ಮೈಸೂರು: ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಆರು ಜನ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 18 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇಂದು ಪಕ್ಷೇತರ ಅಭ್ಯರ್ಥಿಗಳಾದ ಆರ್.ಮಹೇಶ್, ಎಸ್.ದೊರೆಸ್ವಾಮಿ ನಾಯಕ, ರಾಜಣ್ಣ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣ ನಾಯಕ ಅವರು ನಾಮಪತ್ರ ವಾಪಸ್ ಪಡೆದರು.
ಕಣದಲ್ಲಿದ್ದಾರೆ 18 ಅಭ್ಯರ್ಥಿಗಳು: ಸುನೀಲ್ ಟಿ.ಆರ್., (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ), ಎಂ.ಎಸ್ ಪ್ರವೀಣ್ (ಕರ್ನಾಟಕ ರಾಷ್ಟ್ರ ಸಮಿತಿ), ಎ.ಎಸ್ ಸತೀಶ್ (ಅಖಿಲ ಭಾರತ ಹಿಂದೂ ಮಹಾ ಸಭಾ ), ಪಿ.ಎಸ್ ಯಡಿಯೂರಪ್ಪ (ಪಕ್ಷೇತರ ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಭಾರತೀಯ ಜನತಾ ಪಕ್ಷ), ಹೆಚ್.ಕೆ ಕೃಷ್ಣ (ಕರುನಾಡು ಪಾರ್ಟಿ ),ಲೀಲಾವತಿ ಜೆ ಎಸ್ (ಉತ್ತಮ ಪ್ರಜಾಕೀಯ ಪಕ್ಷ), ರಂಗಸ್ವಾಮಿ ಎಂ (ಪಕ್ಷೇತರ ), ರಾಮ ಮೂರ್ತಿ ಎಂ (ಪಕ್ಷೇತರ ), ಹರೀಶ್ ಎನ್ (ಸೋಶಿಯಲಿಸ್ಟ್ ಪಾರ್ಟಿ ), ಎಂ ಲಕ್ಷ್ಮಣ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ), ಕ್ರಿಸ್ಟೋಫರ್ ರಾಜಕುಮಾರ್ (ಇಂಡಿಯನ್ ಮೂವ್ಮೆಂಟ್ ಪಾರ್ಟಿ), ಪಿ ಕೆ ದರ್ಶನ್ ಶೌರಿ (ಪಕ್ಷೇತರ ), ರಾಜು (ಪಕ್ಷೇತರ), ಹೆಚ್ .ಎಂ ನಂಜುಂಡಸ್ವಾಮಿ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ ), ಎನ್.ಅಂಬರೀಷ್ (ಕರ್ನಾಟಕ ಜನತಾ ಪಕ್ಷ ), ಎ.ಜಿ ರಾಮಚಂದ್ರ ರಾವ್ (ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ), ಅಂಬೇಡ್ಕರ್ ಸಿ ಜೆ (ಪಕ್ಷೇತರ) ಅಂತಿಮ ಕಣದ ಉಳಿದ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂಓದಿ: ನೂತನ ಜಿಲ್ಲೆ ವಿಜಯನಗರದಲ್ಲಿ ಬಿಜೆಪಿಗೆ ಶಾಕ್.. ಕಾಂಗ್ರೆಸ್ಗೆ ಡಬಲ್ ಧಮಾಕ