ETV Bharat / state

ಮಂಗಳೂರಿನ ಪಿಲಿಕುಳ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ: ಯಾರೆಲ್ಲಾ ಬಂದಿದ್ದಾರೆ ನೋಡಿ!

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳನ್ನು ತರಲಾಗಿದೆ.

Gharial crocodile ,Wolf, Silver Pheasant
ಎರಡು ಘರಿಯಲ್ ಮೊಸಳೆ, ತೋಳ, ಸಿಲ್ವರ್ ಫೆಸೆಂಟ್ (ETV Bharat)
author img

By ETV Bharat Karnataka Team

Published : Nov 6, 2024, 10:51 AM IST

ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಏಷ್ಯಾಟಿಕ್ ಗಂಡು ಸಿಂಹ ಸೇರಿ ಹಲವು ಹೊಸ ಅತಿಥಿಗಳ ಆಗಮನವಾಗಿದೆ. ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ 6 ವರ್ಷದ ಏಷ್ಯಾಟಿಕ್ ಗಂಡು ಸಿಂಹ (Asiatic Lion), ತೋಳ (Wolf), ಎರಡು ಘರಿಯಲ್ ಮೊಸಳೆ (Gharial crocodile) ಮತ್ತು ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್ (Silver Pheasant) ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್ (Yellow-golden pheasant)ಗಳು ಆಗಮಿಸಿವೆ.

ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಮಂಗಳವಾರ ಪಿಲಿಕುಳ ಮೃಗಾಲಯಕ್ಕೆ ಈ ಪ್ರಾಣಿ ಪಕ್ಷಿಗಳು ಆಗಮಿಸಿವೆ.

Yellow- golden pheasant
ಯೆಲ್ಲೋ ಗೋಲ್ಡನ್ ಫೆಸೆಂಟ್ (ETV Bharat)

ಪಿಲಿಕುಳದಿಂದ ನಾಲ್ಕು ಕಾಡು ನಾಯಿ/ಧೋಲ್ (Dhole/Wild Dog), ಅಪರೂಪದ ನಾಲ್ಕು ರೇಟಿಕ್ಯುಲೇಟೆಡ್ ಹೆಬ್ಬಾವು (Reticulated Python), ಎರಡು ಬ್ರಾಹ್ಮಿಣಿ ಗಿಡುಗಗಳು (Bramhiny Kite), ಮೂರು ಏಶಿಯನ್​ ಪಾಮ್ ಸಿವೇಟ್​ (Asian Palm Civet), ಎರಡು ಲಾರ್ಜ್ ಇಗರೇಟ್​ಗಳನ್ನು (Large Egret) ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುತ್ತಿದೆ. ವಿನಿಮಯದಲ್ಲಿ ಪಿಲಿಕುಳದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಳ ಮೃಗಾಲಯದಲ್ಲಿ ಜನಿಸಿದವುಗಳಾಗಿವೆ.

ಮೃಗಾಲಯದಲ್ಲಿ ಜೊತೆಯಿಲ್ಲದ ಪ್ರಾಣಿಗಳಿಗೆ ಜೊತೆಗಾಗಿ ಮತ್ತು Pure Blood Line (ಶುದ್ಧ ರಕ್ತ ಸಂಬಂಧ)ಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು, ಜೊತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ದೂರದ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.

ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಎರಡು ಪಶು ವೈದ್ಯಾಧಿಕಾರಿ ಮತ್ತು ಎಂಟು ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆಗಾಗಿ ಆಗಮಿಸಿದ್ದಾರೆ. ಪ್ರಾಣಿ ವಿನಿಮಯದ ಜವಾಬ್ದಾರಿಯನ್ನು ಎರಡು ಮೃಗಾಲಯಗಳು ಸರಿಸಮಾನವಾಗಿ ವಹಿಸಿಕೊಳ್ಳುತ್ತವೆ.

