ETV Bharat / state

ಹಾವೇರಿ ಭೀಕರ ರಸ್ತೆ ಅಪಘಾತ ಪ್ರಕರಣ: ಲಾರಿ ಚಾಲಕ, ಕ್ಲೀನರ್ ಅರೆಸ್ಟ್ - Haver Accident

author img

By ETV Bharat Karnataka Team

Published : Jun 28, 2024, 9:05 PM IST

ಹಾವೇರಿ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ 13 ಜನ ಮೃತಪಟ್ಟ ಪ್ರಕರಣ ಸಂಬಂಧ ಲಾರಿ ಚಾಲಕ ಮತ್ತು ಅದರ ಕ್ಲೀನರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಭೀಕರ ರಸ್ತೆ ಅಪಘಾತ ಪ್ರಕರಣ
ಹಾವೇರಿ ಭೀಕರ ರಸ್ತೆ ಅಪಘಾತ ಪ್ರಕರಣ (ETV Bharat)

ಹಾವೇರಿ: ಅವರೆಲ್ಲಾ ತಮ್ಮ ಮನೆದೇವರು ದರ್ಶನಕ್ಕೆ ತೆರಳಿ ದರ್ಶನ ಪಡೆದು ಮರಳಿ ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನೇನು ಎರಡ್ಮೂರು ಗಂಟೆಯಲ್ಲಿ ಚಲಿಸಿದ್ದರೆ ಅವರ ಸ್ವಂತ ಊರು ಸೇರುತ್ತಿದ್ದರು. ಆದರೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ಬದಿ ನಿಂತಿದ್ದ ಲಾರಿ ಯಮನಾಗಿ ಪರಿಣಮಿಸಿದೆ. ಸ್ವಗ್ರಾಮಕ್ಕೆ ತೆರಳುತ್ತಿದ್ದ 17 ಜನರಿದ್ದ ಟಿಟಿ ವಾಹನವು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 11 ಜನ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಾಲ್ಕು ಜನ ಗಾಯಗೊಂಡಿದ್ದು ಅವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.

ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಮತ್ತು ಬೀರೂರು ಹಾಗೂ ಹನುಮಂತಪುರದ ನಿವಾಸಿಗಳು ಅಪಘಾತದಲ್ಲಿ ಮೃತಪಟ್ಟವರು. ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾಬಾಯಿ (65), ಪುಣ್ಯ (50), ಮಂಜುಳಾಬಾಯಿ (62), ಚಾಲಕ ಆದರ್ಶ (23), ಮಾನಸಾ (24), ರೂಪಾ (40), ಮಂಜುಳಾ (50), ಆರ್ಯ (4) ಮತ್ತು ನಂದನ್ (6) ಮೃತ ದುರ್ದೈವಿಗಳು.

ಲಾರಿ ಚಾಲಕ ಅರೆಸ್ಟ್: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಲಾರಿ ಚಾಲಕ 62 ವರ್ಷದ ರಮೇಶ್ ಮತ್ತು ಕ್ಲೀನರ್​ 23 ವರ್ಷದ ಪ್ರಜ್ವಲ್​​ನನ್ನ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಚಿಕ್ಕಮಗಳೂರು ನಿವಾಸಿಗಳು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 48 ರ ಬದಿಯಲ್ಲಿ ಲೋಡ್ ಮಾಡಿದ್ದ ಲಾರಿಯನ್ನ ಚಾಲಕ ನಿಲ್ಲಿಸಿದ್ದ. ಈ ಲಾರಿಗೆ ಟೆಂಪೋ ಟ್ರಾವೆಲರ್ ಹಿಂದಿನಿಂದ ಡಿಕ್ಕಿಹೊಡೆದಿತ್ತು.

ದರ್ಶನ ಪಡೆದು ಬರುವಾಗ ದುರಂತ: ಎಮ್ಮೀಹಟ್ಟಿ‌ ಗ್ರಾಮದ ಬಂಡಗಾರ ಕುಟುಂಬದ ಆದರ್ಶ ಚಾಲಕ ಕೆಲಸ ಮಾಡುತ್ತಾ ತಾನು ದುಡಿದ ದುಡ್ಡಿನಲ್ಲಿ ಸೆಕೆಂಡ್ ಹ್ಯಾಂಡ್ ಟಿಟಿ ವಾಹನ ತೆಗೆದುಕೊಂಡು, ತಮ್ಮ ಮನೆದೇವರಾದ ಚಿಂಚಲಿ ಮಾಯಕ್ಕನ ದರ್ಶನಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದ. ಜೊತೆಗೆ ತನ್ನ ತಂದೆ ತಾಯಿ ತಂಗಿ ಅಲ್ಲದೆ ಇತರ 13 ಸಂಬಂಧಿಕರು ಸೇರಿ ಚಿಂಚಲಿ ಮಾಯಕ್ಕನ ದರ್ಶನ ಬಳಿಕ ತುಳಜಾಪುರದ ತುಳಜಾಭವಾನಿ‌ ಮತ್ತು ಸವದತ್ತಿಯ ಯಲ್ಲಮ್ಮನ ದರ್ಶನ ಪಡೆದು, ಗುರುವಾರ ರಾತ್ರಿ ಸ್ವಗ್ರಾಮ ಎಮ್ಮಿಗಟ್ಟಿಗೆ ತೆರಳುತ್ತಿದ್ದರು. ಇನ್ನೇನು ಎರಡು ಗಂಟೆ ಪಯಣಿಸಿದ್ದರೆ ಈ 17 ಜನರು ತಮ್ಮ ಸ್ವಗ್ರಾಮ ಸೇರುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮನೆ ಸೇರಬೇಕಾದವರು ಮಸಣ ಸೇರಿದ್ದಾರೆ.

ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ತಂಡೋಪತಂಡವಾಗಿ ಬಂದು ಕಣ್ಣೀರು ಹಾಕಿದರು. ಸುಮಾರು 3 ಗಂಟೆ 30 ನಿಮಿಷದವರೆಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸುಮಾರು ಆರು ಆಂಬ್ಯುಲೆನ್ಸ್​ಗಳಲ್ಲಿ ಶವಗಳನ್ನು ಎಮ್ಮಿಹಟ್ಟಿ, ಬಿರೂರು ಮತ್ತು ಹನುಮಂತಪುರಕ್ಕೆ ರವಾನಿಸಲಾಯಿತು.

ಇದನ್ನೂ ಓದಿ: ಹಾವೇರಿ ಅಪಘಾತ: ರಾಷ್ಟ್ರೀಯ ಫುಟ್‌ಬಾಲ್ ತಂಡದ ಅಂಧ ಆಟಗಾರ್ತಿಯ IAS ಕನಸು ಸಾವಿನಲ್ಲಿ ಅಂತ್ಯ! - Haveri Horrible Accident

ಇದನ್ನೂ ಓದಿ: ಹಾವೇರಿ ಬಳಿ ಘನಘೋರ ರಸ್ತೆ ಅಪಘಾತ: ಮೂರು ಕುಟುಂಬಗಳ 13 ಮಂದಿ ಸಾವು, ಭೀಕರತೆ ಬಿಚ್ಚಿಟ್ಟ ಅಧಿಕಾರಿಗಳು - 13 Died In Haveri Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.