ETV Bharat / state

ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು: ತಪ್ಪಿದ ಅಪಾಯ - Car Accident

ಬಿಜೆಪಿ ಶಾಸಕ ಬೈರತಿ ಬಸವರಾಜ ಅವರ ಕಾರು ಕಂದಕಕ್ಕೆ ಉರುಳಿದ ಘಟನೆ ಹುಣಸಗಿ ತಾಲೂಕಿನಲ್ಲಿ ಸಂಭವಿಸಿದೆ.

mla-bairati-basavaraj-car-fell-into-ditch-near-hunasagi
ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು: ತಪ್ಪಿದ ಅಪಾಯ
author img

By ETV Bharat Karnataka Team

Published : Apr 29, 2024, 9:00 PM IST

ಯಾದಗಿರಿ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಶಾಸಕ ಬೈರತಿ ಬಸವರಾಜ ಅವರ ಕಾರು ಪಲ್ಟಿಯಾಗಿ, ಕಂದಕಕ್ಕೆ ಉರುಳಿದ ಘಟನೆ ಸೋಮವಾರ ಸಂಜೆ 5:30ರ ಸುಮಾರಿಗೆ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಸೀಮಾಂತರದಲ್ಲಿ ನಡೆದಿದೆ.

ಸುರಪುರ ವಿಧಾನಸಭಾ ಉಪಚುನಾವಣೆ ಹಾಗೂ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜುಗೌಡ ಹಾಗೂ ರಾಜಾ ಅಮರೇಶ ನಾಯಕ ಪರ ಪ್ರಚಾರಕ್ಕೆ ಬೈರತಿ ಬಸವರಾಜ ಬಂದಿದ್ದರು. ವಾಪಸ್​ ಬರುವಾಗ ಶಾಸಕ ಬೈರತಿ ಅವರು ಬೇರೊಂದು ವಾಹನದಲ್ಲಿದ್ದರು ಎನ್ನಲಾಗಿದ್ದು, ಹೀಗಾಗಿ ಅಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದ ಚಾಲಕ ಸತೀಶ್ ಹಾಗೂ ಗನ್ ಮ್ಯಾನ್ ಚಂದ್ರಶೇಖರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಣಸಗಿಯಿಂದ ಕಾಮನಟಗಿ ಗ್ರಾಮಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಹಿಂದುಗಡೆಯಿಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ ಎಂದು ತಿಳಿದುಬಂದಿದೆ. ಈ ಕುರಿತು ಸ್ಥಳಕ್ಕೆ ಹುಣಸಗಿ ಸಿಪಿಐ ಸಚಿನ್ ಚಲವಾದಿ, ಪಿಎಸ್ಐ ಸಂಗೀತಾ ಶಿಂಧೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮನಗರ: ಒಬ್ಬರನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಐವರು ವಿದ್ಯಾರ್ಥಿಗಳು - Five Students Died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.