Asiatic Lion
ಏಷ್ಯಾಟಿಕ್ ಗಂಡು ಸಿಂಹ (ETV Bharat)

ಪಿಲುಕುಳ ಮೃಗಾಲಯದ ವಿಶೇಷತೆ: ಪಿಲಿಕುಳ ಮೃಗಾಲಯವು ಸುಮಾರು 1200ಕ್ಕೂ ಪ್ರಾಣಿ, ಪಕ್ಷಿ ಮತ್ತು ಉರಗಗಳನ್ನು ಹೊಂದಿದ್ದು ದೇಶದ 18 ಬೃಹತ್ ಮೃಗಾಲಯಗಳಲ್ಲಿ ಒಂದಾಗಿದೆ.

ಪಂಜಾಬ್​ನ ಚಟ್ಟಬಿರ್ ಮೃಗಾಲಯ, ಮುಂಬೈಯ ಬೈಕುಳ ಮತ್ತು ಮದರಾಸ್ ಕ್ರೊಕೊಡೈಲ್ ಬ್ಯಾಂಕ್​ನಿಂದ ಪ್ರಾಣಿ, ಪಕ್ಷಿಗಳ ವಿನಿಮಯದ ಬಗ್ಗೆ ಒಪ್ಪಂದ ನಡೆಯುತ್ತಿದೆ. ವಿಶೇಷವಾಗಿ ಅನಕೊಂಡ ಉರಗ, Humboldt ಪೆಂಗ್ವಿನ್ ಪಕ್ಷಿಗಳನ್ನು ತರಿಸಿ ಪಿಲಿಕುಳ ಮೃಗಾಲಯದಲ್ಲಿ ಜನರ ವೀಕ್ಷಣೆಗೆ ಇಡಲು ಪ್ರಯತ್ನಿಸಲಾಗುತ್ತಿದೆ. Humboldt penguin ಗಳನ್ನು ಮೃಗಾಲಯದಲ್ಲಿ ಸಂರಕ್ಷಣೆ ಮಾಡುವುದಕ್ಕೆ, ಅವುಗಳಿಗೆ ವಿಶೇಷವಾದ ಆವರಣಗಳನ್ನು ಸೃಷ್ಟಿಸಬೇಕಾಗುತ್ತದೆ. ಇದಕ್ಕೆ ದುಬಾರಿ ವೆಚ್ಚ ತಗಲುತ್ತದೆ. ಕೆಲವು ದಾನಿಗಳು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಅಪರೂಪದ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ವೀಕ್ಷಣೆಗೆ ಸೇರಿಸಿದರೆ, ಪಿಲಿಕುಳದ ಆದಾಯ ಹಲವು ಪಟ್ಟು ಹೆಚ್ಚಾಗಿ, ಮೃಗಾಲಯವನ್ನು ಸ್ವಂತ ನೆಲೆಯಲ್ಲಿ ನಡೆಸಲು ಅನುಕೂಲವಾಗಲಿದೆ. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ (Quarantine Ward) ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಬಿಡಲಾಗುವುದು.

ಪಿಲಿಕುಲದ ಪ್ರಾಣಿ ವಿನಿಮಯ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತೀ ದೂರದಿಂದ ಪ್ರಾಣಿಗಳನ್ನು (ಸುಮಾರು 2,000 ಕಿಲೋ ಮೀಟರ್) ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ತರಿಸಿದ್ದು, ಹೊಸ ದಾಖಲೆಯಾಗಿದೆ. ಈ ಹಿಂದೆ ರಾಜಸ್ಥಾನದ ಉದಯಪುರ ಮೃಗಾಲಯದಿಂದ (ಸುಮಾರು 1,700 ಕಿಲೋ ಮೀಟರ್) ದೂರದಿಂದ ಪ್ರಾಣಿ ವಿನಿಮಯ ನಡೆಸಿದ್ದು ದಾಖಲೆಯಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ: ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ: ಇಲ್ಲಿದೆ ಟೈಗರ್ ಸಫಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.