ETV Bharat / state

ಶ್ರೀರಾಮುಲುರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಪ್ರಸ್ತಾಪ ಇಲ್ಲ : ಜನಾರ್ದನ ರೆಡ್ಡಿಗೆ ಮಹಾದೇವಪ್ಪ ತಿರುಗೇಟು - MINISTER H C MAHADEVAPPA

ಬಿಜೆಪಿ ನಾಯಕ ಶ್ರೀರಾಮುಲು ಅವರನ್ನ ಕಾಂಗ್ರೆಸ್​ ಪಕ್ಷಕ್ಕೆ ಕರೆತರುವ ಪ್ರಸ್ತಾಪ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹಾದೇವಪ್ಪ ಹೇಳಿದ್ದಾರೆ.

minister-h-c-mahadevappa
ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹಾದೇವಪ್ಪ (ETV Bharat)
author img

By ETV Bharat Karnataka Team

Published : Jan 25, 2025, 4:34 PM IST

ಬೆಳಗಾವಿ : ಸಚಿವ ಸತೀಶ್​ ಜಾರಕಿಹೊಳಿ ಅವರನ್ನ ಮಣಿಸಲು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲಾಗುತ್ತಿದೆ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಟೀಕೆಗೆ ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ ಮಹಾದೇವಪ್ಪ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದಲ್ಲಿ ಬಿರುಕು ಉಂಟು ಮಾಡಲು ಇಂತಹ ಅಂತೆ-ಕಂತೆಗಳನ್ನು ಸೃಷ್ಟಿಸಲಾಗುತ್ತಿದೆ. ಇವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳು. ಕಾಂಗ್ರೆಸ್​ನಲ್ಲಿ ಇಂತವೆಲ್ಲಾ ನಡೆಯುವುದಿಲ್ಲ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹಾದೇವಪ್ಪ ಅವರು ಮಾತನಾಡಿದರು (ETV Bharat)

ಒಂದು ವೇಳೆ ಶ್ರೀರಾಮುಲು ಕಾಂಗ್ರೆಸ್​ಗೆ ಬಂದರೆ ಸ್ವಾಗತಿಸುತ್ತಿರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಸ್ತಾಪವೇ ಇಲ್ಲ. ಹಿಪ್ಪನ್ ಬರ್ಡ್ಸ್ ಯಾಕೆ? ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನ ಸೆಳೆಯಲು ಅನೇಕ ತಂತ್ರಗಾರಿಕೆ ಆಗಿರಬಹುದು. ಜನ ನಮಗೆ ಆಶೀರ್ವಾದ ಕೊಟ್ಟಿದ್ದಾರೆ. ಸರ್ಕಾರ ನಡೆಸುತ್ತಿದ್ದೇವೆ ಎಂದರು.

ಅಹಿಂದ ನಾಯಕರಾಗಿ ಸತೀಶ್ ಜಾರಕಿಹೊಳಿ ಅವರು ಬೆಳೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ನಾಯಕರನ್ನೇ ಕರೆತರುವ ಪ್ರಯತ್ನ ನಡೆದಿರುವ ಕುರಿತು ಕೇಳಿದ ಪ್ರಶ್ನೆಗೆ, ಈ ಪ್ರಶ್ನೆ ಅಪ್ರಸ್ತುತ. ಇಂತಹ ಯಾವ ಪ್ರಶ್ನೆಗಳು ಕೂಡ ಸರ್ಕಾರ ಹಾಗೂ ಪಕ್ಷದ ಮುಂದೆ ಇಲ್ಲವೇ ಇಲ್ಲ ಎಂದು ಸಮಜಾಯಿಷಿ ನೀಡಿದರು.

ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಹಾವಳಿ ಬಗ್ಗೆ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್, ಸಹಕಾರಿ ಸಂಘದಿಂದ ಫೈನಾನ್ಸ್​ಗಳು ಅನುಮತಿ ಪಡೆದು, ಅವುಗಳ ಮಾರ್ಗಸೂಚಿಯಡಿ ಕಾನೂತ್ಮಕವಾಗಿ ಅವರು ವ್ಯವಹರಿಸುತ್ತಿದ್ದಾರೆ. ಸಾಲದ ನೆಪದಲ್ಲಿ ಮಹಿಳೆಯರ ಮೇಲೆ ಕೇಸ್ ಹಾಕುವುದು ಸರಿಯಲ್ಲ. ಕಾನೂನಿನ ಪ್ರಕಾರ ಮಹಿಳೆಯರಿಗೆ ಶಿಕ್ಷೆ ಕೊಡುವುದಾದರೆ ಕಾನೂನು ಮೂಲಕವೇ ಅವರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ಸಭೆ ಕರೆದಿದ್ದಾರೆ. ಇಂತಹ ಘಟನೆ ತಪ್ಪಿಸಲು ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಮೈಸೂರು ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ವಿರೋಧ ಮಾಡುತ್ತಿಲ್ಲ. ಕೆಲವು ಆಸ್ತಿಗಳು ಸರ್ಕಾರಕ್ಕೆ ಸೇರಬೇಕು ಎಂಬ ವಾದ ನಡೆಯುತ್ತಿದೆ. ಮೈಸೂರಿನಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕೆ ಟಿಡಿಆರ್ ಮಾಡಬೇಕಾಗಿದೆ. ಹೆಚ್ಚಿನ ಪ್ರಮಾಣದ ಅನುದಾನವನ್ನು ನೀಡಲು ಸಾಧ್ಯವಾಗದ ಹಿನ್ನೆಲೆ ನಿನ್ನೆ ತುರ್ತು ಸಚಿವ ಸಂಪುಟ ಸಭೆ ಮಾಡಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ಏರ್ಪಟ್ಟಿರುವುದರ ಕುರಿತ ಪ್ರಶ್ನೆಗೆ, ಇವು ಯಾವೂ ರಾಜ್ಯದ ವಿಷಯಗಳಲ್ಲ. ಎಲ್ಲಾ ಹೈಕಮಾಂಡ್ ಮುಂದೆ ಇರುವ ವಿಷಯಗಳು. ಪಕ್ಷ ಮತ್ತು ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂದರು.

ಇದನ್ನೂ ಓದಿ : ಜೆಪಿ ನಡ್ಡಾ ಕರೆ ಮಾಡಿದ್ದರು, ಅವರಿಗೆ ಎಲ್ಲ ಮಾಹಿತಿ ನೀಡಿದ್ದೇನೆ : ಬಿ ಶ್ರೀರಾಮುಲು - B SRIRAMULU

ETV Bharat Logo

Copyright © 2025 Ushodaya Enterprises Pvt. Ltd., All Rights Reserved.