ಮಂಗಳೂರು (ದಕ್ಷಿಣ ಕನ್ನಡ): ನಗರದ ಪುರಭವನದಲ್ಲಿ ರವಿವಾರ ತೆಂಕು - ಬಡಗು ಎರಡೂ ತಿಟ್ಟಿನ ಯಕ್ಷಗಾನ ವೇಷದ ರೇಖಾ ವಿನ್ಯಾಸದ ಚಿತ್ರವಿರುವ ಐದು ರೂ. ಮೌಲ್ಯದ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಕರಾವಳಿ ಜಿಲ್ಲೆಯ ಕಲೆ ಯಕ್ಷಗಾನಕ್ಕೆ ರಾಷ್ಟ್ರೀಯ ಗೌರವ ಮನ್ನಣೆ ದೊರಕಿದಂತಾಗಿದೆ.
ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಮುದ್ದಣ, ಕೆರೆಮನೆ ಶಂಭುಹೆಗಡೆ, ಕೆರೆಮನೆ ಶಿವರಾಮ ಹೆಗಡೆಯವರ ಅಂಚೆಚೀಟಿ ಬಿಡುಗಡೆಗೊಂಡಿದೆ. ಆದರೆ ಪೂರ್ಣ ಪ್ರಮಾಣ ಯಕ್ಷಗಾನ ಕಲೆಗೆ ಸಂಬಂಧಿಸಿದಂತಹ ಅಂಚೆ ಚೀಟಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಿದೆ.
ಕೇಂದ್ರ ಸರಕಾರದ ಸ್ವಾಮ್ಯದ ಎಂಆರ್ಪಿಎಲ್ ಸಂಸ್ಥೆ ಅಂಚೆ ಚೀಟಿ ಪ್ರಾಯೋಜಕತ್ವ ವಹಿಸಿದೆ. 5.30 ಲಕ್ಷ ರೂ. ಮೊತ್ತವನ್ನು ಅಂಚೆ ಇಲಾಖೆಗೆ ಒದಗಿಸಿದೆ. ರಾಜ್ಯ ಅಂಚೆ ಇಲಾಖೆಯ ಚೀಫ್ ಪೋಸ್ಟ್ ಮಾಸ್ಟರ್ ರಾಜೇಂದ್ರ ಕುಮಾರ್ ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಲೋಕಾಭಿರಾಮ ಯಕ್ಷಗಾನ ಪ್ರದರ್ಶನವು ನಡೆಯಿತು.
ಇದನ್ನೂಓದಿ:ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಅರ್ಪಿಸಿದ ಭಕ್ತ