ETV Bharat / state

ಸದನದಲ್ಲಿ ಸಚಿವರ ಗೈರು: ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಸದಸ್ಯರು - Opposition Members walkout - OPPOSITION MEMBERS WALKOUT

ಕಲಾಪ ಪ್ರಾರಂಭವಾದಾಗ ಸಚಿವರು ಇಲ್ಲದೇ ಇರುವುದನ್ನು ಆಕ್ಷೇಪಿಸಿದ ವಿರೋಧ ಪಕ್ಷದ ಶಾಸಕರು ಕೆಲಹೊತ್ತು ಸಭಾತ್ಯಾಗ ಮಾಡಿದ ಘಟನೆ ಇಂದು ವಿಧಾನಸಭೆ ಕಲಾಪದಲ್ಲಿ ನಡೆಯಿತು.

Vidhanasabha Session
ವಿಧಾನಸಭೆ ಕಲಾಪ (ETV Bharat)
author img

By ETV Bharat Karnataka Team

Published : Jul 18, 2024, 3:28 PM IST

Updated : Jul 18, 2024, 4:23 PM IST

ಬೆಂಗಳೂರು: ವಿಧಾನಸಭೆ ಕಲಾಪ ಆರಂಭದಲ್ಲಿ ಮೊದಲ ಸಾಲಿನಲ್ಲಿ ಆಡಳಿತ ಪಕ್ಷದ ಸಚಿವರಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಕೆಲಕಾಲ ಸಭಾತ್ಯಾಗ ಮಾಡಿದ ಘಟನೆ ಇಂದು ನಡೆಯಿತು.

ವಿಧಾನಸಭೆ ಕಲಾಪ (ETV Bharat)

ಬೆಳಗ್ಗೆ ವಿಧಾನಸಭೆ ಆರಂಭಗೊಂಡ ಕೂಡಲೇ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವರಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಬ್ಬ ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, "ಮೊದಲ ಸಾಲಿನಲ್ಲಿ ಯಾವ ಸಚಿವರೂ ಇಲ್ಲ, ಶೂನ್ಯವಿದೆ. 9.45 ನಿಮಿಷಕ್ಕೆ ನಾವು ಬಂದಿದ್ದೇವೆ. ಅಧಿವೇಶನ ಚೆನ್ನಾಗಿ ನಡೆಯಬೇಕು. ಹೊಸ ನಿಯಮ ಜಾರಿಗೆ ತಂದಿದ್ದೀರಿ. ಹೀಗಾದರೆ ಹೇಗೆ?" ಎಂದು ಪ್ರಶ್ನಿಸಿದರು.

ಈ ವೇಳೆ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, "ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ಹೊಸ ನಿಯಮ ತಂದಿದ್ದೀರಿ. ಆಡಳಿತ ಪಕ್ಷ ಮಾದರಿಯಾಗಬೇಕು. ಇದು ಯಾವ ರೀತಿ ಮಾಡೆಲ್‌ ಆಗಿದ್ದೀರಿ ನೋಡಿ. ಸಚಿವರಿಲ್ಲದ ಕಾರಣ ಸದನದ ಕಲಾಪವನ್ನು 10 ನಿಮಿಷ ಮುಂದೂಡಿ, ಆಡಳಿತ ಪಕ್ಷದವರು ಬುದ್ಧಿ ಕಲಿಯಲಿ. ವಿಧಾನಸಭೆಯಲ್ಲಿ ಹಾಜರಿರಬೇಕಾದ ಸಚಿವರ ಹೆಸರನ್ನು ಓದಿ" ಎಂದು ಸ್ಪೀಕರ್ ಯು.ಟಿ.ಖಾದರ್‌ ಅವರನ್ನು ಆಗ್ರಹಿಸಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್ಣ ಮಾತನಾಡಿ, "ಶಾಸಕರಿಗೆ ವಿಪ್‌ ನೀಡಲಾಗಿದೆ. ದೂರವಾಣಿ ಮೂಲಕ ಮಾತನಾಡಿದ್ದೇನೆ" ಎಂದು ಹೇಳಲು ಮುಂದಾದರು. ಆಗ ಅಶೋಕ್‌, "ರಾಜೀನಾಮೆ ಕೊಟ್ಟು ನೀವು ಮಂತ್ರಿಯಾಗಿ" ಎಂದು ಛೇಡಿಸಿದರು. ಮತ್ತೆ ಮಾತು ಮುಂದುವರೆಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, "ಗಂಭೀರವಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಮುಖ್ಯಮಂತ್ರಿಗಳಿಲ್ಲ, ಸಚಿವರಿಲ್ಲ ಅವರಿಗೆ ನೈತಿಕ ಹೊಣೆ ಇಲ್ಲ. ಇಡಿ ಪತ್ರಿಕಾ ಹೇಳಿಕೆ ನೀಡಿದೆ ನೋಡಿ' ಎಂದು ಪ್ರದರ್ಶಿಸಿದರು. ಅಷ್ಟರಲ್ಲಿ ಸದನಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, "ನಾವು ಮೂರ್ನಾಲ್ಕು ಸಚಿವರಿದ್ದೇವೆ. ಅವರು ಚರ್ಚೆ ಮಾಡಲಿ. ಸರ್ಕಾರ ಉತ್ತರ ನೀಡುತ್ತೇವೆ" ಎಂದರು.

ಮತ್ತೆ ಅಶೋಕ್‌ ಮಾತನಾಡಿ, "ಅಧಿವೇಶನಕ್ಕಾಗಿ ಕೋಟ್ಯಂತರ ರೂ. ಖರ್ಚಾಗುತ್ತದೆ. ಶಾಸಕರ ಊಟ, ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೇಜವಾಬ್ದಾರಿಯಿಂದ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡುತ್ತೇವೆ" ಎಂದು ಹೇಳಿ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೊರನಡೆದರು. ಜೆಡಿಎಸ್‌‍ ಶಾಸಕರೂ ಕೂಡ ಅವರನ್ನು ಹಿಂಬಾಲಿಸಿದರು.

ಸ್ಪೀಕರ್​ ಬೇಸರ: ಆಗ ಸ್ಪೀಕರ್ ಯು.ಟಿ.ಖಾದರ್‌ ಮಾತನಾಡಿ, "ವಿಪ್‌ ಅವರೇ ಎಲ್ಲಿದ್ದೀರಾ?, ಮನೆಯಲ್ಲಿದ್ದೀರಾ? ಅಥವಾ ಅಸೆಂಬ್ಲಿಯಲ್ಲಿದ್ದೀರಾ?, ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರಿಲ್ಲದೇ ಇರುವುದು ತಪ್ಪು. ಅರ್ಥ ಮಾಡಿಕೊಳ್ಳಬೇಕು. ಪ್ರತಿಪಕ್ಷದವರ ಆಗ್ರಹದಲ್ಲಿ ತಪ್ಪು ಇಲ್ಲ. ಮಂತ್ರಿಗಳಿಂದ ಕೆಟ್ಟ ಹೆಸರು ಬರುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಶಾಸಕ ರಾಜು ಕಾಗೆ, "ನಮ್ಮ ಕ್ಷೇತ್ರದವರು ಭೇಟಿಯಾಗಲು ಬಂದಿರುತ್ತಾರೆ. ಅವರನ್ನು ಮಾತನಾಡಿಸಿ ಬರಲು ತಡವಾಗುತ್ತದೆ. ನೀವು ಅಧಿವೇಶನವನ್ನು 9.30ಕ್ಕೆ ಕರೆದರೆ ತೊಂದರೆಯಾಗುತ್ತದೆ. 11 ಗಂಟೆಗೆ ಆರಂಭಿಸಿದರೆ ಅನುಕೂಲ. ನೀವು 7 ಗಂಟೆಗೆ ಕರೆದರೂ ಬರುತ್ತೇವೆ. ಸಂಜೆ ವೇಳೆ ಶಾಸಕರು ಭೇಟಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲ" ಎಂದರು.

ಮತ್ತೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್‌, "ವಿಧೇಯಕಗಳಿವೆ. ವಿಧೇಯಕಗಳ ಚರ್ಚೆಯಾಗಬೇಕು. ಕಾರ್ಯ ಕಲಾಪಗಳ ಪಟ್ಟಿ ಮುಗಿಸಬೇಕು. ಸಚಿವರಿಗೂ ಜವಾಬ್ದಾರಿ ಇರಬೇಕು. ಅಧಿವೇಶನ ನಡೆಸುವ ವೇಳೆ ಸಭೆಗಳನ್ನು ನಡೆಸಬಾರದು. ಅಧಿವೇಶನಕ್ಕೆ ತಡವಾಗಿ ಬರುವುದು ಸರಿಯಲ್ಲ. ಸಚಿವರು ಸರಿಯಾದ ಸಮಯಕ್ಕೆ ಬಂದರೆ ಶಾಸಕರು ಬರುತ್ತಾರೆ. ಅಧಿವೇಶನದ ಸಂದರ್ಭದಲ್ಲಿ ಬೆಳಗ್ಗೆ ಸಭೆ ನಡೆಸುವುದು ಸರಿಯಲ್ಲ. ಆ ಕಾರಣಕ್ಕೆ ಬೆಳಗ್ಗೆ 9.30ಕ್ಕೆ ಅಧಿವೇಶನವನ್ನು ಆರಂಭಿಸುತ್ತಿದ್ದೇವೆ. ಸಚಿವರು ಕಚೇರಿಯಲ್ಲಿದ್ದರೆ ಜನರೂ ಭೇಟಿಯಾಗಲು ಬರುತ್ತಾರೆ. ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಇನ್ನಾದರೂ ಇದು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ" ಎಂದು ಸೂಚಿಸಿದರು.

ಆಡಳಿತ ಪಕ್ಷದ ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, "ಮಂಗಳವಾರ ಸಂಜೆ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಇಂದು ಚರ್ಚೆ ಮಾಡಿ ಪರಿಹಾರ ಹುಡುಕಬೇಕಿತ್ತು. ಪ್ರಚಾರಕ್ಕಾಗಿ ಸಭಾತ್ಯಾಗ ಮಾಡಿದ್ದಾರೆ" ಎಂದು ಆಕ್ಷೇಪಿಸಿದರು.

ತಪ್ಪನ್ನು ತಿದ್ದಿಕೊಳ್ಳುತ್ತೇವೆ ಎಂದ ಸಚಿವರು: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಮಾತನಾಡಿ, "ಬಿಜೆಪಿ ಸರ್ಕಾರದ ಅವಧಿಯಲ್ಲಿ 11 ಗಂಟೆಗೆ ಅಧಿವೇಶನ ಕರೆದರೂ, 11.30 ಹಾಗೂ 12 ಗಂಟೆಗೆ ಸದನ ಶುರುವಾಗುತ್ತಿತ್ತು. 20 ನಿಮಿಷ ವಿಳಂಬವಾಗಿದೆ. ರಾಜಕಾರಣಕ್ಕಾಗಿ ಸಭೆ ತ್ಯಾಗ ಮಾಡಬಾರದು. ನಾವು ತಪ್ಪನ್ನು ತಿದ್ದಿಕೊಳ್ಳುತ್ತೇವೆ" ಎಂದು ಹೇಳಿದರು.

ಮತ್ತೆ ಮಾತನಾಡಿದ ಸ್ಪೀಕರ್, "ಸುಗಮ ಕಲಾಪ ಆಗಬೇಕು. ನಮ್ಮ ನಮ್ಮ ತಪ್ಪನ್ನು ಅರ್ಥ ಮಾಡಿಕೊಳ್ಳಬೇಕು. ಆಡಳಿತ ಪಕ್ಷದವರು ಪ್ರತಿಪಕ್ಷದವರನ್ನು ದೂಷಿಸುವುದು, ಪ್ರತಿಪಕ್ಷದವರು ಆಡಳಿತ ಪಕ್ಷದವರನ್ನು ದೂಷಿಸುವುದು ಸರಿಯಲ್ಲ. ಏನೇ ಕೆಲಸವಿದ್ದರೂ ಸಕಾಲಕ್ಕೆ ಸದನಕ್ಕೆ ಹಾಜರಾಗುವುದನ್ನು ರೂಢಿಸಿಕೊಳ್ಳಬೇಕು. ಸದನಕ್ಕೆ ಹೋಗುತ್ತೇವೆ ಎಂದರೆ ಶಾಸಕರಿಗೆ ಯಾರೂ ಬೇಡ ಎನ್ನುವುದಿಲ್ಲ. ಸಭಾತ್ಯಾಗ ಮಾಡುವುದು ಸರಿ ಎನ್ನುವುದಿಲ್ಲ. ಅವರು ಚರ್ಚೆ ಪ್ರಾರಂಭ ಮಾಡಬೇಕಿತ್ತು. ಎಲ್ಲರಲ್ಲೂ ಮನಃ ಪರಿವರ್ತನೆಯಾಗಬೇಕು" ಎಂದು ಹೇಳಿ ಮಂಗಳವಾರ ಸದನಕ್ಕೆ ಬೇಗ ಬಂದ ಶಾಸಕರ ಹೆಸರನ್ನು ಉಲ್ಲೇಖಿಸಿದರು. ನಂತರ, ರೈತನಿಗೆ ಮಾಲ್‌ನಲ್ಲಿ ಅಪಮಾನ ಮಾಡಿದ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು. ಅಷ್ಟರಲ್ಲಿ ಪ್ರತಿಪಕ್ಷದ ಶಾಸಕರು ಸದನಕ್ಕೆ ಆಗಮಿಸಿದರು.

ಕಾಂಗ್ರೆಸ್‌‍ ಶಾಸಕ ಕೋನರೆಡ್ಡಿ ಮಾತನಾಡಿ, "ಬಿಜೆಪಿಯ ಬಸನಗೌಡ ಯತ್ನಾಳ್‌, ಅಶೋಕ್‌ ಅವರ ನಡುವೆಯೇ ಗೊಂದಲವಿದೆ" ಎಂದರು. ಆಗ ಯತ್ನಾಳ್‌ ಮಾತನಾಡಿ, "ನಿಮ್ಮ ಬಗ್ಗೆ ನೋಡಿಕೊಳ್ಳಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಜಗಳದ ಬಗ್ಗೆ ನಿಮಗೇಕೆ ಕಾಳಜಿ" ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ವಿಧಾನಸೌಧ ಮುತ್ತಿಗೆ ಯತ್ನ, ಫ್ರೀಡಂ ಪಾರ್ಕ್​​ನಲ್ಲೇ ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ - Protest Against State Govt

Last Updated : Jul 18, 2024, 4:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.