ETV Bharat / state

'ಒಂದಾನೊಂದು ಕಾಲದಲ್ಲಿ' ಮಿಂಚಿ ಮರೆಯಾದ ಶಂಕರ್ ನಾಗ್: ಕಾರು ಅಪಘಾತವಾಗಿದ್ದೇಗೆ? ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು - Shankar Nag Car Accident - SHANKAR NAG CAR ACCIDENT

1954ರ ನವೆಂಬರ್ 9ರಂದು ಮಲ್ಲಾಪುರದಲ್ಲಿ ಜನಿಸಿದ ಶಂಕರ್ ನಾಗ್ 1990ರ ಸೆಪ್ಟೆಂಬರ್​​ 30 ರಂದು ಕೊನೆಯುಸಿರೆಳೆದರು. ಇಡೀ ಕರುನಾಡಿಗೆ ಬರಸಿಡಿಲಿನಂತೆ ಅವರ ಕಾರು ಅಪಘಾತದ ಸುದ್ದಿ ಅಪ್ಪಳಿಸಿತ್ತು. ಅವರು ನಮ್ಮೊಂದಿಗಿಲ್ಲವಾದರೂ ಅವರ ನೆನೆಪು ಮಾತ್ರ ಕನ್ನಡಿಗರ ಮನದಲ್ಲಿ ಸದಾ ಜೀವಂತ.

Shankar Nag Car Accident case
ಶಂಕರ್​ನಾಗ್​ ಕಾರು ಅಪಘಾತ ಘಟನೆ (ETV Bharat)
author img

By ETV Bharat Karnataka Team

Published : Oct 2, 2024, 7:04 PM IST

ದಾವಣಗೆರೆ: ಶಂಕರ್ ನಾಗ್. ಅತಿ ಕಡಿಮೆ ಅವಧಿಯಲ್ಲಿ ಕನ್ನಡ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವನ್ನಾಳಿದ ಯಶಸ್ವಿ ಕಲಾವಿದ. ಕಡಿಮೆ ಅವಧಿಯಲ್ಲಿ ಮಿಂಚಿ ಮರೆಯಾದ ಚೇತನ. ಶಂಕರ್ ನಾಗ್ ಹೆಸರು ಹೇಳಿದ್ರೆ ಸಾಕು ಸಾಲು ಸಾಲು ಚಿತ್ರಗಳು ಕಣ್ಮುಂದೆ ಬರುತ್ತವೆ. ಕನ್ನಡ ಸಿನಿರಂಗದಲ್ಲೇ ಅವರದ್ದು ಅಪರೂಪದ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು. ಶಂಕರ್ ನಾಗ್ ಬದುಕಿದ್ದು ಕಡಿಮೆ ವರ್ಷವಾದರೂ 'ಒಂದಾನೊಂದು ಕಾಲದಲ್ಲಿ' ಅವರ ಸಾಧನೆ ಮಾತ್ರ ಇಂದಿಗೂ ಚಿರಸ್ಮರಣೀಯ. ಕನ್ನಡ ಚಿತ್ರರಂಗವನ್ನು ಮುಂಚೂಣಿಯಲ್ಲಿ ಇರುವಂತೆ ಮಾಡಿದ್ದ ಮಹಾನ್ ಚೇತನ. ಮೇರು ನಟ, ನಿರ್ದೇಶಕ. ಆದರೆ ಅಭಿಮಾನಿಗಳನ್ನು ಕನ್ನಡ ಚಿತ್ರರಂಗವನ್ನು ಅಗಲಿ ಬರೋಬ್ಬರಿ 34 ವರ್ಷಗಳೇ ಸಂದಿವೆ. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬಳಿ ಕಾರು ಅಪಘಾತ ಸಂಭವಿಸಿ ನಮ್ಮನ್ನಗಲಿದ್ದರು.

ನಟ ಶಂಕರ್ ನಾಗ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದವರು. 1954ರ ನವೆಂಬರ್ 9ರಂದು ಮಲ್ಲಾಪುರದಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದರು. 'ಒಂದಾನೊಂದು ಕಾಲದಲ್ಲಿ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚೋ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ಮೊದಲನೇ ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಕ್ಕಾಗಿ ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಸಹ ದಕ್ಕಿದೆ. 12 ವರ್ಷಗಳಲ್ಲಿ ಸರಿಸುಮಾರು 80 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಟಕ ಮತ್ತು ರಂಗಭೂಮಿ ಸೇರಿದಂತೆ ಕನ್ನಡ ಚಿತ್ರರಂಗವನ್ನು ಒಂದು ಕಾಲದಲ್ಲಿ ಶ್ರೀಮಂತಗೊಳಿಸಿದ ಕೀರ್ತಿ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಸಾಂಗ್ಲಿಯಾನ, ಶಂಕರ್, ಮಿಂಚಿನ ಓಟ, ಆಟೋರಾಜ ಹೀಗೆ ಹಿಟ್ ಚಿತ್ರಗಳನ್ನು ನೀಡಿದ್ದ ನಟ ಶಂಕರ್ ನಾಗ್ 1990ರ ಸೆಪ್ಟೆಂಬರ್​​ 30 ರಂದು ಕೊನೆಯುಸಿರೆಳೆದರು. ಇಡೀ ಕರುನಾಡಿಗೆ ಬರಸಿಡಿಲಿನಂತೆ ಅವರ ಕಾರು ಅಪಘಾತದ ಸುದ್ದಿ ಅಪ್ಪಳಿಸಿತ್ತು.

ಶಂಕರ್​ನಾಗ್ ಕಾರು ಅಪಘಾತ: ಪ್ರತ್ಯಕ್ಷದರ್ಶಿಗಳೇಳಿದ್ದಿಷ್ಟು (ETV Bharat)

1990ರ ಸೆಪ್ಟೆಂಬರ್​ 30 ರಂದು ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಕೂಗಳತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ - 04ರಲ್ಲಿ ಕಾರು ಅಪಘಾತ ಸಂಭವಿಸಿತ್ತು.

ಅಪಘಾತ‌ ಆಗಿದ್ದೇಗೆ, ಕಾರಿನಲ್ಲಿದ್ದವರು ಎಷ್ಟು ಮಂದಿ? ಆನಗೋಡ ಬಳಿಯ ಎನ್​​ಹೆಚ್ 04 ರಸ್ತೆ ಬಹಳ ಕಿರಿದಾದ ಸಿಂಗಲ್ ರಸ್ತೆಯಾಗಿತ್ತು. ಶಂಕರ್ ನಾಗ್ ಅವರು ಜೋಕುರಸ್ವಾಮಿ ಸಿನಿಮಾದ ಪೂಜೆಗಾಗಿ ಬೆಂಗಳೂರಿನಿಂದ ಬಾಗಲಕೋಟೆಯ ಲೋಕಾಪುರಕ್ಕೆ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯ ಜೊತೆ ಕಾರಿನಲ್ಲಿ ದಾವಣಗೆರೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದರು. ಆನಗೋಡು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ - 04ರಲ್ಲಿ ಕಾರು ಚಲಿಸುತ್ತಿತ್ತು. ಇದೇ ಹೆದ್ದಾರಿಯಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಬೆಂಗಳೂರು ಕಡೆ ಹೋಗಬೇಕಾಗಿದ್ದ ಲಾರಿ ಕೆಟ್ಟು ನಿಂತಿತ್ತು. ಕಾರು ಚಾಲಕ ಲಿಂಗಣ್ಣ ಕೆಟ್ಟು ನಿಂತ ಲಾರಿಯನ್ನು ತಪ್ಪಿಸಿ, ಎದುರುಗಡೆ ಟ್ರಾನ್ಫಾರಂ ಬಾಕ್ಸ್ ಹೊತ್ತು ಬಂದ ಲಾರಿಗೆ ಡಿಕ್ಕಿ ಹೊಡೆದರು. ಭಾನುವಾರ ಬೆಳಗಿನ ಜಾವ 4:30ಕ್ಕೆ ನಡೆದ ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ಲಿಂಗಣ್ಣ, ನಟ ಶಂಕರ್ ನಾಗ್ ಸ್ಥಳದಲ್ಲೇ ಸಾವನಪ್ಪಿದ್ದರು.‌ ಅಪಘಾತದ ರಭಸಕ್ಕೆ ಕಾರಿನ ಟಾಪ್​ನ ತಗಡು ಶಂಕರ್ ನಾಗ್ ಅವರ ರುಂಡವನ್ನು ಕತ್ತರಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳಾದ ಬಸವರಾಜ್ ಮಾಹಿತಿ ನೀಡಿದರು.

ಇದನ್ನೂ ಓದಿ: ಶಂಕರ್​ ನಾಗ್ 34ನೇ​​ ಪುಣ್ಯಸ್ಮರಣೆ: 12 ವರ್ಷಗಳಲ್ಲಿ 80 ಸಿನಿಮಾ; ಆಟೋರಾಜನ ಬಾಲ್ಯ, ವೈಯಕ್ತಿಕ, ವೃತ್ತಿಜೀವನದ ಮೆಲುಕು - Shankar Nag 34th Death Anniversary

ಅಪಘಾತದ ದಿನ ಬಸವರಾಜ್​ರ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಅರುಂಧತಿ ನಾಗ್: ಆನಗೋಡು ತಾಲೂಕಿನ ಬಸವರಾಜ್ (ರಾಜಣ್ಣ) ಇವರು ಈ ಅಪಘಾತದ ಪ್ರತ್ಯಕ್ಷದರ್ಶಿಗಳು.‌ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಅವರು, 1990ರ ಸೆ.30 ರಂದು ಬೆಳಗಿನ ಜಾವ ಶಂಕರ್ ನಾಗ್ ಅವರ ಕಾರು ಅಪಘಾತ ಆಗಿತ್ತು. ಡ್ರೈವರ್, ಶಂಕರ್ ನಾಗ್ ಸ್ಥಳದಲ್ಲೇ ಸಾವನಪ್ಪಿದ್ದರು. ಕಾರಿನಲ್ಲಿದ್ದ ಮಗಳು ಕಾವ್ಯ, ಪತ್ನಿ ಅರುಂಧತಿ ನಾಗ್ ಪ್ರಾಣಾಪಾಯದಿಂದ ಪಾರಾಗಿದ್ದರು. ಟ್ರಾನ್ಫಾರಂ ಬಾಕ್ಸ್ ಹೊತ್ತು ಬರುತ್ತಿದ್ದ ಲಾರಿಯ ಮುಂದಿನ ಚಕ್ರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಶಂಕರ್ ನಾಗ್ ಸಾವನಪ್ಪಿರುವುದು ನಮಗೆ ಗೊತ್ತೇ ಇರಲಿಲ್ಲ. ನಂತರ, ಅಂತಹ ಕಠಿಣ ಪರಿಸ್ಥಿತಿಯಲ್ಲಿ ಶಂಕರ್ ನಾಗ್ ಅವರ ಪತ್ನಿ ಹಾಗೂ ಮಗಳನ್ನು ನಮ್ಮ ಮನೆಗೆ ಕರೆತಂದೆವು. ರಾಷ್ಟ್ರೀಯ ಹೆದ್ದಾರಿ-04 ಸಿಂಗಲ್ ರಸ್ತೆಯಿಂದ ಕೂಡಿದ ಕಾರಣ ಈ ಅಪಘಾತ ಸಂಭವಿಸಿತ್ತು.‌ ಇದೇ ಸ್ಥಳದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ ಕಾರಣ ಆನಗೋಡು ಗ್ರಾಮದಲ್ಲಿ ’ಶಂಕರ್​ ನಾಗ್ ಕಾಲೇಜ್’ ಆರಂಭಿಸಲಾಗಿತ್ತು, ಸ್ಟ್ರೆಂತ್ ಇಲ್ಲದ ಕಾರಣ ಕಾಲೇಜು ಮುಚ್ಚಿಹೋಗಿದೆ ಎಂದು ತಿಳಿಸಿದರು. ಅಪಘಾತದ ಸಂದರ್ಭ ಸಹಾಯ ಮಾಡಿದ್ದಕ್ಕಾಗಿ ರಾಜಣ್ಣ ಮತ್ತು ಶಂಕರ್ ನಾಗ್​ ಕುಟುಂಬದ ನಡುವೆ ಇಂದಿಗೂ ಉತ್ತಮ ಒಡನಾಟವಿದೆ.

ಇದನ್ನೂ ಓದಿ: ಗೋವಿಂದ ಕಾಲಿನಿಂದ ಹೊರತೆಗೆದ 'ಬುಲೆಟ್​​' ವೈರಲ್: ರಕ್ತಸಿಕ್ತ ಗುಂಡಿನ ಫೋಟೋ ಕಂಡ ಅಭಿಮಾನಿಗಳು ಶಾಕ್​ - Govinda

''ನಮ್ಮ ಶಂಕರ್ ಅಲ್ಲ, ನಿಮ್ಮ ಶಂಕರ್'': ಅಪಘಾತ ಸಂಭವಿಸಿದ್ದರಿಂದ ಇಡೀ ಆನಗೋಡು ಗ್ರಾಮಸ್ಥರು ಅಲ್ಲಿಗೆ ಧಾವಿಸಿದ್ದರು. ಸಾವನಪ್ಪಿರುವುದು ಚಿತ್ರ ನಟ ಶಂಕರ್ ನಾಗ್ ಎಂಬ ವಿಚಾರ ಆನಗೋಡು ಗ್ರಾಮದಿಂದ ಇಡೀ ರಾಜ್ಯದಲ್ಲಿ ಹಬ್ಬಿತ್ತು.‌ ಅಪಘಾತ ಆದಾಗ ಪತ್ನಿ ಅರುಂಧತಿ ನಾಗ್ ಅವರು ಶಂಕರ್, ಶಂಕರ್ ಎಂದು ಕೂಗಾಡತೊಡಗಿದ್ದರು. ನಿಮ್ಮ ಶಂಕರ್​ಗೆ ಏನೂ ಆಗಿಲ್ಲ ಎಂದು ಜನ ಹೇಳಿದರೆ ಅವರು ನಮ್ಮ ಶಂಕರ್ ಅಲ್ಲ ನಿಮ್ಮ ಶಂಕರ್, ಚಿತ್ರ ನಟ ಶಂಕರ್ ಎಂದು ಹೇಳಿದ ಮೇಲೆ ಕಾರಿನಲ್ಲಿದ್ದವರು ನಟ ಶಂಕರ್ ನಾಗ್ ಎಂಬುದು ಸ್ಥಳೀಯರಿಗೆ ತಿಳಿಯಿತು.‌ ಪ್ರತ್ಯಕ್ಷದರ್ಶಿ ಎ.ಎಮ್ ಸಾದೀಕ್ 'ಈಟಿವಿ ಭಾರತ'ದ ಜೊತೆ ಮಾತನಾಡಿ, 4:30ರ ಬೆಳಗಿನಜಾವ ಈ ಅಪಘಾತ ಸಂಭವಿಸಿತ್ತು. ದೊಡ್ಡ ಲಾರಿ ನಿಂತಿತ್ತು. ಅ ಲಾರಿಯನ್ನು ತಪ್ಪಿಸಿ ಎದುರಿನಿಂದ ಬಂದ ಲಾರಿಯನ್ನು ನೋಡದ ಕಾರು ಡ್ರೈವರ್ ಏಕಾಏಕಿ ನುಗ್ಗಿದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಅಪಘಾತ ಭೀಕರವಾಗಿತ್ತು. ಅರುಂಧತಿ ನಾಗ್ ಅವರು ಶಂಕರ್ ಶಂಕರ್ ಎಂದು ಕೂಗುತ್ತಿದ್ದರು‌. ಆಗ ನಾವು ನಿಮ್ಮ‌ಶಂಕರ್​ಗೆ ಏನೂ ಆಗಿಲ್ಲ ಎಂದು ಹೇಳಿದಾಗ ಅರಂಧತಿ ನಾಗ್ ಅವರು 'ಅವರು ನಮ್ಮ ಶಂಕರ್ ಅಲ್ಲ, ನಿಮ್ಮ ಶಂಕರ್, ಚಿತ್ರ ನಟ ಶಂಕರ್' ಎಂದಾಗ ನಮಗೆ ತಿಳಿಯಿತು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.