ETV Bharat / state

ಶಿರೂರು ಗುಡ್ಡ ಕುಸಿತ: ಗಂಗಾವಳಿಯಲ್ಲಿ ಈಶ್ವರ್ ಮಲ್ಪೆ ಕಾರ್ಯಾಚರಣೆ, ಲಾರಿ ವೀಲ್ ಜಾಕ್ ಪತ್ತೆ - Shiruru Hill Collapse

author img

By ETV Bharat Karnataka Team

Published : Aug 13, 2024, 9:34 PM IST

ಮುಳುಗು ತಜ್ಞ ಈಶ್ವರ್ ಮಲ್ಪೆ ಕಾರ್ಯಾಚರಣೆಯಲ್ಲಿ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಭಾರತ್ ಬೆಂಜ್ ಲಾರಿಯ ವೀಲ್ ಜಾಕ್ ಪತ್ತೆಯಾಗಿದೆ.

ಲಾರಿ ವೀಲ್ ಜಾಕ್ ಪತ್ತೆ
ಲಾರಿ ವೀಲ್ ಜಾಕ್ ಪತ್ತೆ (ETV Bharat)

ಕಾರವಾರ: ಅಂಕೋಲಾ ಶಿರೂರು ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಭಾರತ್ ಬೆಂಜ್ ಲಾರಿಯ ವೀಲ್ ಜಾಕ್ ಅನ್ನು ಮಂಗಳವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಕಾರ್ಯಾಚರಣೆ ವೇಳೆ ಪತ್ತೆ ಮಾಡಿದ್ದಾರೆ. ನದಿಯಲ್ಲಿ ಎರಡನೇ ಹಂತದ ಕಾರ್ಯಾಚರಣೆಗೆ ಇಳಿದಿದ್ದ ಈಶ್ವರ್ ಮಲ್ಪೆ ಈ ಹಿಂದೆ ಗುರುತಿಸಲಾಗಿದ್ದ ನದಿಯ ಆಳದಲ್ಲಿ ಮುಳುಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ವೀಲ್ ಜಾಕ್ ಹೊರತೆಗೆದಿದ್ದಾರೆ.

ಶಿರೂರು ಗುಡ್ಡ ಕುಸಿದು ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿರುವ ಇನ್ನೂ ಮೂವರನ್ನು ಪತ್ತೆ ಮಾಡುವ ಸಂಬಂಧ ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆಗೆ ಆಗಮಿಸಿತ್ತು. ಮಳೆ ಕಡಿಮೆಯಾದ ಹಿನ್ನಲೆ ಮತ್ತು ನದಿ ನೀರು ತಿಳಿಯಾಗಿದ್ದಲ್ಲದೇ ನೀರಿನ ಹರಿವಿನ ಪ್ರಮಾಣ ಕೂಡ ಕೂಡಕಡಿಮೆಯಾಗಿದ್ದರಿಂದ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಶಾಸಕ ಸತೀಶ್ ಸೈಲ್ ಆಹ್ವಾನದ ಮೇರೆಗೆ ಈ ತಂಡ ಆಗಮಿಸಿತ್ತು.

ಆದರೆ, ನದಿಯಲ್ಲಿ ನೀರಿನ ಹರಿವು 3.5 ನಾಟ್​​ಗಿಂತ ಹೆಚ್ಚು ಇರುವ ಕಾರಣ ಜಿಲ್ಲಾಡಳಿತ ನೀರಿನಲ್ಲಿ ಕಾರ್ಯಾಚರಣೆಗೆ ನಿರಾಕರಣೆ ಮಾಡಿತ್ತು. ಆದರೆ, ಶಾಸಕ ಸತೀಶ್ ಸೈಲ್ ಜಿಲ್ಲಾಧಿಲಾರಿಯೊಂದಿಗೆ ಮಾತನಾಡಿ ಅನುಮತಿ ನೀಡುವಂತೆ ವಿನಂತಿಸಿದ್ದರು. ಕೊನೆಗೆ ತಮ್ಮದೇ ಜವಾಬ್ದಾರಿಯೊಂದಿಗೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದ ಅವರು, ಈಶ್ವರ ಮಲ್ಪೆಗೆ ಅನುಮತಿ ನೀಡಿದ್ದರು. ಅದರಂತೆ ಈ ಹಿಂದೆ ಗುತುತಿಸಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಅವರು, ಇದೀಗ ವೀಲ್ ಜಾಕ್ ಹಾಗೂ ಲಾರಿಯ ಇತರೆ ಭಾಗಗಳನ್ನು ಪತ್ತೆ ಮಾಡಿದ್ದಾರೆ. ನಾಳೆ ಕೂಡ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸಲಿದ್ದಾರೆ.

ಇದನ್ನೂ ಓದಿ: ದಿಂಬಂ ಘಟ್ಟದಲ್ಲಿ 30 ಅಡಿ ಕಂದಕಕ್ಕೆ ಬಿದ್ದ ಲಾರಿ, ಚಾಲಕ ಪಾರು - Lorry Fell Into Trench

ETV Bharat Logo

Copyright © 2024 Ushodaya Enterprises Pvt. Ltd., All Rights Reserved.