ETV Bharat / state

ಗುತ್ತಿಗೆ ಆಧಾರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿ: ಸಚಿವ ದಿನೇಶ್ ಗುಂಡೂರಾವ್ - Health Inspector Recruitment - HEALTH INSPECTOR RECRUITMENT

ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ತಿಳಿಸಿದರು.

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ (ETV Bharat)
author img

By ETV Bharat Karnataka Team

Published : Jul 19, 2024, 1:25 PM IST

ಬೆಂಗಳೂರು: ಖಾಲಿ ಇರುವ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಮೊದಲು ಗುತ್ತಿಗೆ ಆಧಾರದಲ್ಲಿ ತಕ್ಷಣವೇ ನೇಮಿಸಿಕೊಂಡು ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡುತ್ತೇವೆ. ಈ ವರ್ಷ ನೇಮಕಾತಿಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಕೇಶವಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ನಿರೀಕ್ಷಣಾಧಿಕಾರಿ ಕೊರತೆ ಇದೆ, 5,944 ಆರೋಗ್ಯ ನಿರೀಕ್ಷಕರ ಹುದ್ದೆ ಇದೆ. ಆದರೆ 3950 ಆರೋಗ್ಯ ನಿರೀಕ್ಷಕರು ಮಾತ್ರ ಇದ್ದಾರೆ, 8 ವರ್ಷಗಳಿಂದ ಈ ಹುದ್ದೆಗಳ ಭರ್ತಿ ಆಗಿಲ್ಲ ಎನ್ನುವ ಆರೋಪ ಸರಿಯಿದೆ. ಆರೋಗ್ಯ ನಿರೀಕ್ಷಣೆಯ ಶೇ.40 ರಷ್ಟು ಹುದ್ದೆ ಖಾಲಿ ಇವೆ, ನೇಮಕಾತಿಗೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಬೇಕು. ಹಾಗಾಗಿ ಮೊದಲು ಗುತ್ತಿಗೆ ಆಧಾರದಲ್ಲಿ ಹುದ್ದೆಗಳ ಭರ್ತಿ ಮಾಡಿ ನಂತರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದೇನೆ. ನಮ್ಮದು ಸೇವಾ ಕ್ಷೇತ್ರ, ಹೆಚ್ಚಿನ‌ ಸಿಬ್ಬಂದಿ ಅಗತ್ಯ ನೇಮಕಾತಿ ವಿಚಾರದಲ್ಲಿ ಈ ವರ್ಷ ಒಳ್ಳೆಯ ನಿರ್ಧಾರ ಆಗಲಿದೆ. ಇನ್ನು ಡೆಂಗ್ಯೂ ನಿಯಂತ್ರಣದಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ, ಇರುವ ಸಿಬ್ಬಂದಿಯಲ್ಲಿ ವ್ಯವಸ್ಥಿತಿ ರೀತಿ ಕ್ರಮ ವಹಿಸಲಾಗಿದೆ, ಸದ್ಯ ಬೇರೆ ಬೇರೆ ಇಲಾಖೆಯ ಸಿಬ್ಬಂದಿಯ ನೆರವು ಪಡೆದು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಸೆಪ್ಟೆಂಬರ್‌ ಒಳಗೆ ಶುಚಿ ಯೋಜನೆ ಜಾರಿ: ಶುಚಿ ಯೋಜನೆಯಡಿ ಶಾಲಾ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಕೊಡಲಾಗುತ್ತಿದೆ. ಮೆನ್ಯುಸ್ಟ್ರಿಯಲ್ ಕಪ್ ಅನ್ನು ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ, ಇದು ದೀರ್ಘಾವಧಿಗೆ ಬಳಸಿಕೊಳ್ಳಬಹುದು ಮತ್ತು ಹೈಜಿನ್ ಕೂಡ ಇರಲಿದೆ. ಹಾಗಾಗಿ ಮೆನುಸ್ಟ್ರಿಯಲ್ ಕಪ್ ನೀಡುವ ಚಿಂತನೆ ಇದೆ. ಸದ್ಯ ಸೆಪ್ಟಂಬರ್ ವೇಳೆಗೆ ಎಲ್ಲ ಮಕ್ಕಳಿಗೂ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತದೆ. ಈ ಯೋಜನೆಯನ್ನು ಹಿಂದೆ ನಿಲ್ಲಿಸಿದ್ದರು. ನಾವು ಈಗ ಮತ್ತೆ ಪ್ರಾರಂಭ ಮಾಡಿದ್ದೇವೆ, ಸೆಪ್ಟೆಂಬರ್ ವೇಳೆಗೆ ಸ್ಟ್ರೀಮ್ ಲೈನ್​ಗೆ ಬರಲಿದೆ ಎಂದು ತಿಳಿಸಿದರು.

ರಸಗೊಬ್ಬರ ಕೊರತೆ ಇಲ್ಲ: ರಾಜ್ಯದ ಯಾವುದೇ ಭಾಗದಲ್ಲಿಯೂ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಇಲ್ಲ. ಅಗತ್ಯ ದಾಸ್ತಾನು ಇದ್ದು, ರೈತರಿಗೆ ಯಾವ ಹಂತದಲ್ಲಿಯೂ ಬೀಜ, ಗೊಬ್ಬರ, ಔಷಧ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲಿ 28.96 ಲಕ್ಷ ಮೆಟ್ರಿಕ್ ಟನ್ ರಸಗೊಬ್ಭರ ದಾಸ್ತಾನಿದೆ. ಈವರೆಗೂ 14 ಲಕ್ಷ ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. ಇನ್ನು ಇಷ್ಟೇ ಪ್ರಮಾಣದ ದಾಸ್ತಾನು ಇದೆ, ಎಲ್ಲಿಯೂ ರಸಗೊಬ್ಬರ ಕೊರತೆ ಇಲ್ಲ. ಚಿತ್ರದುರ್ಗ, ದಾವಣಗೆರೆ ಸೇರಿ ಎಲ್ಲಾ ಕಡೆ ದಾಸ್ತಾನು ಇದೆ, ಬೇಡಿಕೆ ಬಂದ ತಕ್ಷಣವೇ ಪೂರೈಕೆ ಮಾಡಲು ದಾಸ್ತಾನು ಸಿದ್ಧವಿದೆ ಎಂದರು.

ಬಿತ್ತನೆ ಬೀಜ, ರಸ ಗೊಬ್ಭರ, ಔಷಧ ಕೊರತೆ ಇಲ್ಲ. ಕಳಪೆಯೂ ಇಲ್ಲ, ಕಳೆದ ಬಾರಿ ರೈತರು ಸಮಸ್ಯೆ ಎದುರಿಸಿದ್ದಾರೆ. ಈ ಬಾರಿ ಒಳ್ಳೆಯ ಮಳೆ ಇದೆ, ರೈತರಿಗೆ ಒಳ್ಳೆಯ ಬೆಳೆ ಸಿಗಲಿ ಎನ್ನುವುದು ನಮ್ಮ ಉದ್ದೇಶ, ಏನೇ ಸಮಸ್ಯೆ ಇದ್ದರೂ ಹೇಳಿ ಗಂಟೆಯಲ್ಲಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು?: ಡಿ.ಕೆ.ಶಿವಕುಮಾರ್ - Valmiki Corporation Scam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.