ತುಮಕೂರು: ಹೇಮಾವತಿ ನದಿ ನೀರನ್ನು ಮಾಗಡಿ ತಾಲೂಕಿಗೆ ಹಂಚಿಕೆ ಮಾಡುವ ಹೇಮಾವತಿ ಲಿಂಕ್ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಇಂಜಿನಿಯರ್ಗೆ ಶಾಸಕ ಎಂ.ಟಿ. ಕೃಷ್ಣಪ್ಪ ಖಡಕ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಫೋನ್ ಕರೆಯಲ್ಲಿ ಮಾತನಾಡಿದ ಅವರು, ಮಾಗಡಿ ತಾಲೂಕಿಗೆ ನಡೆಯುತ್ತಿರುವ ಕಾಮಗಾರಿ ಬಗ್ಗೆ ಇಂಜಿನಿಯರ್ ಜೊತೆ ತುರುವೇಕೆರೆಯಲ್ಲಿ ಮಾತನಾಡಿದರು.
ಕೆನಾಲ್ ಕಾಮಗಾರಿ ವಿರೋಧಿಸಿ ಕರೆದಿದ್ದ ಪತ್ರಿಕಾಗೋಷ್ಠಿಯ ವೇಳೆ ಶಾಸಕರು ಹಾಗೂ ಇಂಜಿನಿಯರ್ ನಡುವೆ ಈ ಫೋನ್ ಸಂಭಾಷಣೆ ನಡೆದಿದೆ. ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಮಾವತಿ ಜಲಾನಯನ ಅಭಿವೃದ್ಧಿ ಇಲಾಖೆ ಇಂಜಿನಿಯರ್ಗೆ ಶಾಸಕರು ಸೂಚಿಸಿದರು. ಇದೇ ವೇಳೆ, ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಸವಾಲು ಹಾಕಿದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿ.ಎಸ್.ಪುರ ಗ್ರಾಮದ ಬಳಿ ಕೆಲಸ ಮಾಡದಂತೆ ಇಂಜಿನಿಯರ್ಗೆ ತಿಳಿಸಿದರು. ಇಲಾಖೆಯ ಎಂಡಿಗೆ ನಿನ್ನೆ ದೂರವಾಣಿ ಮೂಲಕ ಕೆಲಸ ನಿಲ್ಲಿಸುವಂತೆ ಹೇಳಿದ್ದೇನೆ ಎಂದು ಇಂಜಿನಿಯರ್ಗೆ ಫೋನ್ ಕರೆಯಲ್ಲೇ ಮಾಹಿತಿ ನೀಡಿದರು.
ತಕ್ಷಣ ಕೆಲಸ ನಿಲ್ಲಿಸಿ, ಇಲ್ಲದಿದ್ದರೆ ನಾನೇ ಬಂದು ಕೆಲಸ ನಿಲ್ಲಿಸುತ್ತೇನೆ. ಇಂಜಿನಿಯರ್ ರವಿ ಅವರೇ ತಕ್ಷಣ ಕಾಮಗಾರಿ ನಿಲ್ಲಿಸಬೇಕು, ಇಲ್ಲದಿದ್ದರೆ 16ನೇ ತಾರೀಖಿನಿಂದ ನಾವು ಎಲ್ಲವನ್ನೂ ಮುಚ್ಚುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕುಡಿವ ನೀರು ನಿರ್ವಹಣೆ ಸಭೆ ನಡೆಸಲು ನೀತಿ ಸಂಹಿತೆ ವಿನಾಯಿತಿ ಕೋರಿದ ಪ್ರಿಯಾಂಕ್ ಖರ್ಗೆ - Minister Priyank Kharge