ಬೆಂಗಳೂರು: ಅಹಿಂದ, ನಾರಿ ಶಕ್ತಿ ಎನ್ನುತ್ತ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರು ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳಾ ರಾಷ್ಟ್ರಪತಿಗೆ ಕೊಡುವ ಗೌರವ ಇದೇನಾ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
-
.@siddaramaiah ನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
— Pralhad Joshi (@JoshiPralhad) January 29, 2024 " class="align-text-top noRightClick twitterSection" data="
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ… pic.twitter.com/mInJUPbSHt
">.@siddaramaiah ನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
— Pralhad Joshi (@JoshiPralhad) January 29, 2024
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ… pic.twitter.com/mInJUPbSHt.@siddaramaiah ನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
— Pralhad Joshi (@JoshiPralhad) January 29, 2024
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ… pic.twitter.com/mInJUPbSHt
ಏಕವಚನದ ಶೋಕಿ: ದೇಶದ ಪ್ರಧಾನಿಯನ್ನು, ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಮಹಿಳಾ ರಾಷ್ಟ್ರಪತಿ ಬಗ್ಗೆ ಬಹಿರಂಗ ಸಭೆಯಲ್ಲೇ ಏಕವಚನದಲ್ಲಿ ಮಾತನಾಡುವ ನಿಮ್ಮ ಸಂಸ್ಕೃತಿ- ಸಭ್ಯತೆ ಇದೇನಾ? ಎಂದು ಪ್ರಹ್ಲಾದ ಜೋಶಿ ಹರಿ ಹಾಯ್ದಿದ್ದಾರೆ. ಇದು, ರಾಷ್ಟ್ರಪತಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗೆ ನೀವು ಅಗೌರವ ತೋರಿದಂತೆ ಎಂದು ಹೇಳಿದ್ದಾರೆ.
ದುರಹಂಕಾರ ನಿಮ್ಮ ಮತ್ತು ಪಕ್ಷದ ಅವನತಿಗೆ ಬುನಾದಿ ಆಗಲಿದೆ ಎಚ್ಚರ!:ಸಿದ್ದರಾಮಯ್ಯ ಅವರೇ, ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ ಎಂದು ಸಚಿವ ಜೋಶಿ ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ಗೆ ಗೌರವವಿಲ್ಲ ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಯೇ ಇದ್ದಂತಿದೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
ದಲಿತರು, ಹಿಂದುಳಿದವರು, ಶೋಷಿತರ ಮೇಲೆ ದಬ್ಬಾಳಿಕೆ ನಡೆಸಿ, ಏಕವಚನದಲ್ಲಿ ನಿಂದಿಸುವುದು ಸರ್ವಾಧಿಕಾರಿ ಅಲಿಯಾಸ್ ಮಜವಾದಿ @siddaramaiah ಅವರ ನಿರಂಕುಶ ಪ್ರಭುತ್ವ!
— BJP Karnataka (@BJP4Karnataka) January 29, 2024 " class="align-text-top noRightClick twitterSection" data="
ಅವರು ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೋಷಣೆ ಮಾಡುವುದಕ್ಕೂ ಹೇಸುವುದಿಲ್ಲ!
ಆದರೆ, ಇಟಲಿ ಮೇಡಮ್ ಸೋನಿಯಾ ಗಾಂಧಿ ಅವರೆಂದರೆ, ಮಜವಾದಿಯವರಿಗೆ ಇನ್ನಿಲ್ಲದ… pic.twitter.com/tF8vx6EZI5
">ದಲಿತರು, ಹಿಂದುಳಿದವರು, ಶೋಷಿತರ ಮೇಲೆ ದಬ್ಬಾಳಿಕೆ ನಡೆಸಿ, ಏಕವಚನದಲ್ಲಿ ನಿಂದಿಸುವುದು ಸರ್ವಾಧಿಕಾರಿ ಅಲಿಯಾಸ್ ಮಜವಾದಿ @siddaramaiah ಅವರ ನಿರಂಕುಶ ಪ್ರಭುತ್ವ!
— BJP Karnataka (@BJP4Karnataka) January 29, 2024
ಅವರು ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೋಷಣೆ ಮಾಡುವುದಕ್ಕೂ ಹೇಸುವುದಿಲ್ಲ!
ಆದರೆ, ಇಟಲಿ ಮೇಡಮ್ ಸೋನಿಯಾ ಗಾಂಧಿ ಅವರೆಂದರೆ, ಮಜವಾದಿಯವರಿಗೆ ಇನ್ನಿಲ್ಲದ… pic.twitter.com/tF8vx6EZI5ದಲಿತರು, ಹಿಂದುಳಿದವರು, ಶೋಷಿತರ ಮೇಲೆ ದಬ್ಬಾಳಿಕೆ ನಡೆಸಿ, ಏಕವಚನದಲ್ಲಿ ನಿಂದಿಸುವುದು ಸರ್ವಾಧಿಕಾರಿ ಅಲಿಯಾಸ್ ಮಜವಾದಿ @siddaramaiah ಅವರ ನಿರಂಕುಶ ಪ್ರಭುತ್ವ!
— BJP Karnataka (@BJP4Karnataka) January 29, 2024
ಅವರು ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೋಷಣೆ ಮಾಡುವುದಕ್ಕೂ ಹೇಸುವುದಿಲ್ಲ!
ಆದರೆ, ಇಟಲಿ ಮೇಡಮ್ ಸೋನಿಯಾ ಗಾಂಧಿ ಅವರೆಂದರೆ, ಮಜವಾದಿಯವರಿಗೆ ಇನ್ನಿಲ್ಲದ… pic.twitter.com/tF8vx6EZI5
ಸಿಎಂ ತಪ್ಪೊಪ್ಪಿಕೊಳ್ಳಲಿ : ಇಂಥ ಬೇಜವಾಬ್ದಾರಿ ನಡವಳಿಕೆ ಅತ್ಯಂತ ಪ್ರಜಾಪ್ರಭುತ್ವಕ್ಕೆ ಮಾರಕ. ಮಾತೆತ್ತಿದರೆ ಸಂವಿಧಾನ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ತಪ್ಪೊಪ್ಪಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಒತ್ತಾಯ ಮಾಡಿದರು.
ಇದನ್ನೂಓದಿ:ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದ ಸಿಎಂ: ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ? ಎಂದ ಹೆಚ್ಡಿಕೆ
ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿ ಏಕವಚನ ಬಳಸಿದ್ದರು. ಈ ಸಂಬಂಧ ಮಾಜಿ ಸಿಎಂ ಹೆಚ್ಡಿಕೆ ಸಿದ್ದರಾಮಯ್ಯ ಅವರು ಆಡಿದ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಸಿಎಂ ತಾವಾಡಿದ ಮಾತಿಗೆ ವಿಷಾದ ಕೂಡಾ ವ್ಯಕ್ತಪಡಿಸಿದ್ದರು.