ETV Bharat / state

ನಮ್ಮ ಸಿಎಂ ಟಗರು ಇದ್ದಂಗೆ, ಯಾರಿಗೂ ಭಯ ಬೀಳುವ ಪ್ರಶ್ನೆಯೇ ಇಲ್ಲ: ಜಮೀರ್ ಅಹ್ಮದ್ - Zameer Talk On CM - ZAMEER TALK ON CM

ಸಿಎಂ ಸಿದ್ದರಾಮಯ್ಯ ಟಗರು ಇದ್ದಂತೆ ಯಾವುದೇ ಕಾರಣಕ್ಕೂ ಯಾರಿಗೂ ಭಯ ಬೀಳಲ್ಲ ಎಂದು ಸಚಿವ ಜಮೀ‌ರ್ ಅಹ್ಮದ್‌ ಹೇಳಿದರು.

ZAMEER TALK ON CM
ಸಚಿವ ಜಮೀ‌ರ್ ಅಹ್ಮದ್‌ (ETV Bharat)
author img

By ETV Bharat Karnataka Team

Published : Sep 2, 2024, 2:41 PM IST

ಸಚಿವ ಜಮೀ‌ರ್ ಅಹ್ಮದ್‌ (ETV Bharat)

ಧಾರವಾಡ: ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತೆ ಅಂತಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾನೂ ಸಹ ಚಾಮರಾಜನಗರಕ್ಕೆ ಐದಾರು ಸಲ ಹೋಗಿದ್ದೇನೆ. ಇತ್ತೀಚೆಗಷ್ಟೇ ಭೇಟಿ ನೀಡಿ ಬಂದಿದ್ದೇವೆ. ನಮಗೆ ಏನಾದರೂ ಆಗಿದೆಯಾ? ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಲ್ಲ ಸುಳ್ಳು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವುದೊಂದು ಮೂಢನಂಬಿಕೆ ಎಂದರು. ಮುಡಾ ಹಗರಣ ಖಂಡಿಸಿ ಬಿಜೆಪಿ ನಡೆಸಿದ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಡಾ ಹಗರಣದಲ್ಲಿ ಸಿಎಂ ಪಾತ್ರ ಏನೂ ಇಲ್ಲ ಎಂದು ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಗೊತ್ತಿದೆ. ಅದಕ್ಕೆ ಕುಮಾರಸ್ವಾಮಿ ಪಾದಯಾತ್ರೆಗೆ ಮೊದಲು ಬರುವುದಿಲ್ಲ ಎಂದಿದ್ದರು. ಆದರೆ, ಬಿಜೆಪಿ ಹೈಕಮಾಂಡ್​ ಹೇಳಿದ್ದಕ್ಕೆ ಹೋದರು. ಪ್ರಕರಣವನ್ನು ಜೀವಂತವಾಗಿಡುವ ಮೂಲಕ ಹಿಂದುಳಿದ ವರ್ಗದ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ವಿನಾ ಕಾರಣ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಅವರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ಪತನವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದೆ. ಆದರೆ, ಅವರು ರಾಜ್ಯದ ಜನರ ಮುಖ್ಯಮಂತ್ರಿ ಎಂದು ಸಚಿವ ಜಮೀರ್ ಹೇಳಿದರು.

ಆರ್​ವಿ ದೇಶಪಾಂಡೆ ಹೇಳಿಕೆಗೆ, ದೇಶಪಾಂಡೆ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. 8-9 ಸಲ ಶಾಸಕರಾದವರು. ಅವರು ಒಮ್ಮೆ ಸಿಎಂ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ? ನನಗೂ ಕೂಡ ಆ ಆಸೆ ಇದೆ. ಮುಖ್ಯಮಂತ್ರಿ ಅಂದ್ರೆ ಯಾರಿಗೆ ಆಸೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಅದರಂತೆ ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರಷ್ಟೇ. ಇದರಲ್ಲಿ ಬೇರೇನೂ ಇಲ್ಲ. ಸದ್ಯಕ್ಕೆ ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಪ್ರಾಸಿಕ್ಯೂಷನ್ ಕೇಸ್​ನಲ್ಲಿ ಸಿದ್ದರಾಮಯ್ಯ ಅವರಿಗೆ ಏನೂ ಆಗುವುದಿಲ್ಲ. ಇದರಲ್ಲಿ ಸಿಎಂ ಪಾತ್ರ ಏನಿದೆ? ಎಂದು ಪ್ರಶ್ನಿಸಿದರು.

ಕೋವಿಡ್ ಕಾಲದ ಅವ್ಯವಹಾರದ ತನಿಖೆ ವಿಚಾರಕ್ಕೆ ಮಾತನಾಡಿ, ಒಂದೊಂದೇ ಹಗರಣ ಇಲ್ಲ, ಬಹಳ ಹಗರಣಗಳು ಇವೆ. ನಾವು ಇಷ್ಟು ದಿನ ಸುಮ್ಮನೆ ಕುಳಿತಿದ್ದೇ ತಪ್ಪು. ದ್ವೇಷ ರಾಜಕಾರಣ ಮಾಡಿದ್ದು ಯಾರು? ಏನೂ ಇಲ್ಲದೇ ಸಿದ್ದರಾಮಯ್ಯ ವಿರುದ್ಧ ಈ ಆರೋಪ‌ ಏಕೆ? ಮಾಧ್ಯಮದಲ್ಲಿ ಏಕೆ ಬರುತ್ತಿದೆ? ಆದರೂ, ಸಿಎಂ ಭಯ ಬೀಳಲ್ಲ. ಅವರು ಟಗರು ಇದ್ದಂತೆ. ಯಾರಿಗೂ ಭಯ ಬೀಳುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಯಾವತ್ತಿದ್ದರೂ ಹುಲಿಯೇ. ಬಿಜೆಪಿಯವರಿಗೆ ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಹೊಟ್ಟೆ ಕಿಚ್ಚು. ಕಾಂಗ್ರೆಸ್ ಸರ್ಕಾರ ಅಭದ್ರಗೊಳಿಸಲು ಈ ರೀತಿ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಇದೆ. ಎಲ್ಲ ಶಾಸಕರು ಮತ್ತು ರಾಜ್ಯದ ಜನರು ಅವರ ಪರ ಇದ್ದಾರೆ. ಪ್ರಕರಣದಲ್ಲಿ ಏನೂ ಇಲ್ಲ ಅಂತ ಗೊತ್ತಾಗಿದೆ ಎಂದು ಜಮೀರ್ ಹರಿಹಾಯ್ದರು.

ಇದನ್ನೂ ಓದಿ: ಕೆಪಿಎಸ್​​ಸಿ ಪೂರ್ವಭಾವಿ ಪರೀಕ್ಷೆ ಗೊಂದಲ: ಮರುಪರೀಕ್ಷೆ ನಡೆಸಲು ಸಿಎಂ ಸೂಚನೆ - KPSC EXAM ISSUE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.