ETV Bharat / state

ಮೈಸೂರು ಅರಮನೆ ವೀಕ್ಷಿಸಲು ಕಾಯಬೇಕಿಲ್ಲ: ಇನ್ಮುಂದೆ ವಾಟ್ಸ್​​ಆ್ಯಪ್ ಮೂಲಕವೇ ಟಿಕೆಟ್ ಬುಕ್ ಮಾಡಿ - Mysuru Palace

author img

By ETV Bharat Karnataka Team

Published : Aug 14, 2024, 12:14 PM IST

ಮೈಸೂರು ಅರಮನೆಗೆ ಭೇಟಿ ನೀಡಲು ಟಿಕೆಟ್‌ಗಾಗಿ ಕಾಯುವ ಅಗತ್ಯವಿಲ್ಲ. ಇದೀಗ ನೀವು ವಾಟ್ಸ್​​ಆ್ಯಪ್ ಮೂಲಕವೇ ಟಿಕೆಟ್ ಬುಕ್ ಮಾಡಬಹುದು.

Mysuru  book tickets through WhatsApp  book tickets  Mysuru Palace
ಮೈಸೂರು ಅರಮನೆ ವೀಕ್ಷಿಸಲು ಟಿಕೆಟ್​ಗಾಗಿ ಕಾಯಬೇಕಿಲ್ಲ: ಇದೀಗ ನೀವು ವಾಟ್ಸ್​​ಆ್ಯಪ್ ಮೂಲಕವೇ ಟಿಕೆಟ್ ಬುಕ್ ಮಾಡಿ (ETV Bharat)

ಮೈಸೂರು: ಪ್ರವಾಸಿಗರು ಹಾಗೂ ಸ್ಥಳೀಯರು ಅರಮನೆ ವೀಕ್ಷಣೆಗೆ ಬಂದಾಗ, ಗಂಟೆಗಂಟೆ ಕಾಯಬೇಕಿಲ್ಲ. ಯಾಕೆಂದ್ರೆ ವಾಟ್ಸ್​​ಆ್ಯಪ್ ಮೂಲಕವೇ ಟಿಕೆಟ್​ ಮಾಡಲು ನಿಮಗೆ ಅವಕಾಶ ನೀಡಲಾಗಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವತಿಯಿಂದ ಮೊಬೈಲ್ ಒನ್ ಯೋಜನೆಯ ಮೂಲಕ ಮೈಸೂರು ಅರಮನೆ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿದೆ. ಪ್ರವಾಸಿಗರ ಶ್ರಮವನ್ನು ಉಳಿಸಲು ಹಾಗೂ ಅತಿ ಸುಲಭವಾಗಿ ಮೈಸೂರು ಅರಮನೆ ವೀಕ್ಷಿಸಲು ಮೊಬೈಲ್ ಮೂಲಕ ಸುಲಭವಾಗಿ ಟಿಕೆಟ್ ಖರೀದಿಸಬಹುದು. ವಾಟ್ಸ್​​ಆ್ಯಪ್ ಟಿಕೆಟಿಂಗ್ ತಂತ್ರಾಂಶವನ್ನು ಸರ್ಕಾರದ ಇಡಿಸಿಎಸ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿದೆ.

ಸಾರ್ವಜನಿಕರು ಈ ಯೋಜನೆಯ ಸೌಲಭ್ಯವನ್ನು ಇಂದಿನಿಂದ (ಆಗಸ್ಟ್ 14) ಪಡೆಯಬಹುದಾಗಿದೆ. ವಾಟ್ಸ್​​ಆ್ಯಪ್ ಮೊಬೈಲ್​ ಸಂಖ್ಯೆ: 8884160088 ಗೆ "Hi" ಎಂದು ಟೈಪ್ ಮಾಡುವ ಮೂಲಕ ಅಥವಾ ಮೈಸೂರು ಅರಮನೆ ಮಂಡಳಿಯ ವೆಬ್‌ಸೈಟ್: https://mysorepalace.karnataka.gov.in ನಲ್ಲಿ ನೀಡಿರುವ ವಾಟ್ಸ್​​ಆ್ಯಪ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ವಾಟ್ಸ್​​ಆ್ಯಪ್ ಮೂಲಕ ಟಿಕೆಟ್​ ಅನ್ನು ಖರೀದಿಸಬಹುದಾಗಿದೆ. ಟಿಕೆಟ್ ಅನ್ನು ಖರೀದಿಸಿದ ದಿನದಿಂದ 5 ದಿನಗಳವರೆಗೆ ಟಿಕೆಟ್ ವ್ಯಾಲಿಡಿಟಿ ಇದ್ದು, ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಅರಮನೆಯನ್ನು ವೀಕ್ಷಿಸಬಹುದು ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆ.21ಕ್ಕೆ ಗಜಪಯಣ: ಅಭಿಮನ್ಯು ಸೇರಿ 14 ಆನೆಗಳು ಈ ಬಾರಿಯ ದಸರಾದಲ್ಲಿ ಭಾಗಿ - Mysuru Dasara 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.