ETV Bharat / state

ಒಂಟಿ ಕೋತಿಯ ದಾಳಿ: 15 ಜನರಿಗೆ ಗಂಭೀರ ಗಾಯ, ದೊಣ್ಣೆ ಹಿಡಿದು ಓಡಾಡುತ್ತಿರುವ ಜನ

ಒಂಟಿ ಕೋತಿಯೊಂದು ದಾಳಿ ಮಾಡಿ ಸ್ಥಳೀಯರ ನಿದ್ದೆಗೆಡಿಸಿದೆ. ಈವರೆಗೆ 15 ಜನರ ಮೇಲೆ ದಾಳಿ ಮಾಡಿದೆ.

ಕೋತಿಯಿಂದ ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದು ಓಡಾಡುತ್ತಿರುವ ಯುವಕರು
ಕೋತಿಯಿಂದ ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದು ಓಡಾಡುತ್ತಿರುವ ಯುವಕರು (ETV Bharat)
author img

By ETV Bharat Karnataka Team

Published : Nov 3, 2024, 1:35 PM IST

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದ ನೇಕಾರ ಪೇಟೆ, ಬಣಕಾರ ಪೇಟೆಯಲ್ಲಿ ಕೋತಿಯೊಂದು 15 ಜನರ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಸ್ಥಳೀಯರು ಓಡಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ರಕ್ಷಣೆ ಪಡೆಯಲು ಜನರು ಕೈಯಲ್ಲಿ ದೊಣ್ಣೆ ಹಿಡಿದು ಸಂಚರಿಸುತ್ತಿದ್ದಾರೆ.

ಇಲ್ಲಿನ ನದಿ ಪಕ್ಕದಲ್ಲೇ ಬೀಡುಬಿಟ್ಟಿರುವ ಮಂಗ ಕಳೆದ ಒಂದು ವಾರದಿಂದ ಇಲ್ಲಿನ ಜನರಿಗೆ ಇನ್ನಿಲ್ಲದ ಕಾಟ ಕೊಡುತ್ತಿದೆ. ಈವರೆಗೆ ಹಲವರಿಗೆ ಕಚ್ಚಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಆದರೆ, ಮಂಗ ಇನ್ನೂ ಕೂಡ ನದಿ ದಡದಲ್ಲಿಯೇ ಬಿಡುಬಿಟ್ಟಿದ್ದರಿಂದ ಆತಂಕ ಉಂಟಾಗಿದೆ.

ರಾಮದುರ್ಗದಲ್ಲಿ ಕೋತಿ ಕಾಟ (ETV Bharat)

ಕೆಲವರ ಕೈ, ಮೈ ಹಾಗೂ ಸೊಂಟದ ಭಾಗಕ್ಕೆ ಕಚ್ಚಿದೆ. ಅನೇಕರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನದಿ ಅಕ್ಕಪಕ್ಕದಲ್ಲಿಯೇ ಇದ್ದ ಮಂಗ ಈಗ ಭಯಾನಕ ದಾಳಿ ಮಾಡಲು ಆರಂಭಿಸಿದೆ. ಆದರೆ ಮಂಗ ಹಿಡಿಯುವ ಕೆಲಸಕ್ಕೆ ಸ್ಥಳೀಯ ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ. ಹಾಗಾಗಿ, ಆಕ್ರೋಶಗೊಂಡಿರುವ ನೇಕಾರ ಪೇಟೆಯ ಯುವಕರು ತಾವೇ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಪೂಜೆಗೆ ಹೂ ತರಲು ಹೋಗಿದ್ದೆ. ವಾಪಸ್ ಬರುವಾಗ ಏಕಾಏಕಿ ದಾಳಿ ಮಾಡಿ ಕಚ್ಚಿತು. 112 ನಂಬರ್​​ಗೆ ಫೋನ್ ಮಾಡಿದೆ. ಅರಣ್ಯ ಇಲಾಖೆಯ ಫೋನ್ ಸ್ವಿಚ್ ಆಫ್ ಇದೆ. ಅವರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಮಕ್ಕಳು, ವೃದ್ಧರಿಗೆ ಇದೇ ರೀತಿ ಆದರೆ ಕಷ್ಟ. ದಯವಿಟ್ಟು ಮಂಗನನ್ನು ಸೆರೆ ಹಿಡಿಯಿರಿ ಎಂದು ಗಾಯಾಳು ಉಮೇಶ್ ಪತ್ತಾರ‌ ಮನವಿ ಮಾಡಿಕೊಂಡರು.

ಸ್ಥಳೀಯ ಯುವಕ ನವೀನ ಬನ್ನಿಗಿಡದ ಮಾತನಾಡಿ, ನದಿ ಅಕ್ಕಪಕ್ಕದಲ್ಲಿಯೇ ಮಂಗ ಬೀಡುಬಿಟ್ಟಿದೆ. ದೇವಸ್ಥಾನ ಬಳಿ ಓಡಾಡಲು ಜನರಿಗೆ ಭಯವಾಗುತ್ತಿದೆ. ಮುಂದೆ ಏನು ಸಮಸ್ಯೆ ಆಗುತ್ತದೋ ಗೊತ್ತಿಲ್ಲ. ಪೊಲೀಸ್ ಇಲಾಖೆಗೆ ದೂರು ಕೊಟ್ಟಿದ್ದೆವು. ಅವರು ಬಂದು ಹೋದರು ಅಷ್ಟೇ. ಆದರೆ, ಮಂಗನನ್ನು ಹಿಡಿಯಲಿಲ್ಲ. ಜನರು ಮನೆ ಬಿಟ್ಟು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿ ಎಮ್ಮೆಗಳ ಓಟಕ್ಕಿದೆ ನೂರಾರು ವರ್ಷಗಳ ಇತಿಹಾಸ: ಮೈನವಿರೇಳಿಸಿದ ಎಮ್ಮೆಗಳ ಜೊತೆಗಿನ ಯುವಕರ ಸಾಹಸ

ಇದನ್ನೂ ಓದಿ: ಹಾವೇರಿ: ದನ ಬೆದರಿಸುವ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಹೋರಿಗಳು, ರೋಚಕ ಕ್ರೀಡೆ ಕಣ್ತುಂಬಿಕೊಂಡ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.