವಿದ್ಯಾಕುಮಾರಿ ಅವರಿಂದ ಮಾಹಿತಿ (ETV Bharat)

ಉಡುಪಿ: ರಾಜ್ಯ ಸರಕಾರ ಸೆ.15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿರುವ ಮಾನವ ಸರಪಳಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು 'ಉತ್ತರದ ಶಿರೂರು ಟೋಲ್‌ಗೇಟ್‌ನಿಂದ ದಕ್ಷಿಣದ ಹೆಜಮಾಡಿ ಟೋಲ್‌ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸುಮಾರು 107ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನತೆಗೆ ತಲುಪಿಸುವ ಉದ್ದೇಶವಿದೆ' ಎಂದರು.

ಮಾನವ ಸರಪಳಿ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿಯಿಂದ ಸಂಪೂರ್ಣ ಮಾಹಿತಿ:

ಮಾನವ ಸರಪಳಿಯಲ್ಲಿ ಅಧಿಕಾರಿಗಳು ಭಾಗವಹಿಸುವರು: ಮಾನವ ಸರಪಳಿಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಮಟ್ಟದ, ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆ ಗಳ ಮುಖಂಡರು, ಸದಸ್ಯರು, ಜಿಲ್ಲೆಯ ಶಾಲಾ -ಕಾಲೇಜುಗಳ ಬೋಧಕ, ಬೋಧ ಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಹಕಾರಿ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಹಾಗೂ ಆಸಕ್ತ ಗಣ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಕ್ರಮ ಬೆಳಗ್ಗೆ 9:30ಕ್ಕೆ ಪ್ರಾರಂಭಗೊಳ್ಳಲಿದೆ. ಮೊದಲು ಸಂವಿಧಾನದ ಪೀಠಿಕೆ ಓದಲಾಗುವುದು. 10 ರಿಂದ 10:15ರವರೆಗೆ ಶಿರೂರಿನಿಂದ ಹೆಜಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚನೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಮೂಲಕ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯನ್ನು ಈ ಸರಪಳಿ ಸಂಪರ್ಕಿಸಲಿದೆ. ರಾಜ್ಯದ ಬೀದರ್‌ನಿಂದ ಪ್ರಾರಂಭಿಸಿ ಚಾಮರಾಜನಗರದವರೆಗೆ ಎಲ್ಲ ಜಿಲ್ಲೆಗಳಲ್ಲೂ ಈ ಸರಪಳಿ ರಚನೆಯಾಗಲಿದೆ.

ಜಿಲ್ಲಾಮಟ್ಟದ ಕಾರ್ಯಕ್ರಮ ಕಿನ್ನಿಮುಲ್ಕಿಯಲ್ಲಿರುವ ಸ್ವಾಗತಗೋಪುರದ ಬಳಿ ನಡೆಯಲಿದೆ. ಇದರಲ್ಲಿ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಿನ್ನಿಮುಲ್ಕಿಯಲ್ಲಿ ಸುಮಾರು 500ಮೀ. ಉದ್ದದ ಹಾಗೂ 3ಮೀ. ಅಗಲದ ಭಾರತ ಹಾಗೂ ಕರ್ನಾಟಕ ಧ್ವಜ ಪ್ರದರ್ಶನ ನಡೆಯಲಿದೆ. ಪ್ರಜಾಪ್ರಭುತ್ವದ ಮಹತ್ವ ಸಾರುವ ಬೃಹತ್ ಬ್ಯಾನರ್‌ನ್ನು ಈಗಾಗಲೇ ಅಲ್ಲಿ ಅಳವಡಿಸಲಾಗಿದೆ.

ಡ್ರೋನ್ ಚಿತ್ರೀಕರಣ: ಜಿಲ್ಲೆಯಲ್ಲಿ ಮರವಂತೆ, ಕುಂದಾಪುರ ಟೌನ್, ಕಿನ್ನಿಮುಲ್ಕಿ, ಉಚ್ಚಿಲ ಹಾಗೂ ಇತರ ಕಡೆಗಳಲ್ಲಿ ಕಾರ್ಯಕ್ರಮದ ಡ್ರೋನ್​ ಫೋಟೊಶೂಟ್ ಮಾಡಲಾಗುವುದು. ಸಂವಿಧಾನದ ಕುರಿತು ಪ್ಲೆಕಾರ್ಡ್ ಪ್ರದರ್ಶನವೂ ನಡೆಯಲಿದೆ. ಮಾನವ ಸರಪಳಿಯಲ್ಲಿ ಆಕರ್ಷಕ ಟ್ಯಾಬ್ಲೋ, ಯಕ್ಷಗಾನ ಸೇರಿದಂತೆ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಸಹ ಭಾಗವಹಿಸಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೊಂದಾಯಿಸಿ ಕೊಂಡವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಕಾರ್ಯಕ್ರಮ ದುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಪ್ರತಿ ಕಿ.ಮೀ.ಗೊಂದರಂತೆ ಒಟ್ಟು 12 ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ 107ಕಿ.ಮೀ. ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಸರಪಳಿಯ ಮೇಲ್ವಿಚಾರಣೆಗೆ ಪ್ರತಿ 100ಮೀಗೆ ಒಬ್ಬ ಸೆಕ್ಷನ್​ ಅಧಿಕಾರಿ, ಪ್ರತಿ ಒಂದು ಕಿ.ಮೀ. ಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿ ಹಾಗೂ ಪ್ರತಿ 5ಕಿ.ಮೀಗೆ ಒಬ್ಬ ಜಿಲ್ಲಾಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ.

ಸೆ.14ರಿಂದ ಅ.1ರವರೆಗೂ ಸ್ವಚ್ಛತಾ ಅಭಿಯಾನ: ಸ್ವಚ್ಛತಾ ಹೀ ಸೇವಾ ಪ್ರಾಕ್ಷಿಕ ಕೇಂದ್ರ ಹಾಗೂ ರಾಜ್ಯ ಸರಕಾದ ಸೂಚನೆಯಂತೆ ಸೆ.14ರಿಂದ ಅ.1ರವರೆಗೂ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನವು ಸ್ವಭಾವ್ ಸ್ವಚ್ಛತಾ ಸಂಸ್ಕಾರ್ ಸ್ವಚ್ಚತಾ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ, ಸ್ಪರ್ಧೆ, ವಾಕಥಾನ್, ಗಿಡ ನೆಡುವುದು ಇತ್ಯಾದಿ ನಡೆಯಲಿವೆ. ಸಫಾಯಿ ಮಿತ್ರಾ ಸುರಕ್ಷಾ ಶಿಬಿರಗಳು, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ, ರೈಲು ನಿಲ್ದಾಣ, ಜಲಮೂಲಗಳ ಸ್ವಚ್ಛತೆ ನಡೆಯಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಒಟ್ಟಾರೆ ಮಾಹಿತಿಯನ್ನು ತಿಳಿಸಿದರು.

ಇದನ್ನೂ ಓದಿ: ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ರಾಜ್ಯದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಾಣ - International Democracy Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.