ಮಂಡ್ಯ: ನಾಗಮಂಗಲ ಗಲಭೆಯಲ್ಲಿ ಸಂಬಂಧ ಅಲ್ಲೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೇರಳ ಮೂಲದವರನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿಸಲಾಗಿದೆ. ಹಾಗಂತ ಕೇರಳದವರು ಗಲಭೆಗೆ ಬಂದು ಹೋಗಿದ್ದಾರೆ ಎಂದಲ್ಲ. ಗಲಭೆ ಸಂಬಂಧ ಸಂಪೂರ್ಣವಾಗಿ ವರದಿ ತರಿಸಿಕೊಳ್ಳೋಣ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶಮೂರ್ತಿ ನಿಮಜ್ಜನ ಮೆರವಣಿಗೆ ಎರಡು ಕೋಮುಗಳ ನಡುವೆ ಘರ್ಷಣೆ ಆಗಲಿಕ್ಕೆ ಅವಕಾಶವಾಗಿದೆ. ನಾಳೆ ಕೂಡ ಮುಸ್ಲಿಂ ಹಬ್ಬ ಈದ್ ಮಿಲಾದ್ ಇದೆ. ಅಂಗಡಿಗಳಿಗೆ ಬೆಂಕಿ ಹಾಕಿದ್ದು ಮತ್ತು ಕಲ್ಲು ತೂರಲು ಮೊದಲು ಪ್ರಾರಂಭ ಮಾಡಿದ್ದು ಯಾರು ಎಂಬ ಮಾಹಿತಿ ಬೇಕಾಗುತ್ತದೆ. ಒಟ್ಟಾರೆ ಎರಡೂ ಕೋಮಿನವರು ಒಟ್ಟಾಗಿ ಎಲ್ಲಾ ಹಬ್ಬಗಳನ್ನು ಮಾಡಬೇಕೆಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ, ತಪ್ಪಿತಸ್ಥರಿಗೆ ಶಿಕ್ಷೆ : ಸಚಿವ ಚಲುವರಾಯಸ್ವಾಮಿ - Chaluvarayaswamy