ETV Bharat / state

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದು ಮಾಡಲಿ: ಗೃಹಸಚಿವ ಜಿ.ಪರಮೇಶ್ವರ್ - G Parameshwar - G PARAMESHWAR

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದು ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದರು.

diplomatic passport  Prajwal Revanna  Minister G Parameshwar  Bengaluru
ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : May 24, 2024, 2:32 PM IST

ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: ''ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲಿ, ಆಗ ಅವರಿರುವ ದೇಶಗಳು ಅವರನ್ನು ಹೊರಹಾಕುತ್ತವೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ''ಪಾಸ್​ಪೋರ್ಟ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದರು. ಎರಡನೇ ಪತ್ರವನ್ನೂ ಬರೆದಿದ್ದಾರೆ. ದೇವೇಗೌಡರು ಪ್ರಜ್ವಲ್ ಬರಲಿ ಎಂದು ಪತ್ರ ಬರೆದಿದ್ದಾರೆ. ಇದು ನಮಗೆ ಗೊತ್ತಾಗಿದೆ. ಅದು ಅವರ ಕುಟುಂಬದ ಆಂತರಿಕ ವಿಚಾರ. ಸಾರ್ವಜನಿಕ ಜೀನವದಲ್ಲಿ ಅವರ ಪತ್ರಕ್ಕೆ ಗೌರವ ಕೊಡಬೇಕು. ಈಗಲಾದ್ರೂ ಪ್ರಜ್ವಲ್ ಬರಬೇಕು. ತನಿಖೆ ಎದುರಿಸಬೇಕು. ನಾನು ಅವರಿವರ ಟ್ವೀಟ್​ಗೆ ಉತ್ತರ ಕೊಡಲ್ಲ. ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಎಸ್​ಐಟಿ ತನಿಖೆಯಲ್ಲಿ ಲೋಪವಿದೆಯೇ ಹೇಳಲಿ. ಆಗ ನಾವು ಗಮನ ಹರಿಸ್ತೇವೆ. ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅವರು ಏನೂ ರೆಸ್ಪಾನ್ಸ್ ಮಾಡಿಲ್ಲ'' ಎಂದರು.

ನೇಹಾ, ಅಂಜಲಿ ಹತ್ಯೆ ಪ್ರಕರಣಗಳ ವಿಚಾರ: ನೇಹಾ, ಅಂಜಲಿ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿ, ''ಲಾ ಆ್ಯಂಡ್ ಆರ್ಡರ್ ಹಾಳಾಗದಂತೆ ನೋಡಿಕೊಂಡಿದ್ದೇವೆ. ಇವರ ಕಾಲದಲ್ಲಿ ಮರ್ಡರ್ ಆಗಿರಲಿಲ್ವೇ? ನಾವು ಆಗಲಿ ಅಂತ ಬಯಸಲ್ಲ. ಕೇಸ್​ನಲ್ಲಿ ಚಾರ್ಜ್ ಮಾಡಿದ್ದೇವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಶಾಂತಿಯುತ ಚುನಾವಣೆ ಮಾಡಿದ್ದೇವೆ. ಗಣೇಶ ಉತ್ಸವದಲ್ಲಿ ಗಲಾಟೆ ತಡೆದಿದ್ದೇವೆ. ರಂಜಾನ್ ವೇಳೆ ಗಲಾಟೆ ಹತ್ತಿಕ್ಕಿದ್ದೇವೆ. ಬೇರೆ ಸಂದರ್ಭದಲ್ಲಿ ಗಲಾಟೆ ಆಗ್ತಿದ್ವು. ಒಳ್ಳೆಯ ಆಡಳಿತವನ್ನು ನಾವು ಕೊಡ್ತಿದ್ದೇವೆ'' ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ: ಕರ್ನಾಟಕ ಉಡ್ತಾ ಬೆಂಗಳೂರು ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಅವರು ಇಂಥದೆಲ್ಲಾ ಮಾತನಾಡಬಾರದು. ನಾವು ಡ್ರಗ್ಸ್ ಮುಕ್ತ ಮಾಡೋಕೆ‌ ನೋಡ್ತಿದ್ದೇವೆ. ಎಂಡಿಎಂ, ಸಿಂಥೆಟಿಕ್ ಡ್ರಗ್ಸ್ ಸೀಜ್ ಮಾಡಿದ್ದೇವೆ. ಫಾರಿನ್ ಸ್ಟೂಡೆಂಟ್ಸ್‌ ಡ್ರಗ್ಸ್ ದಂಧೆಯಲ್ಲಿದ್ದರು. ಅವರನ್ನು ಗಡಿಪಾರು ಮಾಡುವ ಕೆಲಸ ಮಾಡ್ತಿದ್ದೇವೆ. ಈ ವೇಳೆ ಉಡ್ತಾ ಬೆಂಗಳೂರು ಅಂದ್ರೆ ಸರಿಯಲ್ಲ. ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ'' ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಫೋನ್ ಟ್ಯಾಪಿಂಗ್ ಆರೋಪ ವಿಚಾರವಾಗಿ ಮಾತನಾಡಿ, ''ಚೀನಾದಿಂದ ಯಾರು ಫೋನ್ ಸಲಕರಣೆ ತಂದಿದ್ದಾರೆ. ಯಾವ ಬ್ರಾಂಡ್ ತಂದಿದ್ದಾರೆ. ಯಾರ ಫೋನ್‌ ಟ್ಯಾಪಿಂಗ್ ಮಾಡಿದ್ದಾರೆ. ಇದರ ಬಗ್ಗೆ ಅವರಿಗೆ ಗೊತ್ತಿರಬೇಕಲ್ಲ?. ಸ್ಪೆಸಿಪಿಕ್ ಆಗಿ ಮಾಹಿತಿ ಕೊಡಲಿ. ಆಗ ನಾವು ಸ್ಪಂದಿಸುತ್ತೇವೆ'' ಎಂದರು.

ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ಗಲಾಟೆ: ಬೆಳಗಾವಿ ನಗರ ಪೊಲೀಸ್​ ಆಯುಕ್ತರು ಹೇಳಿದ್ದೇನು? - Belagavi Police Commissioner

ETV Bharat Logo

Copyright © 2025 Ushodaya Enterprises Pvt. Ltd., All Rights Reserved.