ETV Bharat / state

ಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಮಧು ಬಂಗಾರಪ್ಪ ಭೇಟಿ: ಗೀತಾ ಶಿವರಾಜ್​ಕುಮಾರ್ ದಂಪತಿಯಿಂದ ನೆರವು - Madhu Bangarappa

author img

By ETV Bharat Karnataka Team

Published : Jun 29, 2024, 10:37 PM IST

Updated : Jun 29, 2024, 10:52 PM IST

ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಜನ ಮೃತಪಟ್ಟಿದ್ದರು. ಸಚಿವ ಮಧು ಬಂಗಾರಪ್ಪ ಇಂದು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಮಧು ಬಂಗಾರಪ್ಪ ಭೇಟಿ
ಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಮಧು ಬಂಗಾರಪ್ಪ ಭೇಟಿ (ETV Bharat)

ಸಚಿವ ಮಧು ಬಂಗಾರಪ್ಪ (ETV Bharat)

ಶಿವಮೊಗ್ಗ: ಹಾವೇರಿ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸ್ವಗ್ರಾಮವಾದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತರಾದ ಆದರ್ಶ, ರಾಷ್ಟ್ರೀಯ ಫುಟ್​ಬಾಲ್ ಆಟಗಾರ್ತಿ ಮಾನಸ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಗ್ರಾಮಸ್ಥರು ನಡೆಸಿದ ಸಭೆಯಲ್ಲಿ ಭಾಗಿಯಾಗಿ ಮೃತರ ಕುಟುಂಬಸ್ಥರ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದ್ದು, ಇನ್ನೂ ಹೆಚ್ಚಿನ ಸಹಾಯ ಆರ್ಥಿಕ ಸಹಾಯ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಜೊತೆಗೆ ವೈಯಕ್ತಿಕವಾಗಿ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರು ಪ್ರತಿಯೊಬ್ಬರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಲು ಸಮ್ಮತಿಸಿದ್ದು, ಶೀಘ್ರವಾಗಿ ಕುಟುಂಬದವರಿಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಶಿವಮೊಗ್ಗ ಕೆಡಿಪಿ ಸಭೆಯಲ್ಲಿ ಗೋಹತ್ಯೆ‌ ಪ್ರಸ್ತಾಪ, ಬಿಲ್ಕಿಸ್ ಬಾನು ಜೊತೆ ಜಟಾಪಟಿ; ರಾಜೀನಾಮೆ ಸವಾಲೆಸೆದ ಶಾಸಕ ಚನ್ನಬಸಪ್ಪ - cow slaughter issue

Last Updated : Jun 29, 2024, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.