ETV Bharat / state

ಇಡೀ ಬಿಜೆಪಿ ಒಂದಾದರೂ ಡಿಕೆಶಿ ಅನ್ನೋ ಬಂಡೆಯನ್ನ ಏನೂ ಮಾಡೋಕಾಗಲ್ಲ: ಶಾಸಕ ಪ್ರದೀಪ್ ಈಶ್ವರ್ - DK Shivakumar Kanakapur rock

ಬಿಜೆಪಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವಿರುದ್ಧ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ವಾಗ್ಧಾಳಿ ನಡೆಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Feb 12, 2024, 1:19 PM IST

ಕೆ.ಎಸ್​ ಈಶ್ವರಪ್ಪ ವಿರುದ್ಧ ​ಪ್ರದೀಪ್​ ಈಶ್ವರ್​ ವಾಗ್ಧಾಳಿ

ಬೆಂಗಳೂರು : ಇಡೀ ಬಿಜೆಪಿ ಒಂದಾದರೂ ಡಿ.ಕೆ ಶಿವಕುಮಾರ್​ ಅನ್ನೋ ಬಂಡೆನಾ ಏನೂ ಮಾಡೋಕಾಗಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದರು.

ಈಶ್ವರಪ್ಪ ಅವರಿಗೆ ಸೆಟ್ಲಮೆಂಟ್​ ಮಾಡ್ತೇನಿ ಎಂಬ ಡಿ ಕೆ ಶಿವಕುಮಾರ್​ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಹತ್ತು ವರ್ಷದಲ್ಲಿ ಸುಮಾರು 5,233 ಸಾವಿರ ಐಟಿ ಮತ್ತು ಇಡಿ ರೇಡ್ ಆಗಿದ್ದು, ಕೇವಲ 22 ಮಾತ್ರ ಪ್ರೂವ್ ಆಗಿವೆ. ಮೂರು ಸಾವಿರ ಜನ ಕಾಂಗ್ರೆಸ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರದೀಪ್​ ಈಶ್ವರ್​ ಕಿಡಿಕಾರಿದರು.

ಈಶ್ವರಪ್ಪ ಅವರು ಹಿರಿಯ ರಾಜಕಾರಣಿ ಅಧಿಕಾರ ಹೋಗಿದೆ. ಅವರು ಬಾಯಿ ಮುಚ್ಚಿಕೊಂಡು ತೆಪ್ಪಗೆ ಇರಬೇಕು. ಡಿ.ಕೆ ಶಿವಕುಮಾರ್​ ಕನಕಪುರದ ಬಂಡೆ ಮಾತ್ರವಲ್ಲ, ಕರ್ನಾಟಕದ ಬಂಡೆ. ಅವರನ್ನು ಟಚ್ ಕೂಡ ಮಾಡಲಾಗಲ್ಲ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಟಚ್ ಮಾಡಕ್ಕಾಗಲ್ಲ. ಈಶ್ವರಪ್ಪ ಅವರನ್ನೇ ಸೆಟ್ಲುಮೆಂಟ್ ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ. ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಅವರ ತಾಕತ್ತು ಬಿಜೆಪಿಯವರಿಗೆ ಗೊತ್ತಿಲ್ಲ. ಭಾನುವಾರ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ಇದರ ಅರ್ಥ ಚುನಾವಣೆಯಲ್ಲಿ ಸೋಲುವ ಭಯವೇ? ಎಂದು ಪ್ರದೀಪ್​ ಈಶ್ವರ್​ ಪ್ರಶ್ನಿಸಿದರು.

ಔಟ್ ಡೇಟೆಡ್ ಬಗ್ಗೆ ಮಾತನಾಡಲ್ಲ: ಸುಧಾಕರ್ ಮತ್ತೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇಲ್ಲ ಬಿಡಿ ಸಾರ್. ಔಟ್ ಡೇಟೆಡ್ ಬಗ್ಗೆ ನಾನು ಮಾತನಾಡಲ್ಲ ಎಂದು ಮಾಜಿ ಸಚಿವ ಸುಧಾಕರ್​​ ಔಟ್ ಡೇಟೆಡ್ ಎಂದು ಟೀಕಿಸಿದರು.

ಇದನ್ನೂ ಓದಿ : ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದ ರಾಜ್ಯಪಾಲರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.