ಹುಬ್ಬಳ್ಳಿ: ಮಳೆಗಾಲದ ನಿಮಿತ್ತ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಹಾಗೂ ಕರ್ನಾಟಕದ ನಯಾಗರಾ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೇವೆ ಆರಂಭಿಸಿದೆ. ಸಂಸ್ಥೆಯ ವಿಭಾಗಗಳ ವಿವಿಧ ಘಟಕಗಳಿಂದ ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ ಪ್ಯಾಕೇಜ್ ಟೂರ್ ಇರಲಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ: ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಜೋಗ್ಫಾಲ್ಸ್ಗೆ ಬೆಳಗ್ಗೆ 7:30ಕ್ಕೆ ರಾಜಹಂಸ ಹಾಗೂ 8:00 ಗಂಟೆಗೆ ಮಲ್ಟಿ ಆಕ್ಸೆಲ್ ವೋಲ್ವೋ ಸೇವೆ ಇರುತ್ತದೆ. ಜೋಗ್ಫಾಲ್ಸ್ ವೀಕ್ಷಿಸಿದ ಬಳಿಕ ಬಸ್ಗಳು ಕ್ರಮವಾಗಿ ರಾತ್ರಿ 09:30 ಮತ್ತು 9:00 ಗಂಟೆಗೆ ಹುಬ್ಬಳ್ಳಿಗೆ ಹಿಂತಿರುಗಲಿವೆ. ಮಾರ್ಗ ಮಧ್ಯದಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ:7760991682, 7760991674 ಗೆ ಸಂಪರ್ಕಿಸಬಹುದಾಗಿದೆ.
ಧಾರವಾಡ ವಿಭಾಗದಿಂದ ವೇಗದೂತ ಸಾರಿಗೆ: ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 07:30 ಗಂಟೆಗೆ ಹೊರಟು ದಾಂಡೇಲಿ-ಮೋಸಳೆ ಪಾರ್ಕ್, ಮೌಳಂಗಿ ಫಾಲ್ಸ್, ಕೊಳಗಿ ನೇಚರ್ ಪಾರ್ಕ್, ಉಳವಿ ಚನ್ನಬಸವೇಶ್ವರ ದೇವಸ್ಥಾನಗಳನ್ನು ವೀಕ್ಷಿಸಿ ಮರಳಿ ಸಂಜೆ 7:00 ಗಂಟೆಗೆ ಧಾರವಾಡಕ್ಕೆ ಹಿಂತಿರುಗಲಿದೆ.
ಧಾರವಾಡ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಗೋಕಾಕ್ ಫಾಲ್ಸ್ಗೆ ಬೆಳಗ್ಗೆ 07:30 ಗಂಟೆಗೆ ಹೊರಟು ನವಿಲುತೀರ್ಥ, ಸೊಗಲ ಕ್ಷೇತ್ರ, ಗೋಕಾಕ್ ಫಾಲ್ಸ್, ಹಿಡಕಲ್ ಡ್ಯಾಮ್ ವೀಕ್ಷಿಸಿ ಮರಳಿ ಸಂಜೆ 7:00 ಗಂಟೆಗೆ ಧಾರವಾಡಕ್ಕೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ: 7760991688, 7760991679, 7760982552 ಗೆ ಸಂಪರ್ಕಿಸಬಹುದಾಗಿದೆ.
ಚಿಕ್ಕೋಡಿ ವಿಭಾಗದಿಂದ ವೇಗದೂತ ಸಾರಿಗೆ: ಚಿಕ್ಕೋಡಿ ಬಸ್ ನಿಲ್ದಾಣದಿಂದ ಗೋಕಾಕ್ ಫಾಲ್ಸ್ಗೆ ಬೆಳಗ್ಗೆ 09:00 ಗಂಟೆಗೆ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ್ ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 6:00 ಗಂಟಗೆ ಚಿಕ್ಕೋಡಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991875 ಸಂಪರ್ಕಿಸಬಹುದಾಗಿದೆ.
