ETV Bharat / state

ಶಿರೂರು ಬಳಿ ಮುಂದುವರಿದ ಕಾರ್ಯಾಚರಣೆ: ಮಣ್ಣಿನಡಿ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ - Shiruru Hill Collapse Operation

author img

By ETV Bharat Karnataka Team

Published : 2 hours ago

ಅಂಕೋಲಾದ ಶಿರೂರು ಬಳಿ ಹೆದ್ದಾರಿ ಕುಸಿದ ಸ್ಥಳದಲ್ಲಿ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ನದಿ ನೀರಿನಡಿ ಮಣ್ಣಿನಲ್ಲಿ ಸಿಲುಕಿದ್ದ ಲಾರಿಯ ಇಂಜಿನ್ ಮತ್ತು ಕ್ಯಾಬಿನ್​ ಪತ್ತೆಯಾಗಿದೆ.

ಮಣ್ಣಿನ ಅಡಿಯಲ್ಲಿ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ!
ನದಿ ನೀರಿನಡಿ ಮಣ್ಣಿನಲ್ಲಿ ಹೂತು ಹೋಗಿದ್ದ ಲಾರಿ ಇಂಜಿನ್, ಕ್ಯಾಬಿನ್ ಮೇಲೆತ್ತಲಾಗಿದೆ. (ETV Bharat)

ಕಾರವಾರ: ಅಂಕೋಲಾದ ಶಿರೂರು ಗುಡ್ಡದ ಸಮೀಪ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಇಂದು ಮೂರನೇ ದಿನದ ಕಾರ್ಯಾಚರಣೆ ವೇಳೆ ಮಣ್ಣಿನಡಿ ಹೂತು ಹೋಗಿದ್ದ ಲಾರಿಯ ಇಂಜಿನ್​ ಹಾಗು ಕ್ಯಾಬಿನ್​ ಮೇಲೆಕ್ಕೆತ್ತಲಾಯಿತು.

ಗುಡ್ಡ ಕುಸಿದ ಗಂಗಾವಳಿ ನದಿ ತೀರದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇಂದು ಮುಂಜಾನೆಯಿಂದ ಆರಂಭವಾದ ಕಾರ್ಯಾಚರಣೆ ವೇಳೆ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ ಮಾಡಿ ಅದನ್ನು ಕ್ರೇನ್ ಮೂಲಕ ಕಾರ್ಮಿಕರು ಮೇಲಕ್ಕೆತ್ತಿದರು. ಇದು​ ಗ್ಯಾಸ್​​ ಟ್ಯಾಂಕರ್‌​​ ಇಂಜಿನ್​​​ ಇರಬಹುದೆಂದು ಶಂಕಿಸಲಾಗಿದೆ.

ಶಿರೂರು ಕಾರ್ಯಾಚರಣೆ: ಲಾರಿ ಇಂಜಿನ್, ಕ್ಯಾಬಿನ್ ಪತ್ತೆ (ETV Bharat)

ಜುಲೈ 16ರಂದು ಹೆದ್ದಾರಿ ಕುಸಿದು 11 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ 8 ಮಂದಿಯ ಶವ ಸಿಕ್ಕಿದೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ಹಾಗು ಕೇರಳದ ಅರ್ಜುನ್‌ ಮೃತದೇಹಕ್ಕಾಗಿ ಮತ್ತೆ ಶೋಧ ಕಾರ್ಯ ನಡೆಯುತ್ತಿದೆ. ಅರ್ಜುನ್ ಚಾಲನೆ ಮಾಡುತ್ತಿದ್ದ ಕಟ್ಟಿಗೆ ತುಂಬಿದ ಬೆಂಜ್ ಲಾರಿ ಕೂಡ ಕಾಣೆಯಾಗಿದ್ದು ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ: ಟ್ಯಾಂಕರ್ ಚೆಸ್ಸಿ ಸಿಕ್ಕರೂ ಪತ್ತೆಯಾಗದ ಮೃತದೇಹಗಳು: ಕಾದು ಕುಳಿತ ಕುಟುಂಬಸ್ಥರಿಗೆ ನಿರಾಸೆ - Shiruru Hill Collapse Operation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.