ETV Bharat / state

ಮತ ಹಾಕಿ ಟಿಫನ್ ಮಾಡಿ ಆಫರ್​ಗೆ ಮುಗಿಬಿದ್ದ ಮತದಾರರು: ಮಸಾಲಾ ದೋಸೆ, ಪಲಾವ್, ಟೀ ಸವಿದು ಫುಲ್​ ಖುಷ್ - Lok Sabha election 2024 - LOK SABHA ELECTION 2024

ಮತ ಹಾಕಿ ಟಿಫನ್ ಮಾಡಿ ಆಫರ್​ಗಾಗಿ ಮತದಾರರು ಮುಗಿಬಿದ್ದ ದೃಶ್ಯ ಶಿವಮೊಗ್ಗದಲ್ಲಿ ಕಂಡು ಬಂದಿದೆ. ಮತಚಲಾವಣೆ ಮಾಡಿದವರಿಗೆ ಮಸಾಲಾ ದೋಸೆ, ಪಲಾವ್, ಟೀ ನೀಡಲಾಯಿತು.

Etv Bharat
Etv Bharat (Etv Bharat)
author img

By ETV Bharat Karnataka Team

Published : May 7, 2024, 2:58 PM IST

ಮತ ಹಾಕಿ ಟಿಫನ್ ಮಾಡಿ ಆಫರ್​ಗೆ ಮುಗಿಬಿದ್ದ ಮತದಾರರು: ಮಸಾಲಾ ದೋಸೆ, ಪಲಾವ್, ಟೀ ಸವಿದು ಫುಲ್​ ಖುಷ್ (ETV Bharat)

ಶಿವಮೊಗ್ಗ: ಮತದಾನ ಅಮೂಲ್ಯ. ದೇಶ ಕಟ್ಟಲು ಮತದಾನ ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಶುಭಂ ಹೋಟೆಲ್ ವತಿಯಿಂದ ಮತದಾನ ಪ್ರಮಾಣ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಇಂದು (ಮಂಗಳವಾರ) ಬೆಳಗ್ಗೆ 12 ಗಂಟೆಯೊಳಗೆ ಮತದಾನ ಮಾಡಿ ಬಂದು ಶಾಹಿ ಗುರುತು ತೋರಿಸಿದವರಿಗೆ ಉಚಿತ ಟಿಫನ್ ಹಾಗೂ ಟೀ ನೀಡುವುದಾಗಿ ಘೋಷಣೆ ಮಾಡಲಾಯಿತು. ವೋಟ್​ ಮಾಡಿ ಬಂದ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Shivamogga  Lok Sabha election 2024  Distribution of tiffin to voters
ವೋಟ್ ಮಾಡಿದವರಿಗಾಗಿ ದೋಸೆ ಸಿದ್ಧ (ETV Bharat)

ಶಿವಮೊಗ್ಗ ನಗರದ ದುರ್ಗಿಗುಡಿ ಬಡಾವಣೆಯಲ್ಲಿ ಇರುವ ಶುಭಂ ಹೋಟೆಲ್​ನಲ್ಲಿ 12 ಗಂಟೆಯೊಳಗೆ ಮತದಾನ ಮಾಡಿ ಬಂದವರಿಗೆ ಉಚಿತ ಟಿಫನ್ ನೀಡಲಾಯಿತು. ಹೋಟೆಲ್​ನಲ್ಲಿ ಇಂದು ಇದಕ್ಕಾಗಿಯೇ ಹೋಟೆಲ್​ನ ಹೊರಗಡೆ ಪತ್ಯೇಕವಾಗದ ಕೌಂಟರ್ ತೆರೆಯಲಾಗಿತ್ತು. ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು ತಮ್ಮ ಕೈಗೆ ಹಾಕಿರುವ ಶಾಹಿ ಗುರುತನ್ನು ತೋರಿಸಿದರು. ಆಗ ಕೌಂಟರ್​ನಲ್ಲಿದ್ದವರು ಅವರಿಗೆ ಉಚಿತವಾಗಿ ಮಸಾಲಾ ದೋಸೆ, ಪಲಾವ್​ ಹಾಗೂ ಟೀ ನೀಡಿದರು. ಈ ವೇಳೆ, ಮತದಾರರು ರೈಸ್ ಬಾತ್​​ಗಿಂತ ಮಸಾಲಾ ದೋಸೆಗೆ ಮುಗಿ ಬಿದ್ದಿರುವ ದೃಶ್ಯ ಕಂಡ ಬಂತು. ಮತದಾರರನ್ನು ನಿಯಂತ್ರಿಸಲು ಹೋಟೆಲ್ ಮಾಲೀಕರು ಹರಸಾಹಸ ಪಟ್ಟರು.

ವೋಟ್​ ಮಾಡಿದ ನಂತರ ದೋಸೆ ಸವಿಯುತ್ತಿರುವ ಮತದಾರ (ETV Bharat)

ದೋಸೆ ತಿಂದು, ಟೀ ಸವಿದ ಶಿವಮೊಗ್ಗದ ಮನೋಜ್ ಈ ಟಿವಿ ಭಾರತ ಜೊತೆಗೆ ಮಾತನಾಡಿ, ''ಶುಭಂ ಹೋಟೆಲ್​ನವರು ಮತದಾನ ಪ್ರಕ್ರಿಯೆ ಹೆಚ್ಚಾಗಲು ಒಂದು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶುಭಂ ಹೋಟೆಲ್​ನವರು ನೀಡಿದ ಆಫರ್​ಗೆ ಶಿವಮೊಗ್ಗದ ಜನರು ಚೆನ್ನಾಗಿ ರೆಸ್ಪಾನ್ಸ್ ಮಾಡುತ್ತಿದ್ದಾರೆ. ಇತ್ತಿಚೀನ ವರ್ಷಗಳಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಇದರಿಂದ ಮತದಾನ ಹೆಚ್ಚಿಸಲು ಇದು ಒಳ್ಳೆಯ ಐಡಿಯಾ ಮಾಡಿದ್ದಾರೆ. ಇದಕ್ಕೆ ಜನ ಸಹ ಸ್ಪಂದಿಸಿದ್ದಾರೆ'' ಎಂದರು.

ಮತದಾನ ಮಾಡಿದವರಿಗೆ ದೋಸೆ ನೀಡುತ್ತಿರುವ ದೃಶ್ಯ (ETV Bharat)

ಹೋಟೆಲ್ ಮಾಲೀಕನ ಪ್ರತಿಕ್ರಿಯೆ: ಶುಭಂ ಹೋಟೆಲ್ ಮಾಲೀಕರಾದ ಉದಯ್ ಕಡಂಬ ಪ್ರತಿಕ್ರಿಯಿಸಿ, ''ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಆಗುತ್ತಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮತದಾರರು ಬೆಳಗ್ಗೆಯಿಂದಲೇ ಹೋಟೆಲ್​ಗೆ ಬಂದು ಟಿಫನ್ ಸವಿಯುತ್ತಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಮತದಾರರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿದೆ. ನಾವು ಸುಮಾರು 1,500 ಸಾವಿರ ಜನರು ಬರಬಹುದೆಂದು ಅಂದಾಜಿಸಿದ್ದೆವು. ಆದರೆ, ಇದುವರೆಗೂ ಸುಮಾರು 5 ಸಾವಿರಕ್ಕೂ ಮತದಾರರು ಆಗಮಿಸಿದ್ದಾರೆ'' ಎಂದು ಅವರು ತಿಳಿಸಿದ್ದಾರೆ‌.

ದೋಸೆ ಸವಿಯಲು ಬಂದಿರುವ ಮತದಾರರು (ETV Bharat)

ಇದನ್ನೂ ಓದಿ: ಮೊದಲ ಬಾರಿ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಮತದಾನ: ಸೊಸೆ ಶ್ರದ್ಧಾ, ಸಂಸದೆ ಮಂಗಲ ಅಂಗಡಿ ಸಾಥ್ - Jagadish Shettar Casts Vote

ETV Bharat Logo

Copyright © 2025 Ushodaya Enterprises Pvt. Ltd., All Rights Reserved.