ETV Bharat / state

ರಾಜ್ಯದಲ್ಲಿ 2ಕ್ಕೂ ಹೆಚ್ಚು ಲಕ್ಷ ನೋಟಾ ವೋಟು: ದ.ಕನ್ನಡದಲ್ಲಿ ಹೆಚ್ಚು, ನಿಮ್ಮ ಜಿಲ್ಲೆಯಲ್ಲಿ ಎಷ್ಟು? - NOTA Votes In Karnataka

author img

By ETV Bharat Karnataka Team

Published : Jun 7, 2024, 9:53 PM IST

Updated : Jun 7, 2024, 10:49 PM IST

ಈ ಬಾರಿಯೂ ನೋಟಾದತ್ತ ಮತದಾರರು ನೋಟ ಬೀರಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದ್ರೆ ರಾಜ್ಯದಲ್ಲಿ ಈ ಬಾರಿ ಕಡಿಮೆ ಮತಗಳು ದಾಖಲಾಗಿವೆ.

ನೋಟಾ ವೋಟು
ನೋಟಾ ವೋಟು (ETV Bharat)

ಬೆಂಗಳೂರು: ಕಣದಲ್ಲಿನ ಹುರಿಯಾಳುಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಮತದಾರರು 'ನೋಟಾ' ಬಳಸಿ ಹಕ್ಕು ಚಲಾಯಿಸಲು ಅವಕಾಶವಿದೆ. ಅಂತೆಯೇ ಲೋಕಸಭೆ ಚುನಾವಣೆಯಲ್ಲಿ ಮತದಾರರು ಈ ಬಾರಿಯೂ ನೋಟಾ ಬಟನ್ ಒತ್ತಿ, ಯಾವ ಅಭ್ಯರ್ಥಿಗೂ ತಮ್ಮ ಮತ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಈ ಬಾರಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,18,343 ಮತದಾರರು ನೋಟಾ ವೋಟು ಹಾಕಿದ್ದಾರೆ. ಅಂದರೆ ಒಟ್ಟು ಮತದಾನದ ಶೇ.3.43ರಷ್ಟು ಮತದಾರರು ಅಸಮಾಧಾನ ಹೊರಹಾಕಿದ್ದಾರೆ.

Constituency wise NOTA votes Polled In Karnataka
ನೋಟಾ ವೋಟು ಮಾಹಿತಿ (ETV Bharat)

ನೋಟಾ ಆಟದಲ್ಲಿ ರಾಜ್ಯಕ್ಕೆ 12ನೇ ಸ್ಥಾನ: ದೇಶಾದ್ಯಂತ ಈ ಬಾರಿ ನೋಟಾ ಆಟ ಜೋರಾಗಿದೆ. ಬಿಹಾರದಲ್ಲಿ 8,99,616 (14.12%) ಮತದಾರರು ನೋಟಾ ಮತ ಹಾಕಿದ್ದಾರೆ. ಈ ಮೂಲಕ ಬಿಹಾರದಲ್ಲಿ ಅತೀ ಹೆಚ್ಚು ನೋಟಾ ವೋಟು ಬಿದ್ದಿವೆ. ಹಾಗೆಯೇ ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು 6,36,848 (9.99%) ನೋಟಾ ಮತಗಳು ದಾಖಲಾಗಿವೆ. ಇನ್ನು 12 ಸ್ಥಾನದಲ್ಲಿರುವ ಕರ್ನಾಟಕದಲ್ಲಿ 2,18,343 (3.43%) ಮತಗಳು ನೋಟಾಗೆ ಬಂದಿವೆ.

ಅತೀ ಹೆಚ್ಚು ನೋಟಾ ದಾಖಲಾದ ಕ್ಷೇತ್ರಗಳು: ಈ ಬಾರಿ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ನೋಟಾ ವೋಟು ದಾಖಲಾಗಿವೆ. ಕರಾವಳಿ ಜಿಲ್ಲೆಯಲ್ಲಿ ಚಲಾವಣೆಯಾದ ಮತಗಳಲ್ಲಿ 23,576 ಅಂದರೆ ಶೇ.1.69ರಷ್ಟು ಮತದಾರರು ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 13,554 (0.77%) ಮತ್ತು ಮೂರನೇ ಸ್ಥಾನದಲ್ಲಿರುವ ಬೆಂಗಳೂರು ಕೇಂದ್ರದಲ್ಲಿ 12,126 (0.92%) ಮತಗಳು ನೋಟಾಗೆ ಬಿದ್ದಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 11,269 (0.92%) ಮತ್ತು ಹಾವೇರಿಯಲ್ಲಿ 10,865 (0.78%) ಮತದಾರರು ಯಾವ ಅಭ್ಯರ್ಥಿಯನ್ನೂ ಬೆಂಬಲಿಸಿಲ್ಲ.

ಯಾವ ಕ್ಷೇತ್ರದಲ್ಲಿ ಅತೀ ಕಡಿಮೆ ನೋಟಾ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ರಾಜ್ಯದಲ್ಲೇ ಅತೀ ಕಡಿಮೆ ನೋಟಾ ವೋಟು ದಾಖಲಾಗಿವೆ. ಈ ಕ್ಷೇತ್ರದಲ್ಲಿ ಕೇವಲ 2,608 (0.92%) ಮತಗಳು ನೋಟಾಗೆ ಬಂದಿವೆ.

ಕಳೆದ ಬಾರಿಗಿಂತ ಕಡಿಮೆ: 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಸುಮಾರು 2,50,810 ಲಕ್ಷ ಮತದಾರರು ನೋಟಾ ಹಾಕಿದ್ದರು. ಅನೇಕ ಕಡೆ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ನೋಟಾವೇ ಮುಂದಿತ್ತು. ಕರ್ನಾಟಕದಲ್ಲಿ ಒಟ್ಟು ಮತ ಚಲಾವಣೆಯಾದ ಪೈಕಿ 0.71% ನೋಟಾ ಆಯ್ಕೆ ಮಾಡಿದ್ದರು. ಉತ್ತರ ಕನ್ನಡ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದ್ರೆ 16,017 ಮತದಾರರು ನೋಟಾ ಒತಿದ್ದರು. ಬೀದರ್​ನಲ್ಲಿ ಅತೀ ಕಡಿಮೆ 1,948​ ವೋಟುಗಳು ಬಿದ್ದಿದ್ದವು.

ಈ ಬಾರಿ 2024ರ ಲೋಕಸಭೆ ಚುನಾವಣೆಯಲ್ಲಿ ಕಳೆದ 2019ರ ಚುನಾವಣೆಗಿಂತ ಕಡಿಮೆ ಮತದಾರರ ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ 2,50,810 ಲಕ್ಷ ನೋಟಾ ದಾಖಲಾಗಿದ್ರೆ, ಈ ಬಾರಿ 2,18,343 ನೋಟಾ ಮತಗಳು ಬಂದಿವೆ.

ಇದನ್ನೂ ಓದಿ: ಜೂನ್ 9ರ ಸಂಜೆ ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣವಚನ - Modi Oath Taking Ceremony

None Of The Above ಎನ್ನುವುದರ ಸಂಕ್ಷಿಪ್ತ ರೂಪವೇ 'ನೋಟಾ'. ಈ ಮೇಲಿನ ಯಾರೂ ಅಲ್ಲ ಎನ್ನುವುದು ಇದರ ಅರ್ಥ. ಸ್ಪರ್ಧೆ ನಡೆಸಿರುವ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಷ್ಟವಿಲ್ಲದವರು 'ನೋಟಾ' ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ಅಭ್ಯರ್ಥಿ; ಇಂದೋರ್​ ಕ್ಷೇತ್ರದಲ್ಲಿ ನೋಟಾಗೇ 2ನೇ ಸ್ಥಾನ, 2.18 ಲಕ್ಷ ಮತ! - Indore gets record Nota votes

Last Updated : Jun 7, 2024, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.