ನಿಪ್ಪಾಣಿಯಿಂದ ಗೋಕಾಕ್ ಫಾಲ್ಸ್ಗೆ ನಿಪ್ಪಾಣಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 08:30 ಗಂಟೆಗೆ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ್ ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 6:00 ಗಂಟೆಗೆ ನಿಪ್ಪಾಣಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991879 ಸಂಪರ್ಕಿಸಬಹುದಾಗಿದೆ.
ಸಂಕೇಶ್ವರದಿಂದ ಗೋಕಾಕ್ ಫಾಲ್ಸ್ಗೆ ಬೆಳಿಗ್ಗೆ 9:30 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣದಿಂದ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ್ ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 6:00 ಗಂಟೆಗೆ ಸಂಕೇಶ್ವರಕ್ಕೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991877 ಸಂಪರ್ಕಿಸಬಹುದಾಗಿದೆ.
ಬೆಳಗಾವಿ ವಿಭಾಗದಿಂದ ವೇಗದೂತ ಸಾರಿಗೆ: ಬೆಳಗಾವಿಯಿಂದ ಗೋಕಾಕ್ ಫಾಲ್ಸ್ಗೆ ಬೆಳಗ್ಗೆ 09:00 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಹಿಡಕಲ್ ಡ್ಯಾಮ್, ಗೋಡಚಿನ ಮಲ್ಕಿ, ಗೋಕಾಕ್ ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 7:00 ಗಂಟೆಗೆ ಬೆಳಗಾವಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991625 ಗೆ ಸಂಪರ್ಕಿಸಬಹುದಾಗಿದೆ.
ಹಾವೇರಿ ವಿಭಾಗದಿಂದ ವೇಗದೂತ ಸಾರಿಗೆ: ಹಾವೇರಿಯಿಂದ ಜೋಗ್ಫಾಲ್ಸ್ಗೆ ಬೆಳಿಗ್ಗೆ 8:00 ಗಂಟೆಗೆ ಹಾವೇರಿ ಬಸ್ ನಿಲ್ದಾಣದಿಂದ ಹೊರಟು ಶಿರಸಿ, ಸಿದ್ದಾಪುರ ಮಾರ್ಗವಾಗಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನ ಪಡೆದುಕೊಂಡು ಜೋಗ್ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 7:30 ಗಂಟೆಗೆ ಹಾವೇರಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991925 ಗೆ ಸಂಪರ್ಕಿಸಬಹುದಾಗಿದೆ.
ರಾಣೇಬೆನ್ನೂರನಿಂದ ಜೋಗ್ಫಾಲ್ಸ್ಗೆ ಬೆಳಗ್ಗೆ 08:00 ಗಂಟೆಗೆ ರಾಣೇಬೆನ್ನೂರ್ ಬಸ್ ನಿಲ್ದಾಣದಿಂದ ಹೊರಟು ಹಿರೇಕೆರೂರು, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗವಾಗಿ ಜೋಗ್ಫಾಲ್ಸ್ ವೀಕ್ಷಿಸಿ ಮರಳಿ ಸಂಜೆ 7:30 ಗಂಟೆಗೆ ರಾಣೇಬೆನ್ನೂರಿಗೆ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ 7760991927 ಗೆ ಸಂಪರ್ಕಿಸಬಹುದಾಗಿದೆ.
ಈ ವಿಶೇಷ ಪ್ಯಾಕೇಜ್ನ ಮುಂಗಡ ಟಿಕೆಟ್ ಕಾಯ್ದಿರಿಸಲು www.ksrtc.in ವೆಬ್ಸೈಟ್ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದು. ಸಾರ್ವಜನಿಕರು ಈ ವಿಶೇಷ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜೋಗ ಜಲಪಾತದ ವೈಭವ ಸವಿಯಲು ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ - Special Bus For Jog Falls