ಬೆಂಗಳೂರು : ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕ್ಷಿ, ಪುರಾವೆ ಕೊಡಬೇಕಲ್ವಾ.? ಗುತ್ತಿಗೆದಾರ ಸಚಿನ್ ಆರೋಪ ಮಾಡಿರುವವರು ನನಗೆ ಆಪ್ತರು ಅನ್ನೋದು ಇರಬಹುದು. ಐದು ಜನರ ಹೆಸರಿದೆ, ತನಿಖೆ ಆಗಲಿ. ಬಿಜೆಪಿಯವರು ಹೆಣ ಬಿದ್ದಾಗ ರಾಜಕೀಯ ಮಾಡೋದನ್ನ ಮೊದಲು ಬಿಡಬೇಕು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಮಾದರಿಯಲ್ಲಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ನೈತಿಕತೆ ಇರೋದಕ್ಕೆ ನಿಮ್ಮ ಮುಂದೆ ಕುಳಿತಿದ್ದೇನೆ. ಪ್ರಕರಣ ತನಿಖೆ ಆಗಲಿ ಅಂತ ಹೇಳಿದ್ದೇನೆ. ಸತ್ಯಶೋಧನೆ ಅಂತ ಎಲ್ಲೆಡೆ ಓಡಾಡ್ತಿದ್ದಾರೆ. ಬಿಜೆಪಿಯವರು ಇಂಡಿಪೆಂಡೆಂಟ್ ತನಿಖೆ ಸಂಸ್ಥೆ ಮಾಡ್ತಿದ್ದಾರಾ.? ಇಲ್ಲಿಯವರೆಗೂ ಪ್ರೂವ್ ಮಾಡಿದ್ದಾರಾ?. ಬಿಜೆಪಿಯವರಿಗೆ ಸಲಹೆ ಕೊಡ್ತೀನಿ. ನಿಮ್ಮ ಕಲ್ಬುರ್ಗಿ ನಾಯಕರ ಬಗ್ಗೆ ಮೊದಲು ತಿಳಿದುಕೊಂಡು ಬನ್ನಿ. ಇಲ್ಲದಿದ್ರೆ ನಿಮ್ಮ ಕುರ್ಚಿಗೆ ಗೌರವ ಇಲ್ಲ. ನೀವು ರಾಜ್ಯಾಧ್ಯಕ್ಷ ಇದ್ದೀರಿ. ಇಲ್ಲದಿದ್ರೆ ಜನ ನಿಮಗೆ ಗೌರವಿಸೋದಿಲ್ಲ. ಒಂದು ರೂಪಾಯಿ ಭ್ರಷ್ಟಾಚಾರ ನನ್ನ ಅವಧಿಯಲ್ಲಿ ಮಾಡಿಲ್ಲ. ಮೂರು ಬಾರಿ ನಾನು ಸಚಿವ ಆಗಿದ್ದೇನೆ ಎಂದರು.
ನಾನು ನಿಮ್ಮ RSS, ನಿಮ್ಮ ಸಿದ್ಧಾಂತದ ವಿರೋಧ ಇದ್ದೇವೆ. ಹಾಗಾಗಿ ನನ್ನನ್ನ ಟಾರ್ಗೆಟ್ ಮಾಡಿದ್ದೀರಿ. ನೀವು IT, ED, ಅಮಿತ್ ಶಾ ಅವರನ್ನ ಬಿಟ್ರೂ ನಾನು ಹೆದರೋದಿಲ್ಲ. ನಮ್ಮ ತಂದೆ ಕೂಡ ಅದೇ ರೀತಿಯಲ್ಲೇ ಬಂದವರು. ಬಿಜೆಪಿ ನಿಯೋಗ ಹೋಗಬೇಕಿರೋದು ಮುನಿರತ್ನ ಮನೆಗೆ. ಆಗದವರಿಗೆ HIV ಚುಚ್ಚೋಕೆ ಹೋಗಿದ್ರಲ್ಲ ಅದಕ್ಕೆ ಸತ್ಯಶೋಧನ ಸಮಿತಿ ಹೋಗಬೇಕು. ನ್ಯಾ. ಮೈಕಲ್ ಡಿ ಕುನ್ಹಾ ವರದಿ ಬಂದಿದೆ. ಬಿಜೆಪಿಯವರು ಹೇಳ್ತಿದ್ದಾರಲ್ಲ ಯಡಿಯೂರಪ್ಪ ವೇದಿಕೆ ಹತ್ತಬಾರದು ಅಂತ. ಮೊದಲು ಅದರ ಬಗ್ಗೆ ಸತ್ಯಶೋಧನೆ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನ ತೆಗೆಯುವ ಕೆಲಸ ಮಾಡಿ. ನನ್ನ ಮೇಲೆ ಆರೋಪ ಮಾಡಿ ಏನು ಸಾಬೀತು ಮಾಡಿದ್ರು ಹೇಳಿ. ಅನ್ವರ್ ಮಾಣಿಪ್ಪಾಡಿ ಆರೋಪದ ಬಗ್ಗೆ ಸತ್ಯ ಶೋಧನೆ ಆಗಬೇಕಿದೆ. ಮನೆಗೆ ಹೋದಾಗ ಕಳ್ಳ ಅಂತ ಗನ್ ಮ್ಯಾನ್ ಕರೆದು ಓಡಿಸಿದ್ರಲ್ಲ ಅದನ್ನ ತಿಳಿಸಿ ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ: ಪ್ರಿಯಾಂಕ್ ಖರ್ಗೆ - MINISTER PRIYANK KHARGE