ETV Bharat / state

ಯುವ ದಸರಾ 2024: ಸಂಗೀತ ಮಾಂತ್ರಿಕ ಇಳಯರಾಜಾ ಗಾಯನಕ್ಕೆ ಮಳೆರಾಯನೂ ಕೂಲ್​ ಕೂಲ್!

ನಿನ್ನೆಯ ಯುವ ದಸರಾದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ತಾವು ಮೈಸೂರಿಗೆ ಮೊದಲು ಭೇಟಿ ನೀಡಿದ ಕ್ಷಣವನ್ನು ನೆನಪಿಸಿಕೊಂಡರು.

ಇಳಯರಾಜಾ ಅವರಿಂದ ಸಂಗೀತ ಕಾರ್ಯಕ್ರಮ
ಇಳಯರಾಜಾ ಅವರಿಂದ ಸಂಗೀತ ಕಾರ್ಯಕ್ರಮ (ETV Bharat)
author img

By ETV Bharat Karnataka Team

Published : Oct 11, 2024, 9:36 AM IST

ಮೈಸೂರು: "1974 ರಲ್ಲಿ ನಾನು ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದ್ದೆ, ಆ ಸಮಯದಿಂದಲೂ ನನಗೆ ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ. ವೆಂಕಟೇಶ್, ಪಿ.ಬಿ. ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು" ಎಂದು ಸಂಗೀತ ನಿರ್ದೇಶಕ ಇಳಯರಾಜಾ ಯುವ ದಸರಾ ಕಾರ್ಯಕ್ರಮದಲ್ಲಿ ತಮ್ಮ ಹಿಂದಿನ ನೆನಪಿನ ಸರಣಿ ಬಿಚ್ಚಿಟ್ಟರು.

ಮೈಸೂರಿನಲ್ಲಿ ದಸರಾ ಹಿನ್ನೆಲೆ ಯುವ ದಸರಾ ಕಾರ್ಯಕ್ರಮ ನಡೆಯುತ್ತಿದೆ. ಮೊನ್ನೆಯಿಂದ ವಿವಿಧ ಖ್ಯಾತ ಗಾಯಗಕರು ತಮ್ಮ ಗಾನಸುಧೆ ಹರಿಸಿದ್ದಾರೆ. ಅದರಂತೆ ನಿನ್ನೆ ಇಳಯರಾಜಾ ಅವರು ಸಂಗೀತ ಕಾರ್ಯಕ್ರಮ ನೀಡಿದ್ದು ಕೇಳುಗರ ಮನಸಿಗೆ ಮುದ ದೊರಕಿದೆ. 'ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಇಂದು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ ಎಂದ ಅವರು ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಕಾರ್ಯಕ್ರಮದ ನಂತರದಲ್ಲಿ ನೇರವಾಗಿ ಶಕ್ತಿ ದೇವತೆ ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿದ ಇಳಯರಾಜಾ ಅವರು 'ಅಮ್ಮ ಎಂದು ಕೂಗಿದರೆ ಮೈ ನವಿರೇಳುವುದು' ಎಂಬ ಗೀತೆಯ ಮೂಲಕ ದೇವಿ ಮೂಕಾಂಬಿಕೆಯನ್ನು ಆರಾಧಿಸಿದರು.

ಯುವ ದಸರಾ 2024: ಇಳಯರಾಜಾ ಅವರಿಂದ ಸಂಗೀತ ಕಾರ್ಯಕ್ರಮ
ಯುವ ದಸರಾ 2024: ಇಳಯರಾಜಾ ಅವರಿಂದ ಸಂಗೀತ ಕಾರ್ಯಕ್ರಮ (ETV Bharat)

ಎಸ್​.ಪಿ. ಚರಣ್ ಸುಮಧುರ ಧ್ವನಿಯಲ್ಲಿ ಎಂಥ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು: ಬಳಿಕ ವೇದಿಕೆ ಆಗಮಿಸಿದ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಪುತ್ರ ಎಸ್​.ಪಿ. ಚರಣ್​​ ತಮ್ಮ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ 'ಮಾತು ತಪ್ಪದ ಮಗ' ಚಿತ್ರದ 'ಎಂಥ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು' ಎಂದು ಹಾಡುತ್ತಾ ಕನ್ನಡದ ಕಂಪನ್ನು ಪಸರಿಸಿದರು. ಶಂಕರ್ ನಾಗ್ ಅವರ 'ಗೀತಾ' ಚಿತ್ರದ 'ಕೇಳದೆ ನಿಮಗೀಗ ದೂರದಲ್ಲಿ ಯಾರೋ', 'ಜೊತೆಯಲ್ಲಿ ಜೊತೆ ಜೊತೆಯಲ್ಲಿ ಇರುವೇನು ಹೀಗೆ' ಹಾಡುಗಳು ಯುವ ಮನಸ್ಸಿನಲ್ಲಿ ಪುಳಕ ಮೂಡಿಸಿತು.

ಯುವ ದಸರಾ 2024
ಯುವ ದಸರಾ 2024 (ETV Bharat)

ಹಿನ್ನೆಲೆ ಗಾಯಕರಾದ ಶರತ್, ವಿಭಾರವಿ ಅವರು ಅನಂತ್ ನಾಗ್ ಅವರ 'ಆಕಾಶದಿಂದ ಜಾರಿ ಭೂಮಿ ಬಂದ ನೋಡಿ ನಮ್ಮಗಾಗಿ ಆ ದೇವನೇ' ಗೀತೆಯನ್ನು ಪ್ರಸ್ತುತ ಪಡಿಸಿದರು. ಗಾಯಕಿ ವಿಭಾರವಿ ಅವರು 'ನಮ್ಮೂರ ಮಂದಾರ ಹೂವೆ' ಚಿತ್ರದ 'ಓಂ ಕಾರವೇ ಕಂಡೇ ಪ್ರೇಮನಾದವ' ಗೀತೆಯನ್ನು ಹಾಡಿ ಮನಸೆಳೆದರು. ಜೊತೆಯಲ್ಲಿ ಇಳಿಯರಾಜಾ ಅವರು ಧ್ವನಿ ಗೂಡಿಸಿ ಕೇಳುವವರ ಕರ್ಣಗಳಿಗೆ ತಂಪೆರೆದರು.

ಇನ್ನು ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಇಂಪಾದ ಧ್ವನಿಯಲ್ಲಿ 'ಹೇಳೇ ಕೋಗಿಲೆ', 'ಯಾರಿಗಾಗಿ ಆಟ ಯಾರಿಗಾಗಿ ನೋಟ' ಗೀತೆ ಮೂಡಿ ಬಂತು. ಜತೆಗೆ ಗಾಯಕ ಹರಿ ಚರಣ್ ಜೊತೆಗೂಡಿ ' ಜೀವ ಹೂವಾಗಿದೆ ಭಾವ ಜೇನಾಗಿದೆ', 'ನಗುವ ನಯನ ಮಧುರ ಮೌನ' ಹಾಡನ್ನು ಪ್ರಸ್ತುತ ಪಡಿಸಿದರು.

ಮಂತ್ರಮುಗ್ದಗೊಳಿಸಿದ ಹೇ ಜಿಂದಗೀ ಗಲೇ ಲಾಗ ಲೆ: ಗಾಯಕ ಮುದ್ದು ಬಾಲಕೃಷ್ಣ ಅವರ ಕಂಠ ಸಿರಿಯಲ್ಲಿ 1971 ರಲ್ಲಿ ತೆರೆಕಂಡ ಸದ್ಮಾ ಚಿತ್ರದ 'ಹೇ ಜಿಂದಗೀ ಗಲೇ ಲಾಗ ಲೆ' ಗೀತೆಯು ಮನ ಸೆಳೆಯಿತು. ಜೊತೆಗೆ ಮಾತು ತಪ್ಪದ ಮಗ ಚಿತ್ರದ 'ಭಾನು ಭೂಮಿಯ ಮಿಲನವ ಬಯಸಿ ಬಾಗಿದೆ' ಹಾಡನ್ನು ಹಾಡಿದರು. ಗಾಯಕಿ ಅನನ್ಯ ಭಟ್ ಅವರ ಧ್ವನಿಯಲ್ಲಿ ಅನಂತ್ ನಾಗ್ ಅವರ 'ಜನ್ಮ ಜನ್ಮ ಅನುಬಂಧ' ಚಿತ್ರದ 'ತಂಗಾಳಿಯಲ್ಲಿ ನಾನು ತೇಲಿ ಬಂದೆ' ಗೀತೆಯೂ ನೆರೆದಿದ್ದ ಪ್ರೇಕ್ಷಕರ ಮನಸನ್ನು ಒಂದು ಕ್ಷಣ ಜಲ್ ಎನಿಸುವಂತೆ ಮಾಡಿತು. ಇನ್ನು ಇಳಯರಾಜಾ ಅವರು ಕನ್ನಡ ಚಿತ್ರಗಳ ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಮೇರು ನಟರಾದ ಡಾ. ರಾಜ್ ಕುಮಾರ್, ವಿಷ್ಣು ವರ್ಧನ್, ಅನಂತ ನಾಗ್, ಶಂಕರ್ ನಾಗ್​ರಂತಹ ಮೇರು ನಟರು ಮತ್ತು ಅವರ ಜೊತೆಗಿನ ಅನುಭವವನ್ನು ಮೆಲುಕು ಹಾಕಿದರು.

ಇದನ್ನೂ ಓದಿ: ಯುವ ದಸರಾ: ಮೋಡಿ ಮಾಡಿದ ಎ.ಆರ್.ರಹಮಾನ್, ವಿಜಯ್ ಪ್ರಕಾಶ್ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.