ETV Bharat / state

ಲೋಕಸಭೆ ಚುನಾವಣೆ: ಮೊದಲ ಹಂತಕ್ಕೆ ಭರ್ಜರಿ ಮತಬೇಟೆ; 2ನೇ ಹಂತಕ್ಕೆ ಇಂದು ಅಧಿಸೂಚನೆ - Lok Sabha Election 2nd Phase - LOK SABHA ELECTION 2ND PHASE

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಶುಕ್ರವಾರ ಅಧಿಸೂಚನೆ ಹೊರಡಿಸಲಿದೆ. ಮೇ 7ರಂದು ಮತದಾನ ನಡೆಯಲಿದೆ.

SECOND PHASE ELECTION
SECOND PHASE ELECTION
author img

By ETV Bharat Karnataka Team

Published : Apr 11, 2024, 4:31 PM IST

Updated : Apr 12, 2024, 8:00 AM IST

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದ ಚುನಾವಣೆ ಏ.26ರಂದು ನಿಗದಿಯಾಗಿದೆ. ಈಗಾಗಲೇ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದಿದೆ. ಮತಬೇಟೆಯೂ ರಂಗೇರಿದೆ. ಇನ್ನುಳಿದ 14 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಇಂದು ಅಧಿಸೂಚನೆ ಹೊರಡಿಸಲಿದೆ. ರಾಜ್ಯದ ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದೆ.

ಎರಡನೇ ಹಂತಕ್ಕೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.19ರಂದು ಕಡೆಯ ದಿನ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಮೇ.7ರಂದು ಮತದಾನ ನಡೆಯಲಿದೆ.

ಮತದಾನದ ಹಂತಗಳು
ಮತದಾನದ ಹಂತಗಳು

ಇದೇ ಸಂದರ್ಭದಲ್ಲಿ ಯಾದಗರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ. ಶುಕ್ರವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ರಾಜಾವೆಂಕಟಪ್ಪ ನಾಯಕ್ ನಿಧನದಿಂದ ಉಪಚುನಾವಣೆ ನಡೆಯುತ್ತಿದೆ. ರಾಜಾವೆಂಕಟಪ್ಪ ನಾಯಕ್ ಪುತ್ರ ವೇಣು ವೆಂಕಟಪ್ಪನಾಯಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಮಾಜಿ ಸಚಿವ ರಾಜುಗೌಡ ನರಸಿಂಹನಾಯಕ್ ಕಣಕ್ಕಿಳಿದಿದ್ದಾರೆ.

2ನೇ ಹಂತ, 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಅಧಿಸೂಚನೆ
ಪ್ರಕ್ರಿಯೆಗಳುದಿನಾಂಕ
ನಾಮಪತ್ರ ಸಲ್ಲಿಕೆ ಆರಂಭಏ.12
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಏ.19
ನಾಮಪತ್ರ ಪರಿಶೀಲನೆಏ.20
ನಾಮಪತ್ರ ವಾಪಸ್ ಗಡುವುಏ.22
ಮತದಾನಮೇ 7

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳಿಗೆ ಲೋಕಸಭಾ ಚುನಾವಣೆಗೆ ನಿಗದಿಪಡಿಸಿರುವ ದಿನಾಂಕಗಳೇ ಅನ್ವಯ. 2ನೇ ಹಂತದಲ್ಲಿ ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2,88,08,182 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ ಪುರುಷರು 1,44,17,530, ಮಹಿಳೆಯರು 1,43,87,585, ತೃತೀಯ ಲಿಂಗಿಗಳು 3,067, ಸೇವಾ ಮತದಾರರು 11,160, ಯುವ ಮತದಾರರು 5,99,444, ದಿವ್ಯಾಂಗ ಮತದಾರರು 2,76,042, 85 ವರ್ಷ ಮೇಲ್ಪಟ್ಟವರು 3,40,856 ಹಾಗೂ 2,849 ಸಾಗರೋತ್ತರ ಮತದಾರರಿದ್ದಾರೆ.

14 ಲೋಕಸಭಾ ಕ್ಷೇತ್ರಗಳ ಮತದಾರರ ಮಾಹಿತಿ
ಒಟ್ಟು ಮತದಾರರ ಸಂಖ್ಯೆ2,88,08,182
ಪುರುಷರು1,44,17,530
ಮಹಿಳೆಯರು1,43,87,585
ತೃತೀಯ ಲಿಂಗಿಗಳು 3,067
ಸೇವಾ ಮತದಾರರು11,160
ಯುವ ಮತದಾರರು5,99,444
ದಿವ್ಯಾಂಗ ಮತದಾರರು2,76,042
85 ವರ್ಷ ಮೇಲ್ಪಟ್ಟವರು3,40,856
ಸಾಗರೋತ್ತರ ಮತದಾರರು 2,849

ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಕಣದಲ್ಲಿದ್ದಾರೆ. ಮತ್ತೊಂದೆಡೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ದಿಂಗಾಲೇಶ್ವರ ಸ್ವಾಮೀಜಿ ಕೂಡ ನಿರ್ಧರಿಸಿದ್ದಾರೆ.

ದಾವಣಗೆರೆಯಲ್ಲಿ ಸಚಿವ ಎಸ್.​ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್, ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮಲು, ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೀದರ್ ಕೇಂದ್ರ ಸಚಿವ ಭಗವಂತ್ ಕೂಬಾ ಕಣದಲ್ಲಿರುವ ಪ್ರಮುಖರು.

ಕಾಂಗ್ರೆಸ್‍ನಿಂದ ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಳಿಯ ರಾಧಾಕೃಷ್ಣನ್ ಕಲಬುರಗಿ ಕ್ಷೇತ್ರ, ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ, ರಾಮುಲು ವಿರುದ್ಧ ಶಾಸಕ ತುಕಾರಾಂ, ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್​ನಿಂದ ಸ್ಪರ್ಧಿಸುತ್ತಿದ್ದಾರೆ. ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.

ಇದನ್ನೂ ಓದಿ: ಮೊದಲ ಹಂತದ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳು; ನಾಳೆಯಿಂದ ಪ್ರಚಾರ ಭರಾಟೆ ಮತ್ತಷ್ಟು ಜೋರು - Lok Sabha Election

Last Updated : Apr 12, 2024, 8:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.