ETV Bharat / state

ಇಂದು ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ - Modi Rally In Davanagere - MODI RALLY IN DAVANAGERE

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸಲು ಕಳೆದ ರಾತ್ರಿ ಪ್ರಧಾನಿ ಮೋದಿ ಬೆಳಗಾವಿಗೆ ಆಗಮಿಸಿದ್ದಾರೆ. ಇಂದು ದಾವಣಗೆರೆಗೆ ಭೇಟಿ ನೀಡಲಿರುವ ಅವರು ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

davanagere
ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶಕ್ಕೆ ಸಿದ್ಧತೆ
author img

By ETV Bharat Karnataka Team

Published : Apr 28, 2024, 8:13 AM IST

Updated : Apr 28, 2024, 12:30 PM IST

ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ

ದಾವಣಗೆರೆ: ಇಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತ ಯಾಚಿಸಲಿದ್ದಾರೆ. ನಗರದ ಹೈಸ್ಕೂಲ್​ ಮೈದಾನದಲ್ಲಿ ಸಮಾವೇಶ ನಡೆಯಲಿದೆ.

15 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಮತ್ತು ಪೆಂಡಾಲ್​ ನಿರ್ಮಿಸಲಾಗಿದೆ. ವೇದಿಕೆ ಮುಂಭಾಗ ಒಂದು ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯಲ್ಲಿ 51 ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಹೆಲಿಕಾಪ್ಟರ್​ ಮೂಲಕ ಮೋದಿ ಜಿಎಂ ಐಟಿ ಕಾಲೇಜಿನ ಹೆಲಿಪಾಡ್​ಗೆ ಬರಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಸಮಾವೇಶದ ಸ್ಥಳಕ್ಕಾಗಮಿಸುವರು.

ಒಂದು ದಿನ ಮುಂಚಿತ ವೇದಿಕೆಯಿಂದ 1 ಕಿಲೋಮೀಟರ್ ಸುತ್ತಮುತ್ತಲು ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ರಸ್ತೆಗಳ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಅಂಗಡಿ ಮುಂಗಟ್ಟುಗಳು, ಹೊಟೆಲ್​ಗಳನ್ನು ಬಂದ್​ ಮಾಡಲಾಗಿದೆ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಗು ಹಾವೇರಿಯಿಂದ ಸುಮಾರು 2,000ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ: ಇಂದು ಅಭ್ಯರ್ಥಿಗಳ ಪರ ಮತಯಾಚನೆ - Modi In Belagavi

Last Updated : Apr 28, 2024, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.