ETV Bharat / state

ಮೈಸೂರು ದಸರಾ 2024: ಗಜಪಯಣಕ್ಕೆ 18 ಆನೆಗಳ ಪಟ್ಟಿ ರೆಡಿ - Mysuru Dasara

ಮೈಸೂರು ದಸರಾ-2024 ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ 18 ಆನೆಗಳ ಪಟ್ಟಿ ರೆಡಿಯಾಗಿದೆ.

mysuru dasara
ಮೈಸೂರು ದಸರಾ (ETV Bharat)
author img

By ETV Bharat Karnataka Team

Published : Jul 22, 2024, 6:43 PM IST

ಮೈಸೂರು: ನಾಡಹಬ್ಬ ಮೈಸೂರು ದಸರಾ-2024 ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕ್ಯಾಪ್ಟನ್​​ ಅಭಿಮನ್ಯು ನೇತೃತ್ವದ 18 ಆನೆಗಳ ಪಟ್ಟಿ ಸಿದ್ಧಗೊಂಡಿದೆ. ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ, ಪಟ್ಟಿ ರೆಡಿ ಮಾಡಿ, ಬೆಂಗಳೂರಿನ ಮುಖ್ಯ ಅರಣ್ಯಾಧಿಕಾರಿಗಳಿಗೆ ಕಳುಹಿಸಿದ್ದಾರೆ.

Elephants
ಮೈಸೂರು ದಸರಾ (ETV Bharat)

ಈ ಬಾರಿಯ ದಸರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 18 ಆನೆಗಳ ಪಟ್ಟಿಯಲ್ಲಿ, ಅಭಿಮನ್ಯು ನೇತೃತ್ವದ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. 4 ಆನೆಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ. ಅವು ಬದಲಿ ಆನೆಗಳಾಗಿರಲಿದ್ದು, ಆಗಸ್ಟ್‌ ಮೊದಲ ಅಥವಾ ಎರಡನೇ ವಾರದಲ್ಲಿ ಗಜಪಯಣ ನಡೆಯಲಿದೆ.

Elephants
ಆನೆಗಳು (ETV Bharat)

ಶಿಬಿರಗಳಲ್ಲಿ ದಸರಾ ಆನೆಗಳ ಪರಿಶೀಲನೆ: ನವರಾತ್ರಿ ಆರಂಭಕ್ಕೆ ಕೆಲ ತಿಂಗಳುಗಳು ಬಾಕಿಯಿದ್ದು, ಅಕ್ಟೋಬರ್‌ 12ರಂದು ಜಂಬೂ ಸವಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳಿಗೂ ಮುಂಚೆಯೇ ದಸರಾ ಆನೆಗಳನ್ನು ಎರಡು ಹಂತಗಳಲ್ಲಿ ಮೈಸೂರಿಗೆ ಕರೆತಂದು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಮೈಸೂರು ಅರಣ್ಯ ವಲಯದ ಡಿಸಿಎಫ್‌ ಡಿ.ಎಂ.ಶರಣಬಸಪ್ಪ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ವೈದ್ಯರು ಸೇರಿದಂತೆ ಅರಣ್ಯ ಇಲಾಖೆ ತಂಡ ಆನೆ ಶಿಬಿರಗಳಿಗೆ ಭೇಟಿ ನೀಡಿತ್ತು.

''ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಗೋಡು, ಭೀಮನಕಟ್ಟೆ, ದೊಡ್ಡ ಹರವೆ, ಕೊಡಗಿನ ದುಬಾರೆ ಆನೆ ಶಿಬಿರ, ಬಂಡೀಪುರದ ರಾಮಾಪುರ ಆನೆ ಶಿಬಿರಗಳಿಗೆ ಅಧಿಕಾರಿಗಳು ತೆರಳಿದ್ದೆವು. ಶಿಬಿರಗಳಲ್ಲಿರುವ ಒಟ್ಟು 22 ಆನೆಗಳನ್ನು ಪರಿಶೀಲಿಸಿ, ಅಂತಿಮವಾಗಿ 18 ಆನೆಗಳ ಪಟ್ಟಿ ಸಿದ್ಧವಾಗಿದೆ. ಅದರಲ್ಲಿ 14 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಉಳಿದ 4 ಆನೆಗಳನ್ನು ಕಾಯ್ದಿರಿಸುವ ಉದ್ದೇಶದಿಂದ ಆಯ್ಕೆ ಮಾಡಲಾಗಿದೆ. ಆನೆಗಳ ಪಟ್ಟಿಯನ್ನು ಬೆಂಗಳೂರಿನ ಮುಖ್ಯ ಅರಣ್ಯಾಧಿಕಾರಿಗಳ ಕಚೇರಿಗೆ ರವಾನಿಸಲಾಗಿದೆ'' ಎಂದು ಡಿಸಿಎಫ್‌ ಶರಣಬಸಪ್ಪ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಆಗಸ್ಟ್‌ ಎರಡನೇ ವಾರದಲ್ಲಿ ಗಜಪಯಣ: ''ದಸರಾಗೆ ಎರಡು ತಿಂಗಳ ಮುನ್ನವೇ ಆನೆಗಳನ್ನು ಮೈಸೂರಿಗೆ ಕರೆತಂದು ಜಂಬೂ ಸವಾರಿ ತಾಲೀಮು ನಡೆಸಿ, ಸಜ್ಜುಗೊಳಿಸಲು ಅರಣ್ಯ ಇಲಾಖೆ ಚಿಂತಿಸಿದೆ. ಆಗಸ್ಟ್​ 9 ಅಥವಾ 11ರಂದು ವೀರನಹೊಸಹಳ್ಳಿಯಿಂದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಗಜಪಯಣ ನಡೆಯಲಿದೆ. ಮೊದಲ ಹಂತದಲ್ಲಿ 9 ಆನೆಗಳನ್ನು ಕರೆತರುವ ಯೋಚನೆ ಇದೆ'' ಎಂದರು.

ಮೊದಲ ಹಂತದ ಗಜಪಯಣದಲ್ಲಿ, ಮತ್ತಿಗೋಡು ಆನೆ ಶಿಬಿರದಿಂದ ಕ್ಯಾಪ್ಟನ್‌ ಅಭಿಮನ್ಯು(58), ಏಕಲವ್ಯ(39), ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮೀ(68), ದುಬಾರೆ ಆನೆ ಶಿಬಿರದ ಧನಂಜಯ(41), ಗೋಪಿ(42), ಕಂಜನ್‌(25), ರಾಮಾಪುರ ಶಿಬಿರದಿಂದ ರೋಹಿತ್‌(22) ಹಾಗೂ ಲಕ್ಷ್ಮೀ(23) ಸೇರಿದಂತೆ 9 ಆನೆಗಳು ಆಗಮಿಸಲಿವೆ. ಎರಡನೇ ಹಂತದಲ್ಲಿ, ದುಬಾರೆ ಶಿಬಿರದಿಂದ ಪ್ರಶಾಂತ್‌(51), ಸುಗ್ರೀವ(42), ಮತ್ತಿಗೋಡು ಶಿಬಿರದಿಂದ ಮಹೇಂದ್ರ(41), ದೊಡ್ಡ ಹರವೇಯಿಂದ ಲಕ್ಷ್ಮೀ(53) ಹಾಗೂ ರಾಮಾಪುರ ಶಿಬಿರದಿಂದ ಈರಣ್ಯ(37) ಎಂಬ ಆನೆಗಳು ಮೈಸೂರಿಗೆ ಬರಲಿವೆ.

ದಸರಾದ 14 ಆನೆಗಳಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಹಾಗೂ ಇತರ ಅನಾಹುತಗಳು ಸಂಭವಿಸಿದರೆ, ಪರ್ಯಾಯವಾಗಿ 4 ಆನೆಗಳಾದ ದುಬಾರೆ ಶಿಬಿರದ ಪ್ರಶಾಂತ್‌(49), ಅಯ್ಯಪ್ಪ(13), ರಾಮಾಪುರ ಕ್ಯಾಂಪ್​ನಿಂದ ಪಾರ್ಥಸಾರಥಿ(19) ಹಾಗೂ ಮಾಲಾದೇವಿ(37) ಆನೆಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ಹಾಸನದ ಯಸಳೂರಿನಲ್ಲಿ ಶಂಕುಸ್ಥಾಪನೆ - Elephant Arjuna Memorial

ETV Bharat Logo

Copyright © 2024 Ushodaya Enterprises Pvt. Ltd., All Rights Reserved.