ETV Bharat / state

ಕಾಂಗ್ರೆಸ್​ನಿಂದ ಚುನಾವಣಾ ಅಕ್ರಮ ಆರೋಪ: ತಮ್ಮ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಹಾಕುವಂತೆ ಮುನಿರತ್ನ ಆಗ್ರಹ - RR Nagar Constituency - RR NAGAR CONSTITUENCY

ಚುನಾವಣೆ ಹಿನ್ನೆಲೆ ಆರ್ ಆರ್ ನಗರ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕೆಂದು ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.

ಶಾಸಕ ಮುನಿರತ್ನ
ಶಾಸಕ ಮುನಿರತ್ನ
author img

By ETV Bharat Karnataka Team

Published : Mar 21, 2024, 5:52 PM IST

ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಇಲ್ಲವಾದಲ್ಲಿ, ಕ್ಷೇತ್ರದಲ್ಲಿ ಡಿಜೆ ಹಳ್ಳಿ - ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ, ಅದಕ್ಕಾಗಿ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕೆಂದು ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.

ವೈಯಾಲಿಕಾವಲ್​​ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿರುವ ಅನ್ಯಾಯ ಖಂಡಿಸಿ ಇಂದು ಸುದ್ದಿಗೋಷ್ಠಿ ಮಾಡುತ್ತಿದ್ದೇನೆ, ಯಶವಂತಪುರ ರೈಲು ನಿಲ್ದಾಣಕ್ಕೆ ಎಲ್ಲ ಭಾಗಗಳಿಂದಲೂ ರೈಲುಗಳು ಬರುತ್ತವೆ, ನಮ್ಮ ಸರ್ಕಾರ ಇದ್ದಾಗ ಜನರು ಓಡಾಡಲು ಅಲ್ಲಿ ಅಲ್ಲಿ ಒಂದು ರಸ್ತೆ ಮಾಡಲಾಗಿತ್ತು, ಪಕ್ಕದಲ್ಲೇ ಹೆರಿಗೆ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ಇದೆ, ಜನರಿಂದ ಕೂಡಾ ಈ ರಸ್ತೆಯ ಸದ್ಬಳಕೆ ಹೆಚ್ಚಾಗಿಯೇ ಇತ್ತು. ಆದರೆ, ಇದೀಗ ಅಲ್ಲಿರುವ ದನದ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಈ ರಸ್ತೆಯಿಂದ ತೊಂದರೆ ಆಗುತ್ತಿದೆ. ಇತ್ತೀಚೆಗೆ ದನದ ಮಾಂಸ ವ್ಯಾಪಾರಿಗಳೇ ಜೆಸಿಬಿ ತಂದು ರಸ್ತೆ ತೆರವು ಮಾಡಿದ್ದಾರೆ, 50 ಸಾವಿರ ಜನ ಓಡಾಡುವ ರಸ್ತೆ ಒಡೆದು ಹಾಕಲಾಗಿದೆ, ರಸ್ತೆಯ ಸಾಮಗ್ರಿಗಳನ್ನು ಕದ್ದೊಯ್ಯಲಾಗಿದೆ, ಸರ್ಕಾರದ ಆಸ್ತಿಯನ್ನು ದನದ ಮಾಂಸ ವ್ಯಾಪಾರಿಗಳು ನಾಶ ಮಾಡಿದ್ದಾರೆ, ಇದು ನನ್ನ ಕ್ಷೇತ್ರದಲ್ಲಿ ಆಗಿರುವ ಅನ್ಯಾಯ, ಕಾಂಗ್ರೆಸ್ ಪಕ್ಷದ ಮುಖಂಡ ಹನುಮಂತರಾಯಪ್ಪ ಮುಂದೆ ನಿಂತು ಈ ರಸ್ತೆ ಒಡೆಸಿ ಹಾಕಿದ್ದಾರೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಮುನಿರತ್ನ

ರಸ್ತೆ ಒಡೆದು ಹಾಕಿಸಿದ ಫೊಟೋ, ವಿಡಿಯೋಗಳನ್ನು ರಿಲೀಸ್ ಮಾಡಿ ತಮ್ಮ ಮಾತು ಮುಂದುವರೆಸಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರಿಗೆ ಕಾಂಗ್ರೆಸ್ ಆಮಿಷ ಒಡ್ಡುತ್ತಿದೆ, ಜನರಿಗೆ ಹಂಚಲು ಕುಕ್ಕರ್, ಸೀರೆ ಸಂಗ್ರಹ ಮಾಡಲಾಗಿದೆ, ಅಧಿಕಾರಿಗಳು ಇದರ ತಪಾಸಣೆ ಮಾಡುತ್ತಿಲ್ಲ, ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿಲ್ಲ, ದಾಳಿ ಮಾಡಿದರೆ ನಮಗೆ ತೊಂದರೆ ಆಗುತ್ತದೆ ಅಂತ ಹೆದರುತ್ತಿದ್ದಾರೆ. 8 ಲಕ್ಷ‌ ಕುಕ್ಕರ್​​ಗಳನ್ನು ಹಂಚಲು ಸಂಗ್ರಹ ಮಾಡಿಟ್ಟಿದ್ದಾರೆ, ಮನೆಗಳಿಗೆ ಹೋಗಿ ದುಡ್ಡು ಕೊಡುತ್ತಿದ್ದಾರೆ, ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅವ್ಯವಹಾರ ನಡೆಯುತ್ತಿದೆ, ಈ ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂದ್ರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ಇಲ್ಲವಾದಲ್ಲಿ ಆರ್ ಆರ್‌ ನಗರ ಕ್ಷೇತ್ರದಲ್ಲಿ ಡಿಜೆ ಹಳ್ಳಿ - ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ, ಅದಕ್ಕಾಗಿ ಪ್ಯಾರಾ ಮಿಲಿಟರಿ ಫೋರ್ಸ್ ಕ್ಷೇತ್ರಕ್ಕೆ ನಿಯೋಜಿಸಬೇಕೆಂದು ಆಗ್ರಹಿಸಿದರು.

ಶಾಸಕ ಮುನಿರತ್ನ
ಶಾಸಕ ಮುನಿರತ್ನ

ಕ್ಷೇತ್ರದಲ್ಲಿ ಏನಾದರೂ ಅನಾಹುತವಾದರೆ ಚುನಾವಣಾ ಆಯೋಗವೇ ಕಾರಣ ಆಗುತ್ತದೆ ಎಂದು ಅವರು ಇದೇ ವೇಳೆ ಆರೋಪಿಸಿದರು. ಮಾಜಿ ಸಿಎಂ ಡಿವಿ ಸದಾನಂದಗೌಡರಿಗೆ ಕಾಂಗ್ರೆಸ್ ಆಹ್ವಾನ ನೀಡಿತ್ತು. ಆದರೆ, ಸದಾನಂದಗೌಡರ ರಕ್ತದಲ್ಲಿ ಬಿಜೆಪಿ ಇದೆ. ಅಧಿಕಾರ, ಹಣದಿಂದ ಡಿವಿಎಸ್ ಅವರನ್ನು ಕಾಂಗ್ರೆಸ್ ಖರೀದಿ ಮಾಡಕ್ಕಾಗಲ್ಲ, ಡಿವಿಎಸ್ ಕೊನೇ ಉಸಿರು ಇರೋವರೆಗೂ ಬಿಜೆಪಿಯಲ್ಲಿ ಇರುತ್ತಾರೆ, ಪಕ್ಷಕ್ಕೆ ದ್ರೋಹ ಮಾಡಿ ಹೋಗುವ ಜಾಯಮಾನ ಅವರಲ್ಲಿಲ್ಲ ಎಂದರು.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೊಡಲ್ಲ ಅನ್ನೋ ಡಿಎಂಕೆ ಪ್ರಣಾಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, ತಮಿಳುನಾಡಿನ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ನಿರ್ಮಾಣಕ್ಕೆ ಬಿಡಲ್ಲ ಅಂತ ಸೇರಿಸಿದ್ದಾರೆ, ಕಾಂಗ್ರೆಸ್ ಸಹ ಇಂಡಿಯಾ ಭಾಗವಾಗಿದೆ, ಮೇಕೆದಾಟು ಮಾಡುತ್ತೇವೆ ಅಂತ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಡಿಎಂಕೆ ಪ್ರಣಾಳಿಕೆ ಬಗ್ಗೆ ಖರ್ಗೆಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ ಜನ ಡಾ.ಮಂಜುನಾಥ್ ಅವರ ಬಗ್ಗೆ ಒಳ್ಳೆಯ ಭಾವನೆ ಇಟ್ಕೊಂಡಿದ್ದಾರೆ, ಇಂಥ ಅಭ್ಯರ್ಥಿ ನಮಗೆ ಸಿಕ್ಕಿರೋದು ನಮ್ಮ ಸೌಭಾಗ್ಯ ಅಂತ ಕ್ಷೇತ್ರದ ಜನ ಮಾತಾಡುತ್ತಿದ್ದಾರೆ, ಡಾ.ಮಂಜುನಾಥ್ ಕಳಂಕರಹಿತರು, ಅವರು ಇಲ್ಲಿ ಅಭ್ಯರ್ಥಿ ಆಗಿರೋದು ಸಂತೋಷ ಅಂತ ಜನ ಹೇಳ್ತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ಪಡೆ ನಿಯೋಜಿಸುವಂತೆ ಚುನಾವಣೆ ಆಯೋಗಕ್ಕೆ ಹೆಚ್​ಡಿಕೆ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.