ETV Bharat / state

ಮೈಸೂರು ದಸರಾ ದೀಪಾಲಂಕಾರದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ಶೋ - Mysuru Dasara Drone Show

ಈ ಬಾರಿ ದಸರಾ ದೀಪಾಲಂಕಾರ 21 ದಿನ ಇರಲಿದ್ದು, ನಾಲ್ಕು ದಿನಗಳ ಕಾಲ ಡ್ರೋನ್​ ಶೋ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

Drone show poster release
ಡ್ರೋನ್​ ಶೋ ಪೋಸ್ಟರ್​ ಬಿಡುಗಡೆ (ETV Bharat)
author img

By ETV Bharat Karnataka Team

Published : Sep 24, 2024, 2:33 PM IST

ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾದರೂ, ಜಂಬೂ ಸವಾರಿಗೆ ಮೆರುಗು ನೀಡುವ ದಸರಾ ದೀಪಾಲಂಕಾರ ನೋಡಲು ಲಕ್ಷಾಂತರ ಜನ ಮೈಸೂರಿಗೆ ಆಗಮಿಸುತ್ತಾರೆ. ಇಂತಹ ದಸರಾ ದೀಪಾಲಂಕಾರವನ್ನು ಆಕರ್ಷಣೆಯಾಗಿ ಮಾಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್‌) ಮೊದಲ ಬಾರಿಗೆ 1,500 ಡ್ರೋನ್​ಗಳನ್ನು ಬಳಸಿ ಆಕಾಶದಲ್ಲಿ 4 ದಿನಗಳ ಕಾಲ ಡ್ರೋನ್‌ ಶೋ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಸೆಸ್‌ ವಿಡಿಯೋ ಬಿಡುಗಡೆ ಮಾಡಿದೆ.

ವಿವಿಧ ಪ್ರತಿಕೃತಿಗಳ ಬಿಂಬಗಳು ಈ ಶೋನಲ್ಲಿ ಮೂಡಿಬರಲಿದೆ. ಈ ಡ್ರೋನ್‌ ಶೋಗೆ LED ಬಲ್ಬ್​ಗಳನ್ನು ಬಳಸಲಾಗುತ್ತದೆ. ಆಕಾಶದಲ್ಲಿ ಅದ್ಭುತ ಆಕೃತಿಗಳನ್ನು ಮೂಡಿಸಲು ಸೆಸ್​ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್‌ 6 ಮತ್ತು 7 ಮತ್ತು 11 ಮತ್ತು 12ರಂದು ರಾತ್ರಿ 8 ಗಂಟೆಯಿಂದ 8.15ರವರೆಗೆ ಬನ್ನಿಮಂಟಪದ ಪಂಜಿನ ಕವಾಯತಿನಲ್ಲಿ ಈ ಡ್ರೋನ್‌ ಶೋ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಸೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಸ್​ ವಿಡಿಯೋ (ETV Bharat)

10 ಕೋಟಿ ರೂ ವೆಚ್ಚ: ಈ ಬಾರಿ ದಸರಾ ದೀಪಾಲಂಕಾರಕ್ಕೆ 6.50 ಕೋಟಿ ಹಾಗೂ ಡ್ರೋನ್‌ ಶೋಗೆ ಮೂರರಿಂದ ಮೂರೂವರೆ ಕೋಟಿ ಅಂದಾಜು ವೆಚ್ಚವಾಗಲಿದೆ. ಅಂದಾಜು 3 ಮೆಗಾ ವ್ಯಾಟ್‌ ವಿದ್ಯುತ್‌ ಬಳಕೆ ಆಗುವ ಅಂದಾಜಿದೆ. ಈ ಬಾರಿ ಅಕ್ಟೋಬರ್‌ 3 ರಿಂದ 21 ದಿನಗಳ ಕಾಲ ದೀಪಾಲಂಕಾರ ಇರಲಿದೆ. ಮೈಸೂರು ನಗರದ 130 ಕಿ.ಮೀ. ವ್ಯಾಪ್ತಿಯಲ್ಲಿ, ನೂರು ವೃತ್ತಗಳಲ್ಲಿ, 65 ಪ್ರತಿಕೃತಿಗಳ ನಿರ್ಮಾಣದ ಜತೆಗೆ 25 ನಿಗಮ ಕಚೇರಿಗೂ ದಸರಾ ದೀಪಾಲಂಕಾರ ಮಾಡಲಾಗುವುದು ಎಂದು ಸೆಸ್‌ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ದಸರಾ: ಒಂದು ಗೋಲ್ಡ್‌ ಕಾರ್ಡ್‌ ಬೆಲೆ 6,500 ರೂಪಾಯಿ - ಸಚಿವ ಡಾ. ಹೆಚ್ ಸಿ ಮಹದೇವಪ್ಪ - Minister Dr H C Mahadevappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.