ETV Bharat / state

ಮಗಳು ಗರ್ಭಿಣಿ ಎಂದು ಸುಳ್ಳು ಸುದ್ದಿ: ಕೋಪದಲ್ಲಿ ಸ್ವಂತ ತಮ್ಮನ ಕೊಂದ ಅಣ್ಣ - Belagavi Murder Case - BELAGAVI MURDER CASE

ಊರಿನಲ್ಲಿ ತನ್ನ ಮಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿರುವುದಕ್ಕೆ ತಮ್ಮನೇ ಕಾರಣ ಎಂದು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದ ಘಟನೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

ಮೃತ ವಿಠ್ಠಲ ಚವ್ಹಾಣ
ಕೊಲೆಗೀಡಾದ ವಿಠ್ಠಲ ಚವ್ಹಾಣ (ETV Bharat)
author img

By ETV Bharat Karnataka Team

Published : Sep 6, 2024, 11:45 AM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ (ETV Bharat)

ಬೆಳಗಾವಿ: ಮಗಳು ಗರ್ಭಿಣಿಯಾಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದನೆಂದು ಸ್ವಂತ ತಮ್ಮನನ್ನೇ ಅಣ್ಣ ಕೊಲೆಗೈದ ಘಟನೆ ಗುರುವಾರ ಗೋಕಾಕ್ ತಾಲೂಕಿನ ಕಲ್ಲೋಳಿಯಲ್ಲಿ ನಡೆದಿದೆ. ಕಲ್ಲೋಳಿ ಗ್ರಾಮದ ವಿಠ್ಠಲ ಚವ್ಹಾಣ (51) ಕೊಲೆಯಾದ ವ್ಯಕ್ತಿ. ಭೀಮಪ್ಪ ಚವ್ಹಾಣ, ಲಕ್ಷ್ಮಣ ಪಡತಾರೆ ಬಂಧಿತ ಕೊಲೆ ಆರೋಪಿಗಳು.

ಎಸ್ಪಿ ಪ್ರತಿಕ್ರಿಯೆ: "ಸೆಪ್ಟೆಂಬರ್​ 1ರಂದು ಘಟಪ್ರಭಾ ಪೊಲೀಸ್​ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಹಲ್ಲೆಗೊಳಗಾದ ವ್ಯಕ್ತಿ ಸೆಪ್ಟೆಂಬರ್​ 5ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಊರಿನಲ್ಲಿ ನನ್ನ ಮಗಳು ಗರ್ಭಿಣಿ ಎಂಬ ವದಂತಿ ಹರಡಲು ವಿಠ್ಠಲನೇ ಕಾರಣ ಎಂದು ಭೀಮಪ್ಪ ಚವ್ಹಾಣ ಆ.30ರಂದು ಮನೆಗೆ ಬಂದು ಕಟ್ಟಿಗೆ, ರಾಡ್, ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದನು ಎಂದು ಮೃತ ವಿಠ್ಠಲ ಅವರ ಪತ್ನಿ ಸುನಂದಾ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲು ಹಲ್ಲೆ ಪ್ರಕರಣ ದಾಖಲಾಗಿತ್ತು. ನಿನ್ನೆ ಗಾಯಾಳು ಸಾವನ್ನಪ್ಪಿರುವುದರಿಂದ ಕೊಲೆ ಕೇಸ್‌ಗೆ ಬದಲಾಯಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೂ ಒಂದಿಷ್ಟು ಜನರ ಮೇಲೆ ದೂರು ದಾಖಲಾಗಿದ್ದು ಅವರನ್ನೂ ವಿಚಾರಿಸುತ್ತೇವೆ. ಮೇಲ್ನೋಟಕ್ಕೆ ಭೀಮಪ್ಪ ಚವ್ಹಾಣ ಪುತ್ರಿ ಗರ್ಭಣಿಯಾಗಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಗೊತ್ತಾಗಿದೆ. ಆದರೆ ಈ ಸುದ್ದಿಯನ್ನು ಯಾರು ಹಬ್ಬಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೆಣ್ಣುಭ್ರೂಣ ಹತ್ಯೆ ಜಾಲ ಭೇದಿಸಿದ ಮಂಡ್ಯ ಪೊಲೀಸರು: 12 ಮಂದಿ ಆರೋಪಿಗಳು ಅರೆಸ್ಟ್ - Female Feticide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.