ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆ ಪ್ರತ್ಯೇಕ ವಾಹನ ತಪಾಸಣೆ ನಡೆಸಿದ ವೇಳೆಯಲ್ಲಿ ಲಕ್ಷಾಂತರ ದಾಖಲೆ ರಹಿತ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ- ಕಾರವಾರ ರಸ್ತೆ ಸಂಗಟಿಕೊಪ್ಪ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಬನವಾಸಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಫೋರ್ಡ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬನವಾಸಿಯ ಮನೋಹರ ಮೊರೆ ಎಂಬುವವರು ಹತ್ತಿರವಿದ್ದ ಬ್ಯಾಗಿನಲ್ಲಿ 55,500 ರೂ. ಕಂಡು ಬಂದಿದೆ. ಸದರ ಹಣಕ್ಕೆ ದಾಖಲಾತಿ ಕೇಳಲಾಗಿ ಅದಕ್ಕೆ ಪೂರಕವಾಗಿ ಯಾವುದೇ ದಾಖಲಾತಿಗಳನ್ನು ನೀಡಿರುವುದಿಲ್ಲ. ಆದ್ದರಿಂದ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸುಭಾಷ್ ಹನಮಪ್ಪ ತಳವಾರ ಮ್ಯಾಜಿಸೈಟ್ ಎಸ್ಎಸ್ಟಿ- 1 ಅವರು ಅನಧಿಕೃತ ಹಣ ವಶಕ್ಕೆ ಪಡೆದು ಕಲಘಟಗಿ ತಹಶೀಲ್ದಾರ್ ಸುಪರ್ದಿಗೆ ನೀಡಿದ್ದಾರೆ. ನಂತರ ಕಲಘಟಗಿ ತಹಶೀಲ್ದಾರ್ ಹಣವನ್ನು ಖಜಾನೆಯಲ್ಲಿ ಜಮೆ ಮಾಡಿ ವರದಿ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ತಡಸ್ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ದಾಖಲೆ ರಹಿತ 2,21,500 ರೂ. ನಗದನ್ನು ಎಸ್.ಎಸ್.ಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪುಣೆ - ಬೆಂಗಳೂರು ರಸ್ತೆಯ ತಡಸ್ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ ದಾಖಲೆ ರಹಿತ 2,21,500 ರೂ. ನಗದನ್ನು ಎಸ್.ಎಸ್.ಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಪ್ರಚಾರದ ವೇಳೆ ಭದ್ರತಾ ಲೋಪ ಪ್ರಕರಣ: ಗನ್ ಹೊಂದಿದ್ದ ವ್ಯಕ್ತಿ ಹೇಳಿದ್ದೇನು? - Security Lapse