ETV Bharat / state

ಉಡುಪಿ: ನಾರಾಯಣ ದೇವಸ್ಥಾನದಿಂದ ಕದ್ದ ಹಣ, ಸ್ಥಳೀಯ ಶಾಲೆಯಲ್ಲಿ ಬಿಟ್ಟೋದ ಕಳ್ಳ! - Temple Money stolen

author img

By ETV Bharat Karnataka Team

Published : Aug 20, 2024, 1:26 PM IST

ದೇವಸ್ಥಾನದಿಂದ ಕದ್ದ ಹಣವು ಸ್ಥಳೀಯ ಶಾಲೆಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಕಂಡು ಬಂದಿದೆ.

MONEY STOLEN  LOCAL SCHOOL  NARAYANA TEMPLE  UDUPI
ಉಡುಪಿ: ನಾರಾಯಣ ದೇವಸ್ಥಾನದಿಂದ ಕದ್ದ ಹಣ (ETV Bharat)

ಉಡುಪಿ: ಹೆಮ್ಮಾಡಿ ಯಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಿಂದ ಶುಕ್ರವಾರ ರಾತ್ರಿ ಕದ್ದೊಯ್ದ ಹಣವನ್ನು ಕಳ್ಳನು ಅಲ್ಲಿಯೇ ಸಮೀಪದ ಶಾಲೆಯೊಂದರಲ್ಲಿ ಇಟ್ಟು ಹೋಗಿದ್ದು, ಅದು ಸೋಮವಾರ ಸಂಜೆ ವೇಳೆ ಪತ್ತೆಯಾಗಿದೆ.

ಸೋಮವಾರವೇ ದೇವಸ್ಥಾನದಲ್ಲಿ ಹುಣ್ಣಿಮೆ ದಿನ ಸತ್ಯನಾರಾಯಣ ಪೂಜೆ ನಡೆದಿತ್ತು. ಕಳ್ಳತನವಾದುದರಲ್ಲಿ ಸ್ವಲ್ಪ ಹಣ ಹುಣ್ಣಿಮೆ ದಿನವೇ ಸಿಕ್ಕಿರುವುದು ವಿಶೇಷ. ಶುಕ್ರವಾರ ಮಧ್ಯರಾತ್ರಿ ದೇಗುಲದ ಬಾಗಿಲು ಮುರಿದು ಒಳ ನುಗ್ಗಿದ್ದ ಕಳ್ಳ ಹುಂಡಿಯಲ್ಲಿದ್ದ ಹಣ, ಅರ್ಚಕರ ಕೊಠಡಿಯಲ್ಲಿದ್ದ ರಶೀದಿ ಹಣವನ್ನು ಕದ್ಯೊಯ್ದಿದ್ದ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಮೀಪದ ಮೂರು ಮನೆಗಳಿಂದಲೂ ಚಿಲ್ಲರೆ ಹಣವನ್ನು ಕದ್ದಿದ್ದ. ದೇವಸ್ಥಾನಕ್ಕಿಂತ ತುಸು ದೂರದಲ್ಲಿರುವ ಹೆಮ್ಮಾಡಿಯ ಸರ್ಕಾರಿ ಹಿ.ಪ್ರಾ.ಶಾಲೆಯ ಜಗಲಿಯಲ್ಲಿ ಹಸಿರು ಚೀಲ ಇದ್ದುದನ್ನು ಶನಿವಾರವೇ ಶಿಕ್ಷಕರು ಗಮನಿಸಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಸೋಮವಾರವೂ ಅದೇ ಸ್ಥಳದಲ್ಲಿದ್ದ ಆ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಬಿಡಿಸಿ ನೋಡಿದಾಗ ಅದರಲ್ಲಿ ಹಣ ಪತ್ತೆಯಾಗಿದೆ. ಕೂಡಲೇ ಮುಖ್ಯೋಪಾಧ್ಯಾಯರು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು, ಬಳಿಕ ದೇವಸ್ಥಾನದ ವತಿಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕುಂದಾಪುರ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋರ್ಟ್ ಸುಪರ್ದಿಯಲ್ಲಿ ಆ ಹಣ ದೇಗುಲಕ್ಕೆ ಹಸ್ತಾಂತರವಾಗಲಿದೆ.

ಕಳ್ಳನು ಒಟ್ಟು 45 ಸಾವಿರ ರೂ. ಕಳವು ಮಾಡಿದ್ದ. ಈಗ ಚೀಲದಲ್ಲಿ ಸಿಕ್ಕಿದ್ದು 3,035 ರೂ. ಮಾತ್ರ. ಆತ ಉಳಿದ ಹಣವನ್ನು ಕೂಡ ಪಶ್ಚಾತ್ತಾಪದಿಂದ ಬೇರೆಲ್ಲಿಯಾದರೂ ಇಟ್ಟಿರಬಹುದೇ ಅನ್ನುವ ಅನುಮಾನ ಮೂಡಿದೆ.

ಓದಿ: ಗಂಗಾವತಿ: ಬೆಟ್ಟದಿಂದ ಉರುಳಿದ ಕಲ್ಲುಬಂಡೆ, 20ಕ್ಕೂ ಹೆಚ್ಚು ಜನರ ಜೀವ ಉಳಿಸಿತು ಪೈಪ್​ಲೈನ್! - boulder rolled down

ETV Bharat Logo

Copyright © 2024 Ushodaya Enterprises Pvt. Ltd., All Rights Reserved.