ETV Bharat / state

ರಾಜವಂಶಸ್ಥರಾದರೂ ಸ್ವಂತ ಮನೆ, ಕಾರಿಲ್ಲ!: ಚುನಾವಣಾ ಅಫಿಡವಿಟ್​ನಲ್ಲಿ ಯದುವೀರ್ ಆಸ್ತಿ ವಿವರ ಹೀಗಿದೆ - Yaduveer Asset Details - YADUVEER ASSET DETAILS

ಲೋಕಸಭೆ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್, ಅಫಿಡವಿಟ್‌ನಲ್ಲಿ ಆಸ್ತಿ ವಿವರ ಸಲ್ಲಿಸಿದ್ದಾರೆ.

Yaduveer Krishnadatta Chamaraja Wodeyar
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್
author img

By ETV Bharat Karnataka Team

Published : Apr 1, 2024, 8:12 PM IST

Updated : Apr 1, 2024, 9:05 PM IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್​ ಇಂದು ಮೊದಲ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಫಿಡವಿಟ್‌ ಮೂಲಕ ಅವರು ಸಲ್ಲಿಸಿರುವ ಆಸ್ತಿ ವಿವರದಂತೆ ಯದುವೀರ್ ಕೋಟ್ಯಧೀಶರು. ಪುತ್ರ ಆದ್ಯವೀರ್ ತಾಯಿ ತ್ರಿಷಿಕಾ ಅವರಿಗಿಂತಲೂ ಸಿರಿವಂತ. ಆದರೆ ಯದುವೀರ್ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ ಎನ್ನುವುದು ಗಮನಾರ್ಹ.

ಯದುವೀರ್​ ಅವರ ಬಳಿ ಯಾವುದೇ ಕೃಷಿ ಭೂಮಿ, ಸ್ವಂತ ಮನೆ, ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ. ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಯದುವೀರ್ ಕೈಯಲ್ಲಿ 1 ಲಕ್ಷ ರೂ. ನಗದು ಹಣವಿದ್ದರೆ, ತ್ರಿಷಿಕಾ ಕೈಯಲ್ಲಿ 75 ಲಕ್ಷ ರೂ.ಗಳಿವೆ. ವಿವಿಧ ಬ್ಯಾಂಕ್​ಗಳ ಉಳಿತಾಯ ಖಾತೆಗಳಲ್ಲಿ ಯದುವೀರ್ ಹೆಸರಿನಲ್ಲಿ 23 ಲಕ್ಷದ 55 ಸಾವಿರ ನಗದು ಹಣವಿದ್ದರೆ, ತ್ರಿಷಿಕಾ ಹೆಸರಲ್ಲಿ 1 ಲಕ್ಷ ರೂ ಬ್ಯಾಂಕ್ ಡೆಪಾಸಿಟ್ ಇಡಲಾಗಿದೆ.

ಯದುವೀರ್ ಹೆಸರಿನಲ್ಲಿ 1,33,04,303 ರೂ. ಹೂಡಿಕೆ ಇದ್ದು, ಮಗನ ಹೆಸರಿನಲ್ಲಿ 1,49,00,343 ರೂ. ಹೂಡಿಕೆ ಮಾಡಲಾಗಿದೆ.

ಯದುವೀರ್ ಹೆಸರಿನಲ್ಲಿ 3,25,00,000 ಲಕ್ಷ ರೂ. ಮೌಲ್ಯದ 4 ಕೆ.ಜಿ ಚಿನ್ನಾಭರಣವಿದೆ. ತ್ರಿಷಿಕಾ ಹೆಸರಿನಲ್ಲಿ 90 ಲಕ್ಷ ಮೌಲ್ಯದ ಚಿನ್ನ ಹಾಗೂ 5.5 ಲಕ್ಷ ಮೌಲ್ಯದ ಚಿನ್ನದ ಗಟ್ಟಿ, ಪುತ್ರನ ಹೆಸರಿನಲ್ಲಿ 12 ಲಕ್ಷದ ಚಿನ್ನ ಹಾಗೂ 5.5 ಲಕ್ಷದ ಚಿನ್ನದ ಗಟ್ಟಿ ಇದೆ.

ಯದುವೀರ್ ಹೆಸರಿನಲ್ಲಿ 14 ಲಕ್ಷ ರೂ. ಮೌಲ್ಯದ 20 ಕೆ.ಜಿ ಬೆಳ್ಳಿ, ಪತ್ನಿ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆ.ಜಿ ಬೆಳ್ಳಿ ಇದೆ. ಒಟ್ಟಾರೆ, ಯದುವೀರ್ ಹೆಸರಿನಲ್ಲಿ 3,33,00,000 ಲಕ್ಷ ರೂ., ಪತ್ನಿ ಹೆಸರಿನಲ್ಲಿ 1 ಕೋಟಿ ಹಾಗೂ ಮಗ ಆದ್ಯವೀರ್ ಹೆಸರಿನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿವೆ.

ಒಟ್ಟು ಆಸ್ತಿ ವಿವರ: ಯದುವೀರ್ ಹೆಸರಿನಲ್ಲಿ 4 ಕೋಟಿ 99 ಲಕ್ಷದ 59 ಸಾವಿರದ 303 ರೂ., ತ್ರಿಷಿಕಾ ಹೆಸರಿನಲ್ಲಿ 1 ಕೋಟಿ 4 ಲಕ್ಷದ 25 ಸಾವಿರ ರೂ. ಹಾಗೂ ಪುತ್ರನ ಹೆಸರಿನಲ್ಲಿ 3 ಕೋಟಿ 63 ಲಕ್ಷದ 55 ಸಾವಿರದ 343 ರೂ. ಹೊಂದಿದ್ದಾರೆ.

ಇದನ್ನೂ ಓದಿ: ತಾಯಿಯೊಂದಿಗೆ ಆಗಮಿಸಿ ಇಂದೇ ಒಂದು ಸೆಟ್‌ ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್ - Yaduveer Wodeyar

Last Updated : Apr 1, 2024, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.