ETV Bharat / state

ಸೋಷಿಯಲ್​ ಮೀಡಿಯಾ ಸ್ಟಾರ್​​ ಬ್ಲ್ಯಾಕ್​​ಮೇಲ್​ಗೆ ಹೆದರಿ ಪ್ರೇಮಿ ಆತ್ಮಹತ್ಯೆ ಆರೋಪ?: ಕೊಲೆ ಶಂಕೆ - Lover Suicide

author img

By ETV Bharat Karnataka Team

Published : 2 hours ago

ಬನ್ನೇರುಘಟ್ಟ ಬಳಿ ಆತ್ಮಹತ್ಯೆ ಪ್ರಕರಣವೊಂದು ನಡೆದಿದೆ. ಇದು ಕೊಲೆ ಆಗಿರಬಹುದು ಎಂದು ಮೃತನ ತಂದೆ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾ ಸ್ಟಾರ್​​ ಬ್ಲ್ಯಾಕ್​​ಮೇಲ್​ಗೆ ಹೆದರಿ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Bengaluru Murder Case
ಯುವಕನ ಆತ್ಮಹತ್ಯೆ ಪ್ರಕರಣ, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ (ETV Bharat)

ಬೆಂಗಳೂರು: ಸೋಷಿಯಲ್​ ಮೀಡಿಯಾ ಇನ್​​ಫ್ಲುಯೆನ್ಸರ್​​ ಒಬ್ಬರ ಬ್ಲ್ಯಾಕ್​​ಮೇಲ್​ ಕಿರುಕುಳಕ್ಕೆ ಜೀವವೊಂದು ಬಲಿಯಾಗಿರುವ ಅರೋಪದ ದುರ್ಘಟನೆ ಬನ್ನೇರುಘಟ್ಟ ರಸ್ತೆಯ ಕೋಳಿ ಫಾರಂ ಗೇಟ್ ಬಳಿ ಇರುವ ವೈಟ್ ಹೌಸ್ ಲೇಔಟ್​ನಲ್ಲಿ ಜರುಗಿದೆ.

ಮೃತ ಮಧನ್​ ಮನೆಯವರು ಮಾಡಿರುವ ಆರೋಪ ಹೀಗಿದೆ: ’’ಪಿಳ್ಳಗಾನಹಳ್ಳಿ ಗ್ರಾಮದ ಮ್ಯಾರೇಜ್ ಮ್ಯಾನೇಜ್​​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಮಧನ್ ಎಂಬಾತರಿಗೆ ಸ್ನೇಹಿತ ಪುನೀತ್ ಮೂಲಕ ಓರ್ವ ಸೋಷಿಯಲ್​ ಮೀಡಿಯಾ ಸ್ಟಾರ್​ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿದೆ. ಆಕೆ ತಾನು ವಾಸವಾಗಿದ್ದ ಮನೆಗೆ ಮಧನ್ ಅವರನ್ನು ಕರೆಸಿಕೊಂಡು ಆಗಾಗ್ಗೆ ಪ್ರೀತಿ ಪ್ರೇಮದ ನಾಟಕವಾಡಿ ಮಧನ್​​ನಿಂದ ಹಣ ವಸೂಲಿ ಮಾಡುತ್ತಿದ್ದಾರೆ‘‘ ಎಂದು ಮಧನ್ ಮನೆಯವರು ಆರೋಪಿಸಿದ್ದಾರೆ.

ಯುವಕನ ಆತ್ಮಹತ್ಯೆ ಪ್ರಕರಣ (ETV Bharat)

ಹನಿ ಟ್ರ್ಯಾಪ್​ ರೀತಿಯ ಆರೋಪ: ಇದೇ ರೀತಿ ಹಲವು ಹುಡುಗರೊಂದಿಗೆ ಈ ಯುವತಿ 'ವರ್ಧಿನಿ ಎಲ್ಲಾರ್ ಮಟ್' ಎಂಬ ಫೇಕ್ ಹೆಸರಿನಲ್ಲಿ ಫೇಸ್​ಬುಕ್​​ ಮತ್ತು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಚಾಟಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಓಡಾಡುತ್ತಿದೆ. ಕೆಲ ಹುಡುಗರಿಗೆ ಲವ್ ಯು ಎಂದು ಹೇಳಿ, ನಂತರ ಮನೆಗೆ ಕರೆಸಿಕೊಂಡು ಹನಿ ಟ್ರ್ಯಾಪ್ ರೀತಿ ಹಣ ಸುಲಿಗೆ ಮಾಡಿರುವ ಆರೋಪ ಪ್ರಕರಣಗಳೂ ಕೇಳಿ ಬರುತ್ತಿವೆ.

ಎಂದಿನಂತೆ ನಿನ್ನೆ ಮಧ್ಯಾಹ್ನ ಮಧನ್ ಅವರನ್ನು ಆಕೆಯ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ನಂತರ, ಏನೋ ಜಗಳ ನಡೆದಿದೆ. ಮಧನ್​​ಗೆ ನನ್ನನ್ನು ಮದುವೆ ಆಗು, ಇಲ್ಲ ಹಣ ಕೊಡು ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನ್ನ ಸ್ನೇಹಿತರಿಗೆ ಮಧನ್ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ. ಆನಂತರ ಆತ ನೆಲದಲ್ಲಿ ಶವವಾಗಿ ಮಲಗಿರುವ ರೀತಿಯಲ್ಲಿ ಪತ್ತೆಯಾಗಿದ್ದು, ಆಕೆ ನಾನು ವಾಶ್ ರೂಂನಲ್ಲಿದ್ದೆ. ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಹಗ್ಗ ಬಿಚ್ಚಿ ಮಲಗಿಸಿದ್ದೇನೆ ಎಂದು ಮಧನ್ ತಂದೆ ತಾಯಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​​ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ಸೂಪರ್​ ಸ್ಟಾರ್​​​ ಪತ್ನಿಗೆ ಕರೆ ಮಾಡಿದ ಪಿಎಂ - PM Enquiries Rajinikanth Health

ಹುಳಿಮಾವು ಪೊಲೀಸರಿಂದ ಪರಿಶೀಲನೆ, ತನಿಖೆ: ಹುಳಿಮಾವು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವರು ಯಾರನ್ನಾದರೂ ಕರೆಸಿ ನೇಣುಹಾಕಿ ಮಧನ್​ನನ್ನು ಕೊಲ್ಲಿಸಿರುವ ಸಾಧ್ಯತೆ ಇದೆ ಎಂದು ಮಧನ್ ತಂದೆ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.