ETV Bharat / state

ಮಹದಾಯಿ ಯೋಜನೆಗೆ ಹಿನ್ನಡೆ ಉಂಟು ಮಾಡಿದ್ದು ಕಾಂಗ್ರೆಸ್: ಸಂಸದ ಬೊಮ್ಮಾಯಿ - Basavaraj Bommai - BASAVARAJ BOMMAI

ಮಹದಾಯಿ ಯೋಜನೆಗೆ ಯಾರಾದರೂ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸೋನಿಯಾ ಗಾಂಧಿ ಈ ಹಿಂದೆ ಹೇಳಿದ್ದರು ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಸಂಸದ ಬಸವರಾಜ ಬೊಮ್ಮಾಯಿ
ಸಂಸದ ಬಸವರಾಜ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Sep 8, 2024, 9:43 PM IST

Updated : Sep 8, 2024, 10:37 PM IST

ಸಂಸದ ಬಸವರಾಜ ಬೊಮ್ಮಾಯಿ (ETV Bharat)

ಹಾವೇರಿ: ಮಹದಾಯಿ ಯೋಜನೆಗೆ ಯಾರಾದರೂ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. 2009ರಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದ್ದರು ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟ್ರಿಬ್ಯುನಲ್ ಮಾಡಿ ಅಧ್ಯಕ್ಷರಿಗೆ ಒಂದು ಆಫೀಸ್ ಕೂಡಾ ಕೊಡಲಿಲ್ಲ, ಅದಕ್ಕೆ ನಾಲ್ಕೈದು ವರ್ಷ ವಿಳಂಬ ಮಾಡಿದ್ದರು. ಟ್ರಿಬ್ಯುನಲ್​ನಲ್ಲಿ ತಾವೇ ಬರೆದುಕೊಟ್ಟು, ನಾವು ನಿರ್ಮಿಸಿದ ಇಂಟಲ್ ಲಿಂಕಿಂಗ್ ಕೆನಾಲ್​ಗೆ ಗೋಡೆ ಕಟ್ಟಿದರು. ಅದೆಲ್ಲಾ ಇತಿಹಾಸದಲ್ಲಿದೆ. ಈಗ ವೈಲ್ಡ್ ಲೈಫ್ ಬೋರ್ಡ್ ಅನುಮತಿ ತೆಗೆದುಕೊಳ್ಳಬೇಕು. ಅದಕ್ಕೆ ಸೂಕ್ತ ದಾಖಲಾತಿ ನೀಡಿದರೆ ಮಹದಾಯಿ ಯೋಜನೆಗೆ ಒಪ್ಪಿಗೆ ಸಿಗುತ್ತದೆ ಎಂದು ಹೇಳಿದರು.

11 ವಿಧೇಯಕಗಳನ್ನು ವಾಪಸ್ ಕಳಿಸಿದ್ದಕ್ಕೆ ರಾಜ್ಯಪಾಲರ ವಿರುದ್ದ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟದ ಚಿಂತನೆ ವಿಚಾರದ ಕುರಿತು ಮಾತನಾಡಿದ ಅವರು, ಕಾನೂನು ಹೋರಾಟ ಮಾಡಲು ಅವಕಾಶವಿದೆ, ಮಾಡಲಿ ಎಂದರು.

ಬೆಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ 40% ಬಿಲ್ಡಿಂಗ್ ಕಟ್ಟುವುದಕ್ಕೆ ಅನುಮತಿ ಕೊಟ್ಟಿದಾರೆ. ಅದಕ್ಕೆ ಅತ್ಯಂತ ಕಡಿಮೆ ದರದ ರೇಟ್ ಫಿಕ್ಸ್ ಮಾಡಿದ್ದಾರೆ. ಹೀಗಾದಾಗ ಡ್ರೈನೇಜ್, ರಸ್ತೆಗಳಿಗೆ ಎಲ್ಲಾ ಸಮಸ್ಯೆಯಾಗುತ್ತದೆ. ಅದು ಅರ್ಬನ್ ಡೆವಲಪ್ಮೆಂಟ್ ಲಾ ವಿರುದ್ದವಿದೆ. ನಾವಿದ್ದಾಗ ಅದನ್ನು ರಿಜೆಕ್ಟ್ ಮಾಡಿದ್ದೆವು ಎಂದು ಹೇಳಿದರು.

ಬೆಂಗಳೂರಿಗೆ ಶರಾವತಿ ನೀರು ಯೋಜನೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಶರಾವತಿ ನದಿ ನೀರಿನ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಕಾಮೆಂಟ್ ಮಾಡಲ್ಲ ಅಂದರೆ ಅದಕ್ಕೆ ಅರ್ಥ ಇದೆ ಎಂದರು.

ಇದನ್ನೂ ಓದಿ: ಹೊರಗೆ ಸಿದ್ಧರಾಮಯ್ಯನವರ ಹಿಂದೆ ಕಲ್ಲು ಬಂಡೆ, ಒಳಗೆ ಸಿಎಂ ಕುರ್ಚಿಗೆ ಪೈಪೋಟಿ: ಜೋಶಿ ವ್ಯಂಗ್ಯ - Pralhad Joshi

Last Updated : Sep 8, 2024, 10:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.