ETV Bharat / state

ತಾಯಿ - ನವಜಾತ ಶಿಶು ಮರಣ ತಗ್ಗಿಸಿದ ದಾವಣಗೆರೆ ಸರ್ಕಾರಿ ಆಸ್ಪತ್ರೆ: ಅತ್ಯುತ್ತಮ ಚಿಕಿತ್ಸಾ ವೈಖರಿಗೆ 'ಲಕ್ಷ್ಯ' ಗರಿ - Lakshya Honor to Davangere Hospital

ಚಾಮರಾಜಪೇಟೆಯಲ್ಲಿರುವ ಮಹಿಳೆಯರ ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ 'ಲಕ್ಷ್ಯ' ಗರಿ ಸಿಕ್ಕಿದೆ.‌

Lakshya Honor to Davangere Hospital
ದಾವಣಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ (ETV Bharat)
author img

By ETV Bharat Karnataka Team

Published : Jul 20, 2024, 8:02 PM IST

ದಾವಣಗೆರೆ ಸರ್ಕಾರಿ ಆಸ್ಪತ್ರೆ ಸಾಧನೆ - ಪ್ರತಿಕ್ರಿಯೆ ಹೀಗಿದೆ (ETV Bharat)

ದಾವಣಗೆರೆ: ತಾಯಿ ಹಾಗೂ ನವಜಾತ ಶಿಶುಗಳ ಮರಣ ತಗ್ಗಿಸುವಲ್ಲಿ ಮಹಿಳೆಯರ ಮಕ್ಕಳ ಸರ್ಕಾರಿ ಹೆರಿಗೆ ಆಸ್ಪತ್ರೆ ಮುಂಚೂಣಿಯಲ್ಲಿದೆ. ಅಲ್ಲದೇ ನಾರ್ಮಲ್ ಡೆಲವರಿ ಮಾಡಿಸುವಲ್ಲಿ ಇದೇ ಆಸ್ಪತ್ರೆಯ ವೈದ್ಯರು ನಿಪುಣರು. ಸ್ವಚ್ಛತೆ ಅಲ್ಲದೇ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ಗರಿ ಕೂಡ ಇದೇ ಆಸ್ಪತ್ರೆಗೆ ಸಲ್ಲುತ್ತದೆ. ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಮಹಿಳೆಯರ ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ 'ಲಕ್ಷ್ಯ' ಎಂಬ ಗರಿ ಸಿಕ್ಕಿದೆ.‌

Davangere Hospital Staff
ದಾವಣಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ (ETV Bharat)

ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ತಗ್ಗಿಸುವಲ್ಲಿ ಈ ಆಸ್ಪತ್ರೆ ವಿಶಿಷ್ಟ ಸಾಧನೆ ಮಾಡಿವೆ. ಅಲ್ಲದೇ, ಉತ್ತಮ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ಸಿಬ್ಬಂದಿ ಶ್ರಮಿಸಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಆರೋಗ್ಯ ವೃದ್ಧಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಲಕ್ಷ್ಯ' ಎಂಬ ಕಾರ್ಯಕ್ರಮಕ್ಕೆ ಈ ಆಸ್ಪತ್ರೆ ಆಯ್ಕೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಷ್ಟ್ರೀಯ ಗುಣಮಟ್ಟ ಪ್ರಮಾಣಪತ್ರವನ್ನು ಆಸ್ಪತ್ರೆ ಪಡೆದುಕೊಂಡಿದೆ.

'ನ್ಯಾಷನಲ್ ಲೆವಲ್ ಆಪ್ ಹೆಲ್ತ್ ಸಿಸ್ಟಮ್ ರಿಸೋರ್ಸ್ ಸೆಂಟರ್' ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದೆ. ಬಳಿಕ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆ ಎಂದು 'ಲಕ್ಷ್ಯ' ಪ್ರಮಾಣ ಪತ್ರ ನೀಡಲಾಗಿದೆ. ಈ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ರೋಗಿಗಳ ಹಕ್ಕುಗಳು, ರೋಗಿಗಳ ಸುರಕ್ಷತೆ, ಮಿಷನರಿ ಹೇಗಿವೆ, ಯಾವ ರೀತಿ ಸೇವೆ ನೀಡಲಾಗುತ್ತಿದೆ, ತ್ಯಾಜ್ಯ ವಿಲೇವಾರಿ, ನಾರ್ಮಲ್ ಹೆರಿಗೆಯಂತಹ ಅಂಶಗಳಲ್ಲಿ ಆಸ್ಪತ್ರೆ ಉತ್ತೀರ್ಣವಾದ ಹಿನ್ನೆಲೆ ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆ ಎಂದು 'ಲಕ್ಷ್ಯ' ಪ್ರಮಾಣ ಪತ್ರ ನೀಡಲಾಗಿದೆ.‌ ಈ ಎಲ್ಲ ಅಂಶಗಳಲ್ಲೂ ಆಸ್ಪತ್ರೆಗೆ ಶೇ. 95 ರಿಂದ 96ರಷ್ಟು ಅಂಕ ಸಿಕ್ಕಿದೆ.

''ಆಸ್ಪತ್ರೆಯ ಕುಂದುಕೊರತೆ ನೀಗಿಸಿದ್ದರಿಂದ ಲಕ್ಷ್ಯ ಪ್ರಮಾಣ ಪತ್ರ ದೊರೆತಿದೆ. ಗುಣಮಟ್ಟದ ಚಿಕಿತ್ಸೆಯಿಂದ ಹಿಡಿದು ಪ್ರಮುಖ ಎಲ್ಲ ಅಂಶಗಳಲ್ಲಿ ಶೇ. 95 ರಿಂದ 96 ಅಂಕ ಪಡೆದು ಈ ಗರಿ ಪಡೆದುಕೊಂಡಿದ್ದೇವೆ. ಹೆರಿಗೆ ನಂತರ ಒಳ್ಳೆ ಚಿಕಿತ್ಸೆ ಕೊಡುತ್ತಿದ್ದೇವೆ. ಇದರಿಂದ ಖುಷಿ ಆಗಿದೆ" ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ ಮಹೇಶ್ ಮಾಹಿತಿ ನೀಡಿದರು.

ಇದನ್ನೂ ಓದಿ: ಭರ್ತಿಯತ್ತ ಕೆಆರ್​ಎಸ್​ ಜಲಾಶಯ: ಮುಂಜಾಗ್ರತ ಕ್ರಮವಾಗಿ ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - 15 THOUSAND CUSECS WATER RELEASED

ಸರ್ಕಾರಿ ಆಸ್ಪತ್ರೆಗೆ ಈ ಗರಿ ಸಿಗಲು ಕಾರಣವೇನು? ಕೆಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಲಕ್ಷ್ಯ ಪ್ರಮಾಣಪತ್ರದಲ್ಲಿ ನೀಡಿದ ಅರ್ಹತೆಗಳನ್ನು ಹೊಂದಲು ಸಮಯ ನೀಡಲಾಗುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಬಳಿಕ ಕೇಂದ್ರದ ತಂಡ ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿತ್ತು. ಆಸ್ಪತ್ರೆಯ ಹೆರಿಗೆ ವಾರ್ಡ್‌, ಶಸ್ತ್ರಚಿಕಿತ್ಸೆ ಕೊಠಡಿಗಳು ವೀಕ್ಷಣೆ ಮಾಡಿದ್ದ ಅಧಿಕಾರಿಗಳ ತಂಡ ಶೇ. 95 ರಿಂದ 96 ಅಂಕ ನೀಡಿತ್ತು.‌ ಈ ಆಸ್ಪತ್ರೆಯ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ಕೊಠಡಿಗಳು ಶುಚಿಯಿಂದ ಕೂಡಿವೆ. ಶಸ್ತ್ರಚಿಕಿತ್ಸಾಪೂರ್ವ ಕೊಠಡಿ, ಶಸ್ತ್ರಚಿಕಿತ್ಸೆ ಕೊಠಡಿ ಅದ್ಭುತವಾಗಿವೆ. ಅಲ್ಲದೇ ಶಸ್ತ್ರಚಿಕಿತ್ಸೆಗೆ, ನಾರ್ಮಲ್ ಡೆಲಿವರಿಗೆ ಒಂದೇ ರೀತಿಯ ಉಡುಪು ಮಾಡಲಾಗಿದೆ. ಸಲಕರಣೆಗಳನ್ನು ಶುಚಿಯಾಗಿಡಲು ಆಟೊಕೇವ್ ಕೊಠಡಿ ನಿರ್ಮಿಸಲಾಗಿದೆ. ಅಲ್ಲದೇ ಶಸ್ತ್ರ ಚಿಕಿತ್ಸಾ ಕೊಠಡಿಗೆ ತೆರಳು ಚಪ್ಪಲಿಗಳ ವ್ಯವಸ್ಥೆ, ಹೆಡ್ ಕ್ಯಾಪ್, ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗೆ ಬಣ್ಣ ಬಣ್ಣದ ಡ್ರೆಸ್ ಕೋಡ್ ಮಾಡಲಾಗಿದ್ದು, ಇದನ್ನು ಧರಿಸಿ ಕೊಠಡಿಗೆ ತೆರಳಬೇಕಾಗಿದೆ. ಇನ್ನೂ ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಪ್ರತ್ಯೇಕ ಉಡುಪು ನೀಡಲಾಗುತ್ತಿದ್ದು, ದಿನಕ್ಕೆ 25-30 ಹೆರಿಗೆ ಮಾಡಲಾಗುತ್ತದೆ. ಹಾಗಾಗಿ ಈ ಗರಿ ದೊರಕಿದೆ.

ಇದನ್ನೂ ಓದಿ: ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level

ಆಸ್ಪತ್ರೆಯ ವೈದ್ಯರು ಹೇಳುವುದೇನು?: "ನ್ಯಾಷನಲ್ ಲೆವಲ್ ಆಪ್ ಹೆಲ್ತ್ ಸಿಸ್ಟಮ್ ರಿಸೋರ್ಸ್ ಸೆಂಟರ್​ನಿಂದ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿ ನಮ್ಮ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆ ಎಂದು ಲಕ್ಷ್ಯ ಪ್ರಮಾಣ ಪತ್ರ ನೀಡಲಾಗಿದೆ. ಅತ್ಯುತ್ತಮ ಆರೋಗ್ಯವಂತ ತಾಯಿ, ಆರೋಗ್ಯವಂತ ಮಗುವನ್ನು ಸಮಾಜಕ್ಕೆ ನೀಡುವಲ್ಲಿ ನಿರತರಾಗಿದ್ದೇವೆ. ಅಲ್ಲದೇ ತಾಯಿ ನವಜಾತ ಶಿಶು ಮರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಕ್ಕಾಗಿ ಅತ್ಯುತ್ತಮ ಆಸ್ಪತ್ರೆ ಎಂಬ ಗರಿ ನೀಡಲಾಗಿದೆ. ಇದು ಹೆಮ್ಮೆಯ ಸಂಗತಿ. ನಾರ್ಮಲ್ ಹೆರಿಗೆ ಹೆಚ್ಚು ಮಾಡಿಸಲಾಗುತ್ತದೆ. ಒಂದು ದಿನಕ್ಕೆ 28 - 32 ಹೆರಿಗೆಗಳನ್ನು ಮಾಡಿಸಲಾಗುತ್ತಿದ್ದು, ಅದರಲ್ಲಿ ಸಹಜ ಹೆರಿಗೆ ಶೇ. 42ರಷ್ಟು ಇದೆ. ಒಂದು ದಿನಕ್ಕೆ ನಾರ್ಮಲ್ ಹೆರಿಗೆ ಸಾಮಾನ್ಯವಾಗಿ 15, ಸಿ ಸೆಕ್ಷನ್ ಹೆರಿಗೆ 10 ಆಗಲಿವೆ‌ ಎಂದು ಮಹಿಳೆಯರ ಮಕ್ಕಳ ಆಸ್ಪತ್ರೆಯ ಹಿರಿಯ ತಜ್ಞೆ ಡಾ. ಭಾರತಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.