ETV Bharat / state

ನಾನು ತಪ್ಪು ಮಾಡಿದ್ದರೆ ಸುದೀರ್ಘ ರಾಜಕಾರಣ ಮಾಡಲಾಗುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಐದು ವರ್ಷಗಳ ಕಾಲ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ. ಜನರ ಆಶೀರ್ವಾದ ಸರ್ಕಾರದ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

siddaramaiah
ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Oct 3, 2024, 12:00 PM IST

ಮೈಸೂರು: ''ಜನರ ಆಶೀರ್ವಾದ ಸರ್ಕಾರದ ಮೇಲೆ, ನನ್ನ ಮೇಲೆ ಇರುವವರೆಗೂ ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿಯವರೆಗೆ ಇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುದೀರ್ಘ ರಾಜಕಾರಣ ಮಾಡಲು‌ ಆಗುತ್ತಿರಲಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಸರಾ ಉದ್ಘಾಟನೆ ಸಮಾರಂಭದಲ್ಲಿ ಭಾಷಣ ಮಾಡಿದ ಸಿಎಂ, ''ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ. ಹಂಪನಾ ಮತ್ತು ಕಮಲಾ ಹಂಪನಾ ಜೋಡಿ ಮಾದರಿಯಾದ ಜೋಡಿ. ಕನ್ನಡ ಸಾಹಿತ್ಯ ಲೋಕಕ್ಕೆ ಹಂಪನಾ ಕೊಡುಗೆ ಅಪಾರವಾದುದು. ಕರ್ನಾಟಕ ಕಂಡಂತಹ ಅಪರೂಪದ ಸಾಹಿತಿ ಅವರು'' ಎಂದು ತಿಳಿಸಿದರು.

ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ (ETV Bharat)

ಚಾಮುಂಡಿ ಆಶೀರ್ವಾದವಿದೆ: ''ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಬೀಳಿಸುವ ಕೆಲಸ ತಪ್ಪು ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವ ಪೂರ್ಣವಾದದ್ದು. ಐದು ವರ್ಷ ಕಾಲ ಅಭಿವೃದ್ಧಿ ಮಾಡಿಯೇ ಮಾಡುತ್ತೇವೆ. ದೇವರಾಜ ಅರಸು ಬಿಟ್ಟರೆ ನಂತರ ಐದು ವರ್ಷ ಸರ್ಕಾರ ಮಾಡಿದ್ದು, ಈ ಸಿದ್ದರಾಮಯ್ಯ ಮಾತ್ರ. ತಾಯಿ ಚಾಮುಂಡಿ ಆಶೀರ್ವಾದ ನನ್ನ ಮೇಲೆ ಇದೆ'' ಎಂದರು.

9 ಚುನಾವಣೆ ಗೆದ್ದಿದ್ದೇನೆ: ''ಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರೂ ಸತ್ಯದ ಮಾತು ಹೇಳಿದ್ದಾರೆ. ಸತ್ಯ ಮೇವ ಜಯತೇ. ಸತ್ಯಕ್ಕೆ ಯಾವಾಗಲೂ ಜಯ ಅಂತ. ಜನರ ಆಶೀರ್ವಾದ ಸರ್ಕಾರದ ಮೇಲೆ, ನನ್ನ ಮೇಲೆ ಇರುವವರೆಗೂ ನನ್ನ ಯಾರು ಏನೂ ಮಾಡಲು ಆಗಲ್ಲ. ಜಿಟಿಡಿಯೆ ನನ್ನನ್ನು ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯ್ಯಾರೆ ಮಾಡಿಕೊಂಡ ಸೋಲು. ನಾನು 9 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿಯವರೆಗೆ ಇದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು‌ ಆಗುತ್ತಿರಲಿಲ್ಲ'' ಎಂದು ಸಿದ್ದರಾಮಯ್ಯ ಹೇಳಿದರು.

''ಜಿ.ಟಿ.ದೇವೇಗೌಡ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ. ಅವರಿಗೆ ನನ್ನ ಧನ್ಯವಾದಗಳು. ಚಾಮುಂಡಿ ದೇವಿ ಕೊಟ್ಟ ಶಕ್ತಿಯಿಂದ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಚಾಮುಂಡೇಶ್ವರಿ ವರಪುತ್ರ, ತಾಕತ್ತಿದ್ದರೆ ಎಫ್‌ಐಆರ್ ಆದವರೆಲ್ಲ ರಾಜೀನಾಮೆ ಕೊಡಿ: ಜಿ.ಟಿ.ದೇವೇಗೌಡ ಸವಾಲು - G T Devegowda Praised Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.