ETV Bharat / state

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲವಾಗಿ ಕಟ್ಟಿದವರು ಬಿಎಸ್​ವೈ, ಈಶ್ವರಪ್ಪ: ಹೆಚ್​. ವಿಶ್ವನಾಥ್ - H Vishwanath

ಈಶ್ವರಪ್ಪನವರಿಗೆ ಪಕ್ಷ ನಿಷ್ಠೆ ಇದೆ ಆದರೆ ಧೈರ್ಯ ಇಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್ ಹೇಳಿದರು.

ಹೆಚ್​. ವಿಶ್ವನಾಥ್
ಹೆಚ್​. ವಿಶ್ವನಾಥ್ (ETV Bharat)
author img

By ETV Bharat Karnataka Team

Published : May 5, 2024, 5:51 PM IST

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲವಾಗಿ ಕಟ್ಟಿದವರು ಇಬ್ಬರೇ. ಒಬ್ಬರು ಯಡಿಯೂರಪ್ಪನವರು, ಮತ್ತೊಬ್ಬರು ಈಶ್ವರಪ್ಪ. ಈಶ್ವರಪ್ಪನವರು ಶ್ರಮ ವಹಿಸಿದರು, ಆದರೆ ಧೈರ್ಯ ಮಾಡಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ದೆಹಲಿಯಿಂದ‌ ಕೂಗು ಬಂತು‌ ಅದನ್ನು ಅಲ್ಲಿಯೇ ಕೈಬಿಟ್ಟು ಬಂದರು. ಅವರಿಗೆ ಪಕ್ಷ ನಿಷ್ಠೆ ಇದೆ ಆದರೆ ಧೈರ್ಯ ಇಲ್ಲ. ಸದ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನೋಡೋಣ ದೈವ ಏನು ಮಾಡುತ್ತದೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್​ ಹೇಳಿದರು.

ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕುರುಬರಿಗೆ ಟಿಕೆಟ್​ ಕೊಟ್ಟಿಲ್ಲ, ವೋಟ್​ ಯಾಕೆ ಕೇಳುತ್ತಿದ್ದಾರೆ ಎಂಬ ಕಾಂಗ್ರೆಸ್​ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್​ನಲ್ಲಿ ಕುರುಬರಿಗೆ 2 ಟಿಕೆಟ್​ ಕೊಟ್ಟಿದ್ದಾರೆ ನಿಜ, ಬಿಜೆಪಿಯಲ್ಲಿ ಒಂದೂ ಟಿಕೆಟ್​ ಕೊಟ್ಟಿಲ್ಲ ಅನ್ನೋದು ನಿಜ. ಬಿಜೆಪಿಯವರು ವೋಟ್​ ಯಾಕೆ ಕೇಳಬಾರದು. ಹಾಗಾದರೆ ಎಲ್ಲಾ ಜಾತಿಯವರಿಗೂ ಎಲ್ಲಾ ಪಕ್ಷಗಳು ಟಿಕೆಟ್​ ನೀಡಿವಿಯೇ, ಕಾಂಗ್ರೆಸ್​ನವರು ರಾಜ್ಯದಲ್ಲಿರುವ ಎಲ್ಲಾ ವರ್ಗದವರಿಗೂ ಟಿಕೆಟ್​ ಕೊಟ್ಟಿದ್ದಾರಾ?. ಹಾಗದರೆ ನೀವು ಬೇರೆ ಜಾತಿಯವರ ಮತ ಕೇಳಬೇಡಿ ಎಂದು ಹೆಚ್​ ವಿಶ್ವನಾಥ್​ ತಿರುಗೇಟು ನೀಡಿದರು.

ಹಾವೇರಿ ನನಗೆ 30 ವರ್ಷದಿಂದ ಚಿರಪರಿಚಿತ. ಕಾಗಿನೆಲೆಯ ಮಹಾಸಂಸ್ಥಾನದ ಕೆಲಸ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಿದ್ದು ಸಂತೋಷ. ಬಹಳಷ್ಟು ಜನರು ಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಯಲ್ಲಿ ಹಿಂದೆ ಸ್ವರ್ಧೆ ಮಾಡಿದ್ದರು. ಕೇಂದ್ರ‌ ಮಂತ್ರಿಗಳೂ ಆಗಿದ್ದರು. ಕರ್ನಾಟಕದ ಪರ ಬೊಮ್ಮಾಯಿ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಲಿ ಎಂದು ಹೇಳಿದರು.

ಕನಕದಾಸರ ಜನ್ಮಸ್ಥಳ ಅಭಿವೃದ್ಧಿ ಮತ್ತು ಕಾಗಿನೆಲೆ ಯಡಿಯೂರಪ್ಪನವರ ಕಾಲದಲ್ಲಿ ಅಭಿವೃದ್ಧಿಯಾಗಿದೆ. ಕುರುಬ ಸಮುದಾಯದ ಎಸ್​ಟಿ ಹೋರಾಟಕ್ಕೆ ಸಹಾಯ ಮಾಡಿದ್ದಾರೆ. ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದಾರೆ. ಕೇಂದ್ರಕ್ಕೆ ವರದಿಯನ್ನ ಬೊಮ್ಮಾಯಿ ಸಲ್ಲಿಸಿದ್ದಾರೆ. ಸಂಸದರಾಗಿ ಆಯ್ಕೆ ನಂತರ, ಕೇಂದ್ರ ಸಚಿವರಾಗುವ ಯೋಗಾ ಯೋಗ ಬೊಮ್ಮಾಯಿಗೆ ಇದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ : ಬಿ ಎಸ್ ಯಡಿಯೂರಪ್ಪ - B S Yediyurappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.