ಮೈಸೂರು: ದೇಶಕ್ಕೆ ಮೋದಿ ಬೇಕು, ಮೈಸೂರಿಗೆ ಯದುವೀರ್ ಬೇಕು. ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯದುವೀರ್ ಅವರಿಗೆ ಮತ ಹಾಕಿ ಗೆಲ್ಲಿಸುವಂತೆ ಸಂಸದ ಪ್ರತಾಪ ಸಿಂಹ ಮನವಿ ಮಾಡಿದ್ದಾರೆ.
ಮಂಗಳವಾರ ಹಿಂದುಳಿದ ವರ್ಗಗಳ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೂರನೇ ಬಾರಿಯೂ ಬಿಜೆಪಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಖಚಿತ. ಈಗಾಗಲೇ ನಾವು ಇಲ್ಲಿ ಸತತ ಎರಡು ಬಾರಿ ಗೆದ್ದಿದ್ದೇವೆ ಎಂದು ಹೇಳಿದರು.
ಮೈಸೂರು ಸಂಸ್ಥಾನದ ಕೊಡುಗೆ ಸದಾ ನಮ್ಮ ಮುಂದೆ ಇದೆ. ಮೀಸಲಾತಿಯನ್ನು ಸಾಕಷ್ಟು ಕಾಲಗಳ ಹಿಂದೆಯೇ ಜಾರಿಗೆ ತಂದವರು ನಮ್ಮ ಮೈಸೂರಿನ ಮಹಾರಾಜರು. ದೇಶದ 7ನೇ ಮೆಡಿಕಲ್ ಕಾಲೇಜು ಮೈಸೂರಿನಲ್ಲಿದ್ದು 100ನೇ ವರ್ಷ ಪೂರೈಸುತ್ತಿದೆ. ಪ್ರಧಾನಿ ಮೋದಿ ಕೂಡ ಮೈಸೂರಿನ ಮಹಾರಾಜರ ಪರಂಪರೆಗೆ ಅನುಗುಣವಾಗಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.
ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪರ ವಾಗ್ದಾಳಿ ನಡೆಸಿದ ಅವರು, ಮಹಾರಾಜರಿಗೆ ಗೌರವ ಕೊಡದ ವ್ಯಕ್ತಿ ಇಂದು ಕಾಂಗ್ರೆಸ್ ಅಭ್ಯರ್ಥಿ. ಇವರ ವಿರುದ್ಧ ನಾನು ಎರಡು ಕ್ರಿಮಿನಲ್ ಕೇಸ್ಗಳನ್ನು ಹಾಕಿದ್ದೇನೆ ಎಂದರು.
ಇದನ್ನೂ ಓದಿ: ಸಚಿವ ತಂಗಡಗಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಮನೆಗೆ ಮುತ್ತಿಗೆ ಯತ್ನ - BJP Protest Against Tangadagi