ETV Bharat / state

ಶಕ್ತಿ ಗ್ಯಾರಂಟಿ ಸಫಲತೆಯ ಒಂದು ವರ್ಷ: ಕೈಪಿಡಿ ಬಿಡುಗಡೆ ಮಾಡಿ ಸಾಧನೆ ಜನರ ಮುಂದಿಟ್ಟ ರಾಮಲಿಂಗಾರೆಡ್ಡಿ - Booklet Released - BOOKLET RELEASED

ಸಾರಿಗೆ ಸಂಸ್ಥೆಗಳ ವರ್ಷದ ಸಾರ್ಥಕ ಸಾಧನೆಯ ಮಾಹಿತಿ ಒಳಗೊಂಡ ಕೈಪಿಡಿಯನ್ನು ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದರು. ಬಿಡುಗಡೆ ಬಳಿಕ ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಸಮಗ್ರ ಸಾರಿಗೆ ಸೌಲಭ್ಯವನ್ನು ಒದಗಿಸುತ್ತೇವೆ. ನುಡಿದಂತೆ ನಡೆಯುವ ನಮ್ಮ ಬದ್ಧತೆಯನ್ನು ಮುಂದುವರೆಸುವ ಆಶಾಭಾವ ನನ್ನದಾಗಿದೆ ಎಂದು ಅವರು ಹೇಳಿದರು.

BOOKLET RELEASED
ಸಚಿವ ರಾಮಲಿಂಗಾರೆಡ್ಡಿ (ETV Bharat)
author img

By ETV Bharat Karnataka Team

Published : Jul 24, 2024, 8:46 PM IST

ಬೆಂಗಳೂರು: ಶಕ್ತಿ ಗ್ಯಾರಂಟಿ ಸಫಲತೆಯ ಒಂದು ವರ್ಷ, ಮಹಿಳಾ ಸಬಲೀಕರಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಉಚಿತ ಪ್ರಯಾಣ ಯೋಜನೆಯಡಿ 249 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 6051 ಕೋಟಿ ಉಚಿತ ಟಿಕೆಟ್ ಮೌಲ್ಯವಾಗಿದೆ ಎನ್ನುವ ಅಂಶವನ್ನು ಉಲ್ಲೇಖಿಸಿ‌ ಸಾರಿಗೆ ಇಲಾಖೆಯ ವರ್ಷದ ಸಾಧನೆಯ ಕೈಪಿಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದ್ದು, ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಸಮಗ್ರ ಸಾರಿಗೆ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಹತ್ತು ಹಲವು ಕಾರ್ಮಿಕ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿಯೂ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣವಡೆಗಿನ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಾರಿಗೆ ಸಂಸ್ಥೆಯ ಸಮಸ್ತ ಕಾರ್ಮಿಕರು ಹಾಗೂ ಅಧಿಕಾರಿಗಳ ಕಾರ್ಯದಕ್ಷತೆ, ಪರಿಶ್ರಮ ಅನನ್ಯ ಮತ್ತು ಅಭಿನಂದನೀಯ, ಹಾಗೆಯೇ ಕಾರ್ಮಿಕ ಮುಖಂಡರುಗಳ ಸಹಕಾರವು ಬಹಳ ಪ್ರಮುಖವಾಗಿದ್ದು, ಇವರೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯ ಪ್ರಾರಂಭದಲ್ಲಿ ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಬೇಕಾಯಿತು. ಕಳೆದ 5 ವರ್ಷದ ಅವಧಿಯಲ್ಲಿ ಅಂದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರ ನಿಗಮಗಳಿಗೆ ಒಂದೇ ಒಂದು ಬಸ್​ ಯಾವುದೇ ನಿಗಮಕ್ಕೂ ಸೇರ್ಪಡೆಯಾಗಿರಲಿಲ್ಲ. 13988 ಹುದ್ದೆಗಳು ಖಾಲಿಯಿದ್ದರೂ ನೇಮಕಾತಿಯಾಗಿರಲಿಲ್ಲ. ತೀವ್ರ ಆರ್ಥಿಕ ಸಮಸ್ಯೆಗಳಿಂದ ನಿಗಮಗಳು ಬಳಲುತ್ತಿದ್ದವು. ಆದರೆ, ಈ ಎಲ್ಲ ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬುವ ಪ್ರಾಮಾಣಿಕ ಕಾರ್ಯವನ್ನು ಮಾಡಿದ್ದೇನೆಂಬ ತೃಪ್ತಿ ನನ್ನದಾಗಿದೆ. ಸಾರಿಗೆ ಸಂಸ್ಥೆಗಳ ಒಂದು ವರ್ಷದ ಸಾರ್ಥಕ ಸಾಧನೆಯ ಪ್ರಮುಖ ಮಾಹಿತಿಗಳನ್ನು ಒಳಗೊಂಡ ಈ ಕೈಪಿಡಿ ಸಾರಿಗೆ ಸಂಸ್ಥೆಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿರಿಸಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಸಮಗ್ರ ಸಾರಿಗೆ ಸೌಲಭ್ಯವನ್ನು ಒದಗಿಸುತ್ತೇವೆ. ನುಡಿದಂತೆ ನಡೆಯುವ ನಮ್ಮ ಬದ್ಧತೆ ಮುಂದುವರೆಸುವ ಆಶಾಭಾವ ನನ್ನದಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ವರ್ಷದ ಸಾಧನೆಯ ಸಂಕ್ಷಿಪ್ತ ನೋಟ:

  • 5,800 ಹೊಸ ಬಸ್​ಗಳ ಸೇರ್ಪಡೆಗೆ ಅನುಮೋದನೆ
  • 2863 ಹೊಸ ಬಸ್ಸುಗಳ ಸೇರ್ಪಡೆ (ಕರಾರಸಾ ನಿಗಮ 937, ಬೆಂಮಸಾ ಸಂಸ್ಥೆ 689, ವಾಕರಸಾ ಸಂಸ್ಥೆ 435, ಕಕರಸಾ ನಿಗಮ 802)
  • ಪಲ್ಲಕ್ಕಿ, ಅಶ್ವಮೇಧ ಕ್ಲಾಸಿಕ್, ಕಲ್ಯಾಣ ರಥ, ಅಮೋಘ ವರ್ಷ ಹೊಸ ಬಸ್​​ಗಳ ಸೇರ್ಪಡೆ
  • 9000 ಹುದ್ದೆಗಳ ನೇಮಕಾತಿಗೆ ಅನುಮತಿ
  • 1883 ಚಾಲಕ - ಕಂ -ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಆದೇಶ ನೀಡಿಕೆ
  • 6500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಶೀಘ್ರದಲ್ಲೇ ಪೂರ್ಣ (ಕರಾರಸಾ ನಿಗಮ 2500 ಚಾಲಕ-ಕಂ-ನಿರ್ವಾಹಕರು, ಬೆಂಮಸಾ ಸಂಸ್ಥೆ - 2000 ನಿರ್ವಾಹಕರು, ವಾಕರಸಾ ಸಂಸ್ಥೆ-1000 ಚಾಲಕರು, 1000 ನಿರ್ವಾಹಕರು)
  • 1277 ಹಳೆಯ ಬಸ್​​ಗಳ ಪುನಶ್ವೇತನ ಕಾರ್ಯ
  • ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿದಿನ ಕಾರ್ಯಾಚರಣೆಗೊಳಿಸುತ್ತಿದ್ದ 158909 ಟ್ರಿಪ್‌ಗಳ ಪ್ರಮಾಣವು 169627ಗೆ ಹೆಚ್ಚಳ, ಪ್ರತಿದಿನ 10718 ಹೆಚ್ಚುವರಿ ಟ್ರಿಪ್ಪುಗಳ ಕಾರ್ಯಾಚರಣೆ
  • 553 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪ ಆಧಾರದ ನೌಕರಿ ನೀಡಿಕೆ
  • ಅಪಘಾತದಲ್ಲಿ (ಆನ್ ಡ್ಯೂಟಿ/ಆಫ್ ಡ್ಯೂಟಿ) ಮೃತಪಟ್ಟ ಸಾರಿಗೆ ನಿಗಮದ ಸಿಬ್ಬಂದಿಗಳ ಅವಲಂಬಿತರಿಗೆ ರೂ.1 ಕೋಟಿ ಚೆಕ್ ವಿತರಣೆ
  • ಬಸ್​ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಬಸ್ ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ ಈ ಹಿಂದೆ ನೀಡುತ್ತಿದ್ದ ರೂ.3 ಲಕ್ಷ ಪರಿಹಾರ ಹಣವನ್ನು ರೂ.10 ಲಕ್ಷಕ್ಕೆ ಏರಿಕೆ
  • ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬಕ್ಕೆ ನೀಡಲಾಗುತ್ತಿದ್ದ ಕುಟುಂಬ ಕಲ್ಯಾಣ ವಿಮಾ ಯೋಜನೆ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಏರಿಕೆ
  • ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅಯವರೊಂದಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಕಕರಸಾ ನಿಗಮದ ಸಿಬ್ಬಂದಿಗಳಿಗಾಗಿ ಹೃದ್ರೋಗ ತಪಾಸಣೆ ಒಡಂಬಡಿಕೆ.
  • ನಮ್ಮ ಕಾರ್ಗೋ-20 ಸರಕು ಸಾಗಣೆ ವಾಹನಗಳ ಮೂಲಕ ಲಾಜಿಸ್ಟಿಕ್ಸ್ ಸೇವೆ ಆರಂಭ
  • ಸಾರಿಗೆ ವಿದ್ಯಾ ಚೇತನ ಯೋಜನೆ - ಸಿಬ್ಬಂದಿಗಳ ಮಕ್ಕಳಿಗೆ ಅತ್ಯಧಿಕ ಮೊತ್ತದ ವಿದ್ಯಾರ್ಥಿ ವೇತನ ಇಲ್ಲಿಯವರೆಗೆ ರೂ.2 ಕೋಟಿ ಪಾವತಿ
  • ವಾಕರಸಾ ಸಂಸ್ಥೆಯ ಸಿಬ್ಬಂದಿಗಳಿಗೆ ಕಿಮ್ಸ್ ನೊಂದಿಗೆ 'ನಗದು ರಹಿತ' ವೈದ್ಯಕೀಯ ಸೌಲಭ್ಯ

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ: ಸಚಿವ ರಾಮಲಿಂಗಾ ರೆಡ್ಡಿ - BUS TICKET FARE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.