ETV Bharat / state

ರಾಮನವಮಿ ನಿಮಿತ್ತ ಕೆರಗೋಡು ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್​ಡಿಕೆ - Lok Sabha Election 2024 - LOK SABHA ELECTION 2024

ಹನುಮ ಧ್ವಜ ತೆರವಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಾದ ಸೃಷ್ಟಿಸಿದ್ದ ಕೆರಗೋಡು ಗ್ರಾಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ
ಕುಮಾರಸ್ವಾಮಿ ಕೆರಗೋಡು ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
author img

By ETV Bharat Karnataka Team

Published : Apr 18, 2024, 6:02 AM IST

ಮಂಡ್ಯ: ಹನುಮ ಧ್ವಜ ತೆರವಿಗೆ ಸಂಬಂಧಿಸಿದಂತೆ ರಾಜ್ಯದಲ್ಲೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ಕೆರಗೋಡು ಗ್ರಾಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಭೇಟಿ ನೀಡಿ ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಮನವಮಿ ಹಿನ್ನೆಲೆ ಕೆರಗೋಡು ಗ್ರಾಮಕ್ಕೆ ಆಗಮಿಸಿದ್ದ ವೇಳೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬೈಕ್ ರ್‍ಯಾಲಿ ಮೂಲಕ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ, ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ವಿವಾದಕ್ಕೆ ಕಾರಣವಾಗಿರುವ ಅರ್ಜುನ ಸ್ತಂಭಕ್ಕೆ ಎಚ್ ಡಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಇದೇ ವೇಳೆ, ಎಚ್ ಡಿಕೆ ಮುಂದೆ ನೋವು ಹೇಳಿಕೊಂಡ ಕೆರೆಗೋಡು ಗ್ರಾಮಸ್ಥರು, ಒಬ್ಬೊಬ್ಬರ ಮೇಲೆ ಹತ್ತತ್ತು ಕೇಸ್ ದಾಖಲಿಸಲಾಗಿದೆ. ದಯವಿಟ್ಟು ಕೇಸ್​ಗಳನ್ನು ವಾಪಸ್​ ತೆಗೆಸಿ ಎಂದು ಗ್ರಾಮಸ್ಥರು ಮೊರೆಯಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ ಕೇಸ್ ತೆಗೆಸುವ ಜವಾಬ್ದಾರಿ‌ ನನ್ನದು. ಕೆರಗೋಡು ಗ್ರಾಮಸ್ಥರ ಭಾವನೆಗಳನ್ನ ಗೌರವಿಸಿ, ಸರ್ಕಾರದಿಂದ ಆದೇಶ ಮಾಡಿಸುವ ಭರವಸೆ ನೀಡಿದರು.
ಇದನ್ನೂಓದಿ:ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ - Ram Navami Celebration

ETV Bharat Logo

Copyright © 2024 Ushodaya Enterprises Pvt. Ltd., All Rights Reserved.