ETV Bharat / state

ಬೆಳಗಾವಿ ಬೆಂಕಿ ದುರಂತ: ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಚಿವೆ ಹೆಬ್ಬಾಳ್ಕರ್ ಸಾಂತ್ವನ - Belagavi Fire Tragedy - BELAGAVI FIRE TRAGEDY

ಬೆಳಗಾವಿಯಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೃತಪಟ್ಟ ಯುವಕನ ಕುಟುಂಬಸ್ಥರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಸಾಂತ್ವನ ಹೇಳಿದರು.

minister-lakshmi-hebbalkar-condolences
ಬೆಳಗಾವಿಯಲ್ಲಿ ಇತ್ತೀಚಿಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಯುವಕನ ತಾಯಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಂತ್ವನ (ETV Bharat)
author img

By ETV Bharat Karnataka Team

Published : Aug 12, 2024, 4:54 PM IST

Updated : Aug 12, 2024, 5:32 PM IST

ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಚಿವೆ ಹೆಬ್ಬಾಳ್ಕರ್ ಸಾಂತ್ವನ (ETV Bharat)

ಬೆಳಗಾವಿ: ಇತ್ತೀಚೆಗೆ ಬೆಳಗಾವಿ ತಾಲೂಕಿನ ನಾವಗೆ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ ಯುವಕ ಯಲಗೊಂಡ ಸಣ್ಣಮಲ್ಲಪ್ಪ ಗುಂಡ್ಯಾಗೋಳ ಅವರ ಕುಟುಂಬಸ್ಥರನ್ನು ಇಂದು ಭೇಟಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಂತ್ವನ ಹೇಳಿದರು.

"ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಯಲಗೊಂಡ ಕ್ರಿಯಾಶೀಲ‌ ವ್ಯಕ್ತಿಯಾಗಿದ್ದ. ಆತನ ಕುಟುಂಬದೊಂದಿಗೆ ನಮ್ಮ ಕುಟುಂಬ ಜೊತೆಗಿರುತ್ತದೆ" ಎಂದು‌ ಸಚಿವೆ ಭರವಸೆ ನೀಡಿದರು.

minister-lakshmi-hebbalkar
ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ಯಲಗೊಂಡ ಅವರ ತಾಯಿಯ ರೋಧನೆ ಕಂಡು ಕಣ್ಣೀರು ಹಾಕಿದ ಸಚಿವೆ, ಅವರಿಗೆ ಸ್ವತಃ ಹಣ್ಣು ತಿನ್ನಿಸಿ ಸಮಾಧಾನಪಡಿಸಿದರು. "ಸಾವು-ನೋವು ಎಲ್ಲವೂ ದೇವರ ಇಚ್ಛೆ. ಇದನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ನೀವು ನಿಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿ" ಎಂದು ಹೇಳಿದರು.

minister-lakshmi-hebbalkar-condolences
ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಕಿಯಲ್ಲಿ ಬೆಂದ ಮಗ, ಅನಾಥವಾದ ಮನೆ: 2 ಕೋಟಿ ರೂ. ಪರಿಹಾರಕ್ಕೆ ತಂದೆ ಆಗ್ರಹ - Demand for 2 Crore compensation

Last Updated : Aug 12, 2024, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.