ETV Bharat / state

ಬೆಂಗಳೂರಲ್ಲಿ ಏಪ್ರಿಲ್ ಅಂತ್ಯದೊಳಗೆ ರಸ್ತೆಗಿಳಿಯಲಿವೆ ಮತ್ತಷ್ಟು ಮೆಟ್ರೋ ಫೀಡರ್ ಬಸ್​ಗಳು

author img

By ETV Bharat Karnataka Team

Published : Feb 15, 2024, 7:51 AM IST

ಬೆಂಗಳೂರಲ್ಲಿ ಏಪ್ರಿಲ್ ವೇಳೆಗೆ 121 ಮೆಟ್ರೋ ಫೀಡರ್ ಬಸ್ ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ.

Etv Bharat
Etv Bharat

ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾದ ಮೆಟ್ರೋ ಫೀಡರ್ ಬಸ್‌ಗಳ ಸೇವೆ ಮತ್ತಷ್ಟು ಹೆಚ್ಚಾಗಲಿದೆ. ಏಪ್ರಿಲ್ ಅಂತ್ಯದೊಳಗೆ 121 ಫೀಡರ್ ಬಸ್‌ಗಳನ್ನು ನಗರ ಸಾರಿಗೆ ಸಂಸ್ಥೆ ಕಾರ್ಯಾಚರಣೆಗೆ ಇಳಿಸಲು ಮುಂದಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆ ಬಿಎಂಟಿಸಿ ಫೀಡರ್ ಬಸ್‌ಗಳ ಸೇವೆಯನ್ನು ಹೆಚ್ಚಿಸುತ್ತಿದೆ. ಬಿಎಂಟಿಸಿ ಮತ್ತು ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಫೀಡರ್‌ಬಸ್‌ಗಳ ಸೇವೆಯನ್ನು ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಶೀಘ್ರವೇ ಮತ್ತಷ್ಟು ಮೆಟ್ರೋ ಫೀಡರ್ ಸೇವೆ ವಿಸ್ತರಣೆಯಾಗುವ ನಿರೀಕ್ಷೆಯಿದೆ.

ಎರಡು ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳು ಜನವರಿಯಲ್ಲಿ ಸಂಚಾರ ಆರಂಭಿಸಿದ್ದು, ಒಂದು ನಗರದ ಭಟ್ಟರಹಳ್ಳಿ, ಸೀಗೇಹಳ್ಳಿ ಸರ್ಕಲ್, ಕುದುರೆಸೊನ್ನೆನ ಹಳ್ಳಿ ಮತ್ತು ಬೆಲ್ತೂರು ಮೂಲಕ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಟಿನ್ ಫ್ಯಾಕ್ಟರಿವರೆಗೆ ಪ್ರತಿದಿನ ಮೂರು ಟ್ರಿಪ್‌ಗಳನ್ನು ಪೂರೈಸುತ್ತಿದೆ. ಇನ್ನೊಂದು ಫೀಡರ್ ಬಸ್ ಕೆಂಗೇರಿ ಟಿಟಿಎಂಸಿ ನಿಲ್ದಾಣದಿಂದ ಕೆಂಗೇರಿ ಆರ್‌ಡಬ್ಲ್ಯೂಎಸ್ ಗೇಟ್, ದೊಡ್ಡಬೆಲೆ, ಪ್ರಾವಿಡೆಂಟ್ ಅಪಾರ್ಟ್‌ಮೆಂಟ್, ಸೇಂಟ್ ಬೆನಡಿಕ್ಟ್ ಚರ್ಚ್, ಅಂಚೆಪಾಳ್ಯ ಮತ್ತು ಕೆಂಗೇರಿ ಮೂಲಕ ಸಂಚರಿಸುತ್ತಿದೆ.

300 ಬಸ್​​ಗಳ ಮೆಟ್ರೋ ಫೀಡರ್ ಸೇವೆ: ಮೆಟ್ರೋ ಫೀಡರ್ ಮಾರ್ಗಗಳಲ್ಲಿ 9 ಮೀಟರ್ ಉದ್ದದ ಮಿನಿ ಬಸ್‌ಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ರಸ್ತೆಗಿಳಿಸಲಾಗುವುದು. 2024ರ ಏಪ್ರಿಲ್ ಅಂತ್ಯದೊಳಗೆ ಫೀಡರ್ ಬಸ್‌ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 65 ಲಕ್ಷ ರೂ. ತೆರಿಗೆ ಪಾವತಿಸುವಂತೆ ನಮ್ಮ ಮೆಟ್ರೋಗೆ ಬಿಬಿಎಂಪಿ ನೋಟಿಸ್​

ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದಂತೆಯೇ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ನಡುವೆ ನಡೆದ ಒಪ್ಪಂದದಂತೆ ಫೀಡರ್ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗುತ್ತಿದೆ. ಈ ಮೆಟ್ರೋ ಫೀಡರ್ ಬಸ್‌ಗಳ ಜೊತೆಗೆ ಹೆಚ್ಚುವರಿ ಮೆಟ್ರೋ ಫೀಡರ್ ಬಸ್‌ಗಳು ನಗರದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ.

ಕಾಳೇನ ಅಗ್ರಹಾರ - ನಾಗವಾರ ಮೆಟ್ರೋ ಕಾಮಗಾರಿ: ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾಡುಗೊಂಡಹಳ್ಳಿ(ಕೆ.ಜಿ.ಹಳ್ಳಿ) ನಿಲ್ದಾಣದಲ್ಲಿ ಕಳೆದ ವಾರ ಭದ್ರ ಸುರಂಗ ಕೊರೆಯುವ ಯಂತ್ರವು ಹೊರ ಬಂದಿತು. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ತಿಳಿಸಿತ್ತು.

ಭದ್ರ ಸುರಂಗ ಕೊರೆಯುವ ಯಂತ್ರವು ವೆಂಕಟಪುರ ಮತ್ತು ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ 1,185.80 ಮೀಟರ್ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈ ಯಂತ್ರವು 2023ರ ಫೆಬ್ರವರಿಯಲ್ಲಿ ವೆಂಕಟಪುರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕಾಮಗಾರಿ ಆರಂಭಿಸಿತ್ತು. ಕೆ.ಜಿ.ಹಳ್ಳಿಯಿಂದ ನಾಗವಾರ ನಿಲ್ದಾಣದ ಬಳಿ ಸುರಂಗ ಮಾರ್ಗದ ಕಾಮಗಾರಿಗಾಗಿ ಈ ಭದ್ರ ಸುರಂಗ ಕೊರೆಯುವ ಯಂತ್ರವನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: 'ನಮ್ಮ ಮೆಟ್ರೋ' ಹಳದಿ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ರೈಲು ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.