ETV Bharat / state

ಭರತ್​ ಬೊಮ್ಮಾಯಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್​ನಲ್ಲಿ ಯಾರಿಗೂ ಇಲ್ಲ: ಯತ್ನಾಳ್ - SHIGGAON BY ELECTION

ಶಿಗ್ಗಾಂವಿಗೆ ಮುಖ್ಯಮಂತ್ರಿಗಳು 10 ಸಲ ಬರಲಿ, ಉಪಮುಖ್ಯಮಂತ್ರಿ ಇಲ್ಲೇ ಮೊಕ್ಕಾಂ ಹೂಡಲಿ. ಭರತ್ ಬೊಮ್ಮಾಯಿ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಸನಗೌಡ ಪಾಟೀಲ್​ ಯತ್ನಾಳ್​
ಬಸನಗೌಡ ಪಾಟೀಲ್​ ಯತ್ನಾಳ್​ (ETV Bharat)
author img

By ETV Bharat Karnataka Team

Published : Nov 10, 2024, 6:32 PM IST

ಹಾವೇರಿ: ಯಾರು ಎಷ್ಟೇ ದುಡ್ಡು ಖರ್ಚು ಮಾಡಲಿ, ಶಿಗ್ಗಾಂವಿ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು 10 ಸಲ ಬರಲಿ, ಉಪಮುಖ್ಯಮಂತ್ರಿ ಇಲ್ಲೇ ಮೊಕ್ಕಾಂ ಹೂಡಲಿ. ಆದರೆ ಭರತ್ ಬೊಮ್ಮಾಯಿ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿಶ್ವಾಸ ವ್ಯಕ್ತಪಡಿಸಿದರು.

ಶಿಗ್ಗಾಂವಿ ತಾಲೂಕಿನ ಮಂತ್ರೋಡಿಯಲ್ಲಿ ಇಂದು ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭರತ್​ ಬೊಮ್ಮಾಯಿ ಅವರನ್ನು ಸೋಲಿಸುವ ಶಕ್ತಿ ಕಾಂಗ್ರೆಸ್​ನಲ್ಲಿ ಯಾರಿಗೂ ಇಲ್ಲ. ಭರತ್​ ಬೊಮ್ಮಾಯಿಯೇ ನಮ್ಮ ಎಂಎಲ್​ಎ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್​ (ETV Bharat)

ರೈತರು ಮತ್ತು ಜನರಿಗೆ ವಕ್ಫ್​ ಭಯ ಇದೆ; ವಕ್ಫ್​ ಕರಾಳ ಛಾಯೆ ಸವಣೂರು ತಾಲೂಕಿನ ಮೇಲೆ ಬಿದ್ದಿದೆ. ಕಾಂಗ್ರೆಸ್​ಗೆ ವೋಟ್​ ಹಾಕಿದರೆ ಇದ್ದ ಆಸ್ತಿಯನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಇಲ್ಲಿನ ರೈತರು ಮತ್ತು ಜನರಲ್ಲಿ ಕಾಡುತ್ತಿದೆ. ದೇಶಾದ್ಯಂತ ವಕ್ಫ್​ ಬಳಿ ಒಂಬತ್ತುವರೆ ಲಕ್ಷ ಎಕರೆ ಜಮೀನು ಇದೆ. ಭಾರತದಲ್ಲಿ ಪಾಕಿಸ್ತಾನ ನಿರ್ಮಾಣವಾಗಿದೆ. ಅವರು ಭಾರತವನ್ನೇ ನಮ್ಮದು ಎನ್ನುತ್ತಾರೆ. ಪಾರ್ಲಿಮೆಂಟ್​, ವಿಧಾನಸೌಧ ನಮ್ಮದು ಅಂದ್ರು, ಈಗ ಬೆಂಗಳೂರು ಮೆಜೆಸ್ಟಿಕ್​ ನಮ್ಮದು ಅಂತಿದ್ದಾರೆ ಎಂದು ವಕ್ಫ್​ ವಿರುದ್ಧ ಕಿಡಿಕಾರಿದರು.

ಶಿಗ್ಗಾಂವಿಯಲ್ಲಿ ಬೊಮ್ಮಾಯಿ vs ಕಾಂಗ್ರೆಸ್​: ಶಿಗ್ಗಾಂವಿ ಕ್ಷೇತ್ರದಲ್ಲಿ ಈ ಬಾರಿಯ ಎಲೆಕ್ಷನ್​ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ನಡೀತಿದೆ. ಸಮುದಾಯವಾರು ಶಾಸಕರು ಹಣ ಹಂಚುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಉಪ ಚುನಾವಣೆ ಕಾಂಗ್ರೆಸ್​ ವರ್ಸಸ್ ಬಸವರಾಜ ಬೊಮ್ಮಾಯಿ ಮಧ್ಯೆ ಎಂದರು. ಸರ್ಕಾರದಿಂದ ಲೂಟಿ ಮಾಡಿದ ಹಣವನ್ನು ಇಲ್ಲಿ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಾಂಗ್ರೆಸ್​ ಮಧ್ಯೆ ನೇರ ಪೈಪೋಟಿ; ಈ ಹಿಂದೆ ಬಸವರಾಜ ಬೊಮ್ಮಾಯಿ ಪ್ರತಿನಿಧಿಸಿದ್ದ ಕ್ಷೇತ್ರ ಶಿಗ್ಗಾಂವಿ. ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದ ಈ ಕ್ಷೇತ್ರಕ್ಕೆ ಉಪಚುನಾವಣೆ ಬಂದಿದೆ. ನವೆಂಬರ್​ 13 ರಂದು ಮತದಾನ ನಡೆಯಲಿದ್ದು, ಎನ್​ಡಿಎ ಅಭ್ಯರ್ಥಿಯಾಗಿ ಭರತ್​ ಬೊಮ್ಮಾಯಿ ಅಖಾಡದಲ್ಲಿದ್ದಾರೆ.

ಕಾಂಗ್ರೆಸ್​ನಿಂದಲೂ ಗ್ಯಾರಂಟಿ ಪೈಪೋಟಿ; ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್​ ಸರ್ಕಾರ, ಯಾಸೀರ್​ ಖಾನ್​ ಪಠಾಣ್​ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಶಾಸಕರು, ಸಚಿವರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೂಡ ನಡೆಸಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಮುದಾಯವಾರು ಹಣ ಹಂಚಲು ಕಾಂಗ್ರೆಸ್ ಶಾಸಕರ ನಡುವೆ ಪೈಪೋಟಿ ಶುರುವಾಗಿದೆ